AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Forex Reserves: ಮತ್ತೆ ಏರಿಕೆಯ ಲಯಕ್ಕೆ ಬಂದ ಫಾರೆಕ್ಸ್ ರಿಸರ್ವ್ಸ್; 690 ಬಿಲಿಯನ್ ಡಾಲರ್ ಗಡಿ ಮುಟ್ಟಿದ ಮೀಸಲು ನಿಧಿ

Forex reserves of India on May 9th: ಭಾರತದ ಫಾರೆಕ್ಸ್ ರಿಸರ್ವ್ಸ್ ಮೇ 9ರಂದು ಅಂತ್ಯಗೊಂಡ ವಾರದಲ್ಲಿ 4.5 ಬಿಲಿಯನ್ ಡಾಲರ್​​​ನಷ್ಟು ಹೆಚ್ಚಳ ಕಂಡಿದೆ. ಇದರೊಂದಿಗೆ ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್ 690.62 ಬಿಲಿಯನ್ ಡಾಲರ್ ಆಗಿದೆ. ವಿದೇಶೀ ಕರೆನ್ಸಿ ಆಸ್ತಿ ಮತ್ತು ಚಿನ್ನದ ಮೀಸಲು ಎರಡೂ ಕೂಡ ಆ ವಾರ ಹೆಚ್ಚು ಶೇಖರಿಸಲಾಗಿದೆ. ಚೀನಾ, ಜಪಾನ್, ಸ್ವಿಟ್ಜರ್​​ಲ್ಯಾಂಡ್ ನಂತರ ಭಾರತ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿದೆ.

Forex Reserves: ಮತ್ತೆ ಏರಿಕೆಯ ಲಯಕ್ಕೆ ಬಂದ ಫಾರೆಕ್ಸ್ ರಿಸರ್ವ್ಸ್; 690 ಬಿಲಿಯನ್ ಡಾಲರ್ ಗಡಿ ಮುಟ್ಟಿದ ಮೀಸಲು ನಿಧಿ
ಫಾರೆಕ್ಸ್ ರಿಸರ್ವ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 16, 2025 | 6:59 PM

Share

ನವದೆಹಲಿ, ಮೇ 16: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex reserves) 690.62 ಬಿಲಿಯನ್ ಡಾಲರ್​​ಗೆ ಏರಿದೆ. ಮೇ 9ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 4.5 ಬಿಲಿಯನ್ ಡಾಲರ್​​ನಷ್ಟು ಏರಿಕೆ ಆಗಿದೆ. ಹಿಂದಿನ ವಾರದಲ್ಲಿ 2.06 ಬಿಲಿಯನ್ ಡಾಲರ್​​ನಷ್ಟು ಕುಸಿತಗೊಂಡಿದ್ದ ಫಾರೆಕ್ಸ್ ರಿಸರ್ವ್ಸ್ ಈಗ ಮತ್ತೆ ಏರಿಕೆಯ ಹಾದಿಗೆ ಮರಳಿದೆ. 2024ರ ಸೆಪ್ಟೆಂಬರ್ ಕೊನೆಯಲ್ಲಿ ವಿದೇಶೀ ವಿನಿಮಯ ಮೀಸಲು ನಿಧಿ 704.885 ಬಿಲಿಯನ್ ಡಾಲರ್ ಮುಟ್ಟಿತ್ತು. ಅದು ಭಾರತದ ಇತಿಹಾಸದಲ್ಲೇ ಸಾರ್ವಕಾಲಿಕ ಫಾರೆಕ್ಸ್ ಮಟ್ಟವಾಗಿದೆ. ಈಗ ಆ ಮಟ್ಟಕ್ಕೆ ಸಮೀಪುವತ್ತ ಸಾಗಲಾಗುತ್ತಿದೆ.

ಮೇ 9ರ ವಾರದಲ್ಲಿ ಏರಿಕೆಯಾದ 4.5 ಬಿಲಿಯನ್ ಡಾಲರ್ ಫಾರೆಕ್ಸ್ ರಿಸರ್ವ್ಸ್​​​ನಲ್ಲಿ ವಿದೇಶೀ ಕರೆನ್ಸಿ ಆಸ್ತಿ 196 ಮಿಲಿಯನ್ ಡಾಲರ್​​​ನಷ್ಟಿದೆ. ಚಿನ್ನದ ರಿಸರ್ವ್ಸ್ 4.5 ಮಿಲಿಯನ್ ಡಾಲರ್ ಸಂಗ್ರಹ ಆಗಿದೆ. ಆದರೆ, ಎಸ್​​ಡಿಆರ್​​ಗಳು 26 ಮಿಲಿಯನ್ ಡಾಲರ್​​ನಷ್ಟು ಕಡಿಮೆ ಆದರೆ, ಐಎಂಎಫ್​​ನಲ್ಲಿರುವ ರಿಸರ್ವ್ ಪೊಸಿಶನ್ ಕೂಡ 134 ಮಿಲಿಯನ್ ಡಾಲರ್​​​ನಷ್ಟು ತಗ್ಗಿದೆ.

