Video: ನ್ಯೂಯಾರ್ಕ್ನ ಬ್ರೂಕ್ಲಿನ್ ಸೇತುವೆಗೆ 200 ಪ್ರಯಾಣಿಕರಿದ್ದ ಮೆಕ್ಸಿಕನ್ ನೌಕಾಪಡೆಯ ಹಡಗು ಡಿಕ್ಕಿ
200ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮೆಕ್ಸಿಕನ್ ನೌಕಾಪಡೆಯ ಹಡಗು ನ್ಯೂಯಾರ್ಕ್ ನಗರದ ಬ್ರೂಕ್ಲಿನ್ ಸೇತುವೆಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 19 ಜನರು ಗಾಯಗೊಂಡಿದ್ದಾರೆ, ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದರೆ ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಪಘಾತದ ಸಮಯದಲ್ಲಿ ಬಿಳಿ ಸಮವಸ್ತ್ರ ಧರಿಸಿದ್ದ ಹಲವರು ಕೆಳಗೆ ಬೀಳಲಾರಂಭಿಸಿದರು.
ನ್ಯೂಯಾರ್ಕ್: 200ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮೆಕ್ಸಿಕನ್ ನೌಕಾಪಡೆಯ ಹಡಗು ನ್ಯೂಯಾರ್ಕ್ ನಗರದ ಬ್ರೂಕ್ಲಿನ್ ಸೇತುವೆಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 19 ಜನರು ಗಾಯಗೊಂಡಿದ್ದಾರೆ, ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದರೆ ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಪಘಾತದ ಸಮಯದಲ್ಲಿ ಬಿಳಿ ಸಮವಸ್ತ್ರ ಧರಿಸಿದ್ದ ಹಲವರು ಕೆಳಗೆ ಬೀಳಲಾರಂಭಿಸಿದರು. ಕುವಾಹ್ಟೆಮೊಕ್ ಮೆಕ್ಸಿಕನ್ ನೌಕಾಪಡೆಯ ತರಬೇತಿ ಹಡಗು. ಇದು 15 ದೇಶಗಳಲ್ಲಿ 22 ಬಂದರುಗಳಿಗೆ ಭೇಟಿ ನೀಡಬೇಕಿತ್ತು. ಕೆಡೆಟ್ ತರಬೇತಿ ಹಡಗು ನ್ಯೂಯಾರ್ಕ್ ಬಂದರಿನಿಂದ ಹೊರಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos