Cheaper: ಉತ್ಕೃಷ್ಟ ಗುಣಮಟ್ಟದ ಸ್ವಿಸ್ ವಾಚು, ಚಾಕೊಲೇಟ್​ಗಳು ಇನ್ಮುಂದೆ ಕಡಿಮೆ ಬೆಲೆಗೆ; ಭಾರತ-ಇಎಫ್​ಟಿಎ ಒಪ್ಪಂದ ಪರಿಣಾಮ

India Free Trade Agreement with EFTA group: ಸ್ವಿಟ್ಜರ್​ಲ್ಯಾಂಡ್, ನಾರ್ವೆ, ಐಸ್​ಲ್ಯಾಂಡ್, ಲಿಕ್​ಸ್ಟನ್​ಸ್ಟೈನ್ ದೇಶಗಳಿರುವ ಇಎಫ್​ಟಿಎ ಗುಂಪಿನೊಂದಿಗೆ ಭಾರತ ನಿನ್ನೆ ಮಾರ್ಚ್ 10ರಂದು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ನಾಲ್ಕು ದೇಶಗಳು, ಅದರಲ್ಲೂ ಸ್ವಿಟ್ಜರ್​ಲ್ಯಾಂಡ್ ದೇಶ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಸ್ವಿಸ್ ವಾಚು, ಚಾಕೊಲೇಟ್ ಇತ್ಯಾದಿಗಳು ಭಾರತದಲ್ಲಿ ಇನ್ಮುಂದೆ ಕಡಿಮೆ ಬೆಲೆಗೆ ಸಿಗಬಹುದು.

Cheaper: ಉತ್ಕೃಷ್ಟ ಗುಣಮಟ್ಟದ ಸ್ವಿಸ್ ವಾಚು, ಚಾಕೊಲೇಟ್​ಗಳು ಇನ್ಮುಂದೆ ಕಡಿಮೆ ಬೆಲೆಗೆ; ಭಾರತ-ಇಎಫ್​ಟಿಎ ಒಪ್ಪಂದ ಪರಿಣಾಮ
ಸ್ವಿಸ್ ವಾಚುಗಳು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 11, 2024 | 10:34 AM

ನವದೆಹಲಿ, ಮಾರ್ಚ್ 11: ನಾಲ್ಕು ದೇಶಗಳ ಐರೋಪ್ಯ ಮುಕ್ತ ವ್ಯಾಪಾರ ಸಂಘಟನೆಯೊಂದಿಗೆ (EFTA- European Free Trade Association) ಭಾರತ ನಿನ್ನೆ ಒಪ್ಪಂದ ಮಾಡಿಕೊಂಡಿದ್ದು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಸ್ವಿಟ್ಜರ್​ಲ್ಯಾಂಡ್, ಐಸ್​ಲ್ಯಾಂಡ್, ನಾರ್ವೆ ಮತ್ತು ಲಿಕ್​ಸ್ಟನ್​ಸ್ಟೈನ್ (Liechtenstein) ದೇಶಗಳು ಈ ಗುಂಪಿನಲ್ಲಿವೆ. ಈ ದೇಶಗಳ ಜೊತೆ ಭಾರತ ಮೊದಲಿಂದಲೂ ವ್ಯಾಪಾರ ವಹಿವಾಟು ನಡೆಸುತ್ತಾ ಬಂದಿದೆಯಾದರೂ ಈ ಒಪ್ಪಂದದ ಬಳಿಕ ವ್ಯಾಪಾರವು ಬಹುತೇಕ ಅನಿರ್ಬಂಧಿತವಾಗಿರಲಿದೆ. ಅಂದರೆ, ಆ ನಾಲ್ಕು ದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಬಹುತೇಕ ಸರಕುಗಳಿಗೆ ಯಾವುದೇ ಸುಂಕ ವಿಧಿಸುವುದಿಲ್ಲ. ಅಥವಾ ತೀರಾ ಕಡಿಮೆ ಆಮದು ಸುಂಕ ಇರುತ್ತದೆ. ಈ ನಾಲ್ಕು ದೇಶಗಳು, ಅದರಲ್ಲೂ ಸ್ವಿಟ್ಜರ್​ಲ್ಯಾಂಡ್ ದೇಶ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಭಾರತಕ್ಕೆ ಇನ್ಮುಂದೆ ಕಡಿಮೆ ಬೆಲೆಗೆ ಈ ಉತ್ಪನ್ನಗಳು ಲಭಿಸಲಿವೆ.

