AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inflation: ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಎಷ್ಟಿರಬಹುದು? ವಿವಿಧ ಆರ್ಥಿಕ ತಜ್ಞರು ಮಾಡಿರುವ ಅಂದಾಜು ಇದು

India Inflation Possibility In 2024 February: ಫೆಬ್ರುವರಿ ತಿಂಗಳಲ್ಲಿ ಹಣದುಬ್ಬರ ದರ ಶೇ. 5.1ರಷ್ಟು ಇರಬಹುದು ಎಂಬುದು 15 ವಿವಿಧ ಸಂಸ್ಥೆಗಳ ಆರ್ಥಿಕ ತಜ್ಞರ ಸರಾಸರಿ ಲೆಕ್ಕಾಚಾರವಾಗಿದೆ. ಜನವರಿ ತಿಂಗಳಲ್ಲೂ ಹಣದುಬ್ಬರ ಶೇ. 5.1ರಷ್ಟು ಇತ್ತು. ಆಹಾರ ವಸ್ತುಗಳ ಬೆಲೆ ಇಳಿಕೆ ಕಾಣದೇ ಇರುವುದು ಫೆಬ್ರುವರಿಯಲ್ಲಿ ಹಣದುಬ್ಬರ ಇಳಿಕೆ ಸಾಧ್ಯವಾಗದೇ ಹೋಗಿದ್ದಿರಬಹುದು ಎನ್ನಲಾಗಿದೆ. ಮಾರ್ಚ್ 12ರಂದು ಸರ್ಕಾರದಿಂದ ಅಧಿಕೃತವಾಗಿ ಹಣದುಬ್ಬರದ ದತ್ತಾಂಶ ಬಿಡುಗಡೆ ಆಗಲಿದೆ.

Inflation: ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಎಷ್ಟಿರಬಹುದು? ವಿವಿಧ ಆರ್ಥಿಕ ತಜ್ಞರು ಮಾಡಿರುವ ಅಂದಾಜು ಇದು
ಹಣದುಬ್ಬರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 11, 2024 | 11:41 AM

Share

ನವದೆಹಲಿ, ಮಾರ್ಚ್ 11: ಜನವರಿಯಲ್ಲಿ ಶೇ. 5.1ರಷ್ಟಿರುವ ಹಣದುಬ್ಬರ ಫೆಬ್ರುವರಿಯಲ್ಲೂ ಮುಂದುವರಿದಿರುವ ಸಾಧ್ಯತೆ ಇದೆ ಎಂದು ವಿವಿಧ ಆರ್ಥಿಕ ತಜ್ಞರು (economists poll) ಅಭಿಪ್ರಾಯಪಟ್ಟಿದ್ದಾರೆ. ರಾಯ್ಟರ್ಸ್ ನಡೆಸಿದ 15 ಆರ್ಥಿಕ ತಜ್ಞರ ಸಮೀಕ್ಷೆ ಪ್ರಕಾರ ಫೆಬ್ರುವರಿ ತಿಂಗಳಲ್ಲಿ ಹಣದುಬ್ಬರ (India inflation) ಶೇ. 5.1ರಷ್ಟಿರಬಹುದು ಎನ್ನಲಾಗಿದೆ. ಇದು ನಿಜವೇ ಆದಲ್ಲಿ ಆರ್​ಬಿಐ ನಿಗದಿ ಮಾಡಿರುವ ಹಣದುಬ್ಬರ ತಾಳಿಕೆ ಮಿತಿಯಾದ ( ಶೇ. 6ರ ಒಳಗೆ ಹಣದುಬ್ಬರ ಇರಲಿದೆ. ಮಾರ್ಚ್ 12, ಮಂಗಳವಾರ ಸಂಜೆ ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಫೆಬ್ರುವರಿ ತಿಂಗಳ ರೀಟೇಲ್ ಹಣದುಬ್ಬರ ಮತ್ತು ಐಐಪಿ ದತ್ತಾಂಶವನ್ನು ಬಿಡುಗಡೆ ಮಾಡಲಿದೆ. ಅದಕ್ಕೆ ಮುಂಚೆ ಆರ್ಥಿಕ ತಜ್ಞರು ದೇಶದ ವಿವಿಧ ಸೂಚಕಗಳನ್ನು ಆಧರಿಸಿ ಹಣದುಬ್ಬರ ಎಷ್ಟಿರಬಹುದು ಎಂದು ಅಂದಾಜು ಮಾಡಿದ್ದಾರೆ. ಮಾರ್ಚ್ 8ರಂದು ಈ ಸಮೀಕ್ಷೆ ನಡೆದಿದೆ.

