AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಗೆಲಾಕ್ಸ್​ಐ ಕಂಪನಿಯಲ್ಲಿ ಇನ್ಫೋಸಿಸ್ ಹೂಡಿಕೆ; ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟ ಐಟಿ ದಿಗ್ಗಜ

Infosys to invest in space startup GalaxEye: ಮಲ್ಟಿಸೆನ್ಸರ್ ಸೆಟಿಲೈಟ್​ಗಳನ್ನು ತಯಾರಿಸುವ ಗೆಲಾಕ್ಸ್​​ಐ ಕಂಪನಿಯಲ್ಲಿ ಇನ್ಫೋಸಿಸ್ ಸುಮಾರು 17 ಕೋಟಿ ರೂ ಹೂಡಿಕೆ ಮಾಡುತ್ತಿದೆ. ಬಾಹ್ಯಾಕಾಶ ಕ್ಷೇತ್ರದ ಉದ್ದಿಮೆಗಳಿಗೆ ತಂತ್ರಜ್ಞಾನ ಪರಿಹಾರ ಅಭಿವೃದ್ಧಿಪಡಿಸಲು ಈ ಬಂಡವಾಳವನ್ನು ಬಳಸಲಾಗುತ್ತದೆ. ಮದ್ರಾಸ್ ಐಐಟಿಯ ಐವರು ವಿದ್ಯಾರ್ಥಿಗಳು ಸೇರಿ ಕಟ್ಟಿರುವ ಗೆಲಾಕ್ಸ್​ಐ ತಯಾರಿಸುವ ಸೆಟಿಲೈಟ್​ಗಳು ರಾಡಾರ್ ಮತ್ತು ಆಪ್ಟಿಕಲ್ ಸೆನ್ಸರ್ ಬಳಸಿ ಹೈ ರೆಸಲ್ಯೂಶನ್ ಇಮೇಜ್ ಸೆರೆಹಿಡಿಯಬಲ್ಲುವು.

ಬೆಂಗಳೂರಿನ ಗೆಲಾಕ್ಸ್​ಐ ಕಂಪನಿಯಲ್ಲಿ ಇನ್ಫೋಸಿಸ್ ಹೂಡಿಕೆ; ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟ ಐಟಿ ದಿಗ್ಗಜ
ಗೆಲಾಕ್ಸ್​ಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 20, 2024 | 3:55 PM

Share

ಬೆಂಗಳೂರು, ಸೆಪ್ಟೆಂಬರ್ 20: ಭಾರತದ ಮಾಹಿತಿ ತಂತ್ರಜ್ಞಾನ ದಿಗ್ಗಜನಾದ ಇನ್ಫೋಸಿಸ್ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಮಲ್ಟಿ ಸೆನ್ಸರ್ ಸೆಟಿಲೈಟ್​ಗಳನ್ನು ತಯಾರಿಸುವ ಬೆಂಗಳೂರಿನ ಗೆಲಾಕ್ಸ್​ಐ (GalaxEye) ಸ್ಟಾರ್ಟಪ್​ವೊಂದರಲ್ಲಿ ಇನ್ಫೋಸಿಸ್ ಹೂಡಿಕೆ ಮಾಡುತ್ತಿದೆ. ಇನ್ಫೋಸಿಸ್ ತನ್ನ ಇನ್ನೋವೇಶನ್ ಫಂಡ್ ಮೂಲಕ ಎರಡು ಮಿಲಿಯನ್ ಡಾಲರ್ (17 ಕೋಟಿ ರೂ) ಹಣವನ್ನು ಗೆಲಾಕ್ಸ್​ಐಗೆ ಬಂಡವಾಳವಾಗಿ ನೀಡುತ್ತಿದೆ. ಬೆಂಗಳೂರಿನ ಈ ಸ್ಟಾರ್ಟಪ್​ನಲ್ಲಿ ಈ ಹೂಡಿಕೆ ಮೂಲಕ ಇನ್ಫೋಸಿಸ್ ಅಲ್ಪ ಷೇರುಪಾಲನ್ನು ಪಡೆಯಲಿದೆ. ಶೇ. 20ಕ್ಕಿಂತಲೂ ಕಡಿಮೆ ಷೇರುಪಾಲು ಇನ್ಫೋಸಿಸ್​ನದ್ದಾಗುತ್ತದೆ. ಸೆಪ್ಟೆಂಬರ್ 30ಕ್ಕೆ ಒಪ್ಪಂದ ಅಂತಿಮವಾಗಬಹುದು.

ಇನ್ಫೋಸಿಸ್ ಮತ್ತು ಗೆಲಾಕ್ಸ್​​ಐ ಸಂಸ್ಥೆಗಳು ಜೊತೆಯಾಗಿ ಸೇರಿ ಹೊಸ ಸ್ಪೇಸ್ ಟೆಕ್ನಾಲಜಿ ಪರಿಹಾರಗಳನ್ನು ಅಭಿವೃದ್ದಿಪಡಿಸಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿರುವ ಕಂಪನಿಗಳಿಗೆ ಇದು ಸಹಾಯಕವಾಗಲಿದೆ.