ಇದನ್ನೂ ಓದಿ: ಭಾರತ ಬಿಟ್ಟು ಅಮೆರಿಕದಲ್ಲಿ ಐಫೋನ್ ತಯಾರಾದರೆ ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಆಗುತ್ತೆ ಗೊತ್ತಾ?

ಭಾರತದ ಫಾರೆಕ್ಸ್ ರಿಸರ್ವ್ಸ್, ಮೇ 9ರವರೆಗೆ:

ಒಟ್ಟು ಫಾರೆಕ್ಸ್ ರಿಸರ್ವ್ಸ್: 690.62 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್: 581.37 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 86.33 ಬಿಲಿಯನ್ ಡಾಲರ್
  • ಎಸ್​​ಡಿಆರ್: 18.53 ಬಿಲಿಯನ್ ಡಾಲರ್
  • ಐಎಂಎಫ್ ರಿಸರ್ವ್: 4.37 ಬಿಲಿಯನ್ ಡಾಲರ್

ಅಮೆರಿಕದಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಫಾರೆಕ್ಸ್ ರಿಸರ್ವ್ಸ್

ಅಮೆರಿಕವು ವಿಶ್ವದ ಅತಿದೊಡ್ಡ ಆರ್ಥಿಕತೆಯಾದರೂ ಅದರ ಫಾರೆಕ್ಸ್ ರಿಸರ್ವ್ಸ್ ಇರುವುದ 243 ಬಿಲಿಯನ್ ಡಾಲರ್​​​ನಷ್ಟು ಮಾತ್ರ. ಅದರ ಡಾಲರ್ ಕರೆನ್ಸಿಯೇ ಅಂತಾರಾಷ್ಟ್ರೀಯ ವ್ಯಾಪಾರದ ಪ್ರಧಾನ ಕರೆನ್ಸಿಯಾಗಿರುವುದರಿಂದ ವಿದೇಶೀ ವಿನಿಮಯ ಮೀಸಲು ನಿಧಿ ಅಷ್ಟಾಗಿ ಅಮೆರಿಕಕ್ಕೆ ಬೇಕಾಗುವುದಿಲ್ಲ.

ಚೀನಾ ಬಳಿ ಅತಿಹೆಚ್ಚು ಫಾರೆಕ್ಸ್ ನಿಧಿ ಇದೆ. 3.57 ಟ್ರಿಲಿಯನ್ ಡಾಲರ್​ನಷ್ಟು ಮೀಸಲು ನಿಧಿ ಹೊಂದಿದೆ. ಕಳೆದ 14 ವರ್ಷಗಳಿಂದಲೂ ಈ ವಿಷಯದಲ್ಲಿ ಚೀನಾ ನಂಬರ್ ಒನ್. ಜಪಾನ್ ಕೂಡ ಒಂದು ಟ್ರಿಲಿಯನ್ ಡಾಲರ್​​ಗಿಂತ ಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿದೆ. ಭಾರತವು ನಾಲ್ಕನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ: ಸದಸ್ಯರ ಸಂಖ್ಯೆ 7.65 ಲಕ್ಷಕ್ಕೆ ಏರಿಕೆ; ಯಾರಿಗೆ ಲಾಭ ಈ ಪಿಂಚಣಿ? ಇಲ್ಲಿದೆ ಮಾಹಿತಿ

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳು

  1. ಚೀನಾ: 3.57 ಟ್ರಿಲಿಯನ್ ಡಾಲರ್
  2. ಜಪಾನ್: 1.24 ಟ್ರಿಲಿಯನ್ ಡಾಲರ್
  3. ಸ್ವಿಟ್ಜರ್​​ಲ್ಯಾಂಡ್: 952 ಬಿಲಿಯನ್ ಡಾಲರ್
  4. ಭಾರತ: 690 ಬಿಲಿಯನ್ ಡಾಲರ್
  5. ರಷ್ಯಾ: 620 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