ಸ್ವಿಸ್ ವಾಚು, ಚಾಕೊಲೇಟ್ ಬಹಳ ಜನಪ್ರಿಯ

ಸ್ವಿಸ್ ವಾಚುಗಳು ವಿಶ್ವಾದ್ಯಂತ ಹೆಸರುವಾಸಿಯಾಗಿವೆ. ಬಹಳ ಉತ್ಕೃಷ್ಟ ಗುಣಮಟ್ಟದ ವಾಚುಗಳಾಗಿರುತ್ತವೆ. ಹಾಗೆಯೇ ಸ್ವಿಸ್ ಚಾಕೊಲೇಟ್​ಗಳೂ ಕೂಡ ಬಹಳ ಜನಪ್ರಿಯವಾಗಿವೆ. ಭಾರತದಲ್ಲಿ ಚಾಕೊಲೇಟ್ ಆಮದಿನ ಮೇಲೆ ಶೇ. 30ರಷ್ಟು ಸುಂಕ ಹಾಕಲಾಗುತ್ತದೆ. ಹಾಗೆಯೇ, ಸ್ವಿಸ್ ವಾಚುಗಳಿಗೆ ಶೇ. 20ರಷ್ಟು ಆಮದು ಸುಂಕ ಇರುತ್ತದೆ. ಈಗ ಮುಕ್ತ ವ್ಯಾಪಾರ ಒಪ್ಪಂದ ಆಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸ್ವಿಸ್ ವಾಚು, ಚಾಕೊಲೇಟ್ ಇತ್ಯಾದಿಗಳಿಗೆ ಆಮದು ಸುಂಕ ಇರುವುದಿಲ್ಲ.

ಇದನ್ನೂ ಓದಿ: ಯೂರೋಪಿಯನ್ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತದಿಂದ ಸಹಿ; ಇದು ಎಲ್ಲರಿಗೂ ಗೆಲುವು ತರುವಂಥದ್ದು ಎಂದ ಪ್ರಧಾನಿ ಮೋದಿ

ಸ್ವಿಟ್ಜರ್​ಲ್ಯಾಂಡ್ ಹಾಗು ಇತರ ಇಎಫ್​ಟಿಎ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುವ ಇತರ ಪ್ರಮುಖ ಉತ್ಪನ್ನಗಳೆಂದರೆ ಚಿನ್ನ, ಔಷಧ, ಹಡಗು, ದೋಣಿ ಮೊದಲಾದವು ಸೇರಿವೆ.

ಭಾರತ ಈ ನಾಲ್ಕು ದೇಶಗಳಿಗೆ ಒಡವೆ, ಹರಳು, ರಾಸಾಯನಿಕ ಇತ್ಯಾದಿಯನ್ನು ರಫ್ತು ಮಾಡುತ್ತದೆ. ಆದರೆ, ಭಾರತಕ್ಕೆ ಇರುವ ವ್ಯಾಪಾರ ಕೊರತೆ ತೀರಾ ಹೆಚ್ಚಿದೆ. ಅದರಲ್ಲೂ ಸ್ವಿಟ್ಜರ್​ಲ್ಯಾಂಡ್ ಜೊತೆಗಿನ ಭಾರತದ ವ್ಯಾಪಾರದಲ್ಲಿ ಕೊಳ್ಳುವುದೇ ಹೆಚ್ಚು. ಈ ಎರಡು ದೆಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ 2022-23ರಲ್ಲಿ 17.14 ಬಿಲಿಯನ್ ಡಾಲರ್ ಇತ್ತು. ಇದರಲ್ಲಿ ಭಾರತ ರಫ್ತು ಮಾಡಿದ್ದು 1.34 ಬಿಲಿಯನ್ ಡಾಲರ್​ನಷ್ಟಾದರೆ, ಆಮದು ಮಾಡಿಕೊಂಡಿದ್ದು 15.79 ಬಿಲಿಯನ್ ಡಾಲರ್.

ಇದನ್ನೂ ಓದಿ: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್​ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ

ಮುಕ್ತ ವ್ಯಾಪಾರ ಒಪ್ಪಂದದ ಬಳಿಕ ಭಾರತಕ್ಕೆ ಹೂಡಿಕೆ ಹರಿದುಬರುವ ನಿರೀಕ್ಷೆ ಇದ್ದು, ಇಲ್ಲಿಯೇ ಉತ್ಪಾದನೆ ಹೆಚ್ಚಾಗುವ ಸಾಧ್ಯತೆ ಇದೆ. ನಿರೀಕ್ಷಿಸಿದಂತೆ ಇದು ಆದಲ್ಲಿ ಭಾರತ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಅವಕಾಶ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