ಇದನ್ನೂ ಓದಿ: ಲಕ್ಷಾಂತರ ಗ್ರಾಹಕರನ್ನು ಕಳೆದುಕೊಂಡ ಜಿಯೋ, ವೊಡಾಫೋನ್, ಏರ್ಟೆಲ್; ಏಕೈಕ ವಿನ್ನರ್ ಬಿಎಸ್ಸೆನ್ನೆಲ್

2021ರಲ್ಲಿ ಐಐಟಿ ಮದ್ರಾಸ್​ನ ಐವರು ವಿದ್ಯಾರ್ಥಿಗಳು ಸೇರಿ ಬೆಂಗಳೂರಿನಲ್ಲಿ ಗೆಲಾಕ್ಸ್​ಐ ಸ್ಟಾರ್ಟಪ್ ಸ್ಥಾಪಿಸಿದ್ದಾರೆ. ಎಲ್ಲಾ ಹವಾಮಾನದಲ್ಲೂ ರಾಡಾರ್ ಮತ್ತು ಆಪ್ಟಿಕಲ್ ಸೆನ್ಸಾರ್ ಬಳಸಿ ಹೈ ರೆಸಲ್ಯೂಶನ್ ಇಮೇಜ್​ಗಳನ್ನು ಸೆರೆಹಿಡಿಯಬಲ್ಲಂತಹ ಸೆಟಿಲೈಟ್​ಗಳನ್ನು ಇದು ತಯಾರಿಸಬಲ್ಲುದು. ಕೃಷಿ, ರಕ್ಷಣಾ ಕ್ಷೇತ್ರದಿಂದ ಹಿಡಿದು ನಗರ ಯೋಜನೆ, ವಿಪತ್ತು ನಿರ್ವಹಣೆವರೆಗೂ ವಿವಿಧ ಕ್ಷೇತ್ರಗಳಲ್ಲಿ ಇದರ ತಂತ್ರಜ್ಞಾನ ಬಳಕೆ ಆಗಬಲ್ಲುದು.

ಗೆಲಾಕ್ಸ್​ಐ ಸಂಸ್ಥೆ ಇತ್ತೀಚೆಗಷ್ಟೇ ವಿವಿಧ ಕಂಪನಿಗಳಿಂದ ಫಂಡಿಂಗ್ ಪಡೆದಿತ್ತು. ಮೇಲಾ ವೆಂಚರ್ಸ್, ಸ್ಪೆಷಾಲೆ ಇನ್ವೆಸ್ಟ್, ಐಡಿಯಾ ಫೋರ್ಜ್, ರೈನ್​ಮ್ಯಾಟರ್ ಮೊದಲಾದ ಸಂಸ್ಥೆಗಳ ಮೂಲಕ 6.5 ಮಿಲಿಯನ್ ಡಾಲರ್ (ಸುಮಾರು 55 ಕೋಟಿ ರೂ) ಬಂಡವಾಳ ಪಡೆದಿತ್ತು. 2025ರಲ್ಲಿ ದೃಷ್ಟಿ ಮಿಷನ್ ಎನ್ನುವ ಸೆಟಿಲೈಟ್ ಅನ್ನು ಉಡಾವಣೆ ಮಾಡಲಿದೆ. ಆ ಕಾರ್ಯಕ್ಕೆ ಫಂಡಿಂಗ್ ಬಳಸಿಕೊಳ್ಳಲಿದೆ. ಇನ್ಫೋಸಿಸ್​ನಿಂದ ಸಿಕ್ಕಿರುವ ಬಂಡವಾಳವನ್ನು ಎರಡೂ ಕಂಪನಿಗಳು ಜಂಟಿಯಾಗಿ ಟೆಕ್ನಾಲಜಿ ಸಲ್ಯೂಶನ್ಸ್​ಗೆ ಬಳಸಲಿವೆ.

ಇದನ್ನೂ ಓದಿ: ಮಾಲ್ಡೀವ್ಸ್ ಸಂಕಷ್ಟಕ್ಕೆ ಭಾರತದಿಂದ ನೆರವು; ಎರಡನೇ ಬಾರಿ ಟ್ರೆಷರಿ ಬಿಲ್ ಪಾವತಿಗೆ ಗಡುವು ವಿಸ್ತರಣೆ

ಸ್ಪೇಸ್ ಟೆಕ್ನಾಲಜಿಗೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಅನಾಲಿಟಿಕ್ಸ್ ಎರಡೂ ಸಂಯೋಜನೆಗೊಂಡರೆ ದತ್ತಾಂಶ ಆಧಾರಿತವಾಗಿ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಕ್ಷೇತ್ರದ ಉದ್ದಿಮೆಗಳಿಗೆ ಸಹಾಯವಾಗಲಿದೆ ಎಂಬುದು ಇನ್ಫೋಸಿಸ್​ನ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