ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ: ವಿಡಿಯೋ ವೈರಲ್
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ 9ನೇ ವಾರ್ಡಿನಲ್ಲಿರುವ ಬೀಬಿ ಫಾತೀಮಾ ಆಲಂ ದರ್ಗಾದ ಮೇಲೆ ರಾಷ್ಟ್ರಧ್ವಜ ಹೋಲುವ ತ್ರಿವರ್ಣ ಧ್ವಜದಲ್ಲಿ ಉರ್ದುವಿನಲ್ಲಿ ವ್ಯಾಕ ಬರೆದು ಕಟ್ಟಿರುವಂತಹ ಘಟನೆ ನಡೆದಿದೆ. ಸದ್ಯ ಧಜ್ವ ಕಟ್ಟಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೊಪ್ಪಳ, ಸೆಪ್ಟೆಂಬರ್ 20: ಉರ್ದು ಬರಹ ಹೊಂದಿದ್ದ ರಾಷ್ಟ್ರಧ್ವಜ (national flag) ಹೋಲುವ ತ್ರಿವರ್ಣ ಧ್ವಜವನ್ನು ದರ್ಗಾದ ಮೇಲೆ ಯುವಕನೋರ್ವ ಕಟ್ಟಿರುವಂತಹ ಘಟನೆ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ. ‘ಲಾ ಇಲಾಹ ಇಲ್ಲಲ್ಲಾ, ಮಹಮ್ಮದ್ ರಸೂಲ್ಲ’ ಎಂಬ ಉರ್ದು ಬರಹವನ್ನು ತ್ರಿವರ್ಣ ಧ್ವಜದ ಮೇಲೆ ಬರೆಯಲಾಗಿತ್ತು. ಈದ್ ಮಿಲಾದ್ ಸಂದರ್ಭದಲ್ಲಿ ಯಲಬುರ್ಗಾ ಪಟ್ಟಣದ 9 ನೇ ವಾರ್ಡಿನಲ್ಲಿರುವ ಬೀಬಿ ಫಾತೀಮಾ ಆಲಂ ದರ್ಗಾದ ಮಹ್ಮದ್ ಖಾಜಿ ಎಂಬ ಯುವಕ ಧ್ವಜವನ್ನು ಕಟ್ಟಿದ್ದ. ಘಟನೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಧ್ವಜವನ್ನು ಕೆಳಗೆ ಇಳಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Fri, 20 September 24