ಆರ್ಥಿಕ ತಜ್ಞರ ಸಮೀಕ್ಷೆ ಪ್ರಕಾರ ಫೆಬ್ರುವರಿಯಲ್ಲಿ ರೀಟೇಲ್ ಹಣದುಬ್ಬರ, ಅಥವಾ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಶೇ. 5.1ರಲ್ಲಿ ಮುಂದುವರಿಯಬಹುದು. ಇಂಡಸ್ಟ್ರಿಯಲ್ ಪ್ರೊಡಕ್ಷನ್ ಅಥವಾ ಐಐಪಿ ದರ ಶೇ. 4.2ರಷ್ಟಾಗಬಹುದು ಎಂದಿದೆ. ಶೇ. 4.2ಎಂದರೆ ಕಳೆದ ಮೂರು ತಿಂಗಳಲ್ಲೇ ಗರಿಷ್ಠ ಮಟ್ಟವೆನಿಸುತ್ತದೆ.

ಇದನ್ನೂ ಓದಿ: ಉತ್ಕೃಷ್ಟ ಗುಣಮಟ್ಟದ ಸ್ವಿಸ್ ವಾಚು, ಚಾಕೊಲೇಟ್​ಗಳು ಇನ್ಮುಂದೆ ಕಡಿಮೆ ಬೆಲೆಗೆ; ಭಾರತ-ಇಎಫ್​ಟಿಎ ಒಪ್ಪಂದ ಪರಿಣಾಮ

ಆಹಾರ ವಸ್ತುಗಳ ಬೆಲೆ ಇಳಿಕೆ ಆಗಿಲ್ಲ…

ಜನವರಿಯಲ್ಲಿ ಹಣದುಬ್ಬರ ಶೇ 5.10ಕ್ಕೆ ಇಳಿಯಲು ಆಹಾರವಸ್ತುಗಳ ಬೆಲೆ ಇಳಿಕೆ ಪ್ರಮುಖ ಕಾರಣವಾಗಿತ್ತು. ಫೆಬ್ರುವರಿಯಲ್ಲಿ ಆಹಾರವಸ್ತುಗಳ ಬೆಲೆ ತುಸು ಹೆಚ್ಚಳ ಆಗಿರುವುದು ಹಣದುಬ್ಬರ ನಿಯಂತ್ರಣ ಕಷ್ಟಸಾಧ್ಯವಾಗಿದೆ. ಈರುಳ್ಳಿ, ಟೊಮೆಟೋ, ಆಲೂಗಡ್ಡೆ ಇತ್ಯಾದಿ ಸಾಮಾನ್ಯ ಬಳಕೆಯ ತರಕಾರಿಗಳ ಬೆಲೆಯಲ್ಲಿ ಜನವರಿಯಿಂದ ಫೆಬ್ರುವರಿಗೆ ಹೆಚ್ಚಿನ ವ್ಯತ್ಯಯವಾಗಿಲ್ಲ. ಆದರೆ, ಇತರ ತರಕಾರಿಗಳ ಬೆಲೆ ಏರಿಕೆ ಆಗಿದೆ. ಇದರಿಂದಾಗಿ ಫೆಬ್ರುವರಿಯಲ್ಲಿ ಹಣದುಬ್ಬರವು ಜನವರಿಯಲ್ಲಿನದಕ್ಕಿಂತ ಕಡಿಮೆಗೊಂಡಿರಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ.

ಹಣದುಬ್ಬರ ಶೇ. 5.10ಕ್ಕಿಂತ ಕಡಿಮೆ ಇರಬಹುದು ಎಂದು 9 ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ. ಹಣದುಬ್ಬರ ಶೇ. 5.10ಕ್ಕಿಂತ ಹೆಚ್ಚಿರಬಹುದು ಎಂಬುದು ಮೂವರು ಆರ್ಥಿಕ ತಜ್ಞರ ಅನಿಸಿಕೆ. ಬಾರ್ಕ್ಲೇಸ್ ಸಂಸ್ಥೆಯ ಆರ್ಥಿಕ ತಜ್ಞರು ಫೆಬ್ರುವರಿಯಲ್ಲಿ ಹಣದುಬ್ಬರ ಶೇ. 5.3ರಷ್ಟಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಪಿರಾಮಲ್ ಎಂಟರ್​ಪ್ರೈಸಸ್​ನ ಆರ್ಥಿಕ ತಜ್ಞರು ಹಣದುಬ್ಬರ ಶೇ. 5ಕ್ಕಿಂತ ಕಡಿಮೆ ಇರಬಹುದು ಎಂದಿದ್ದಾರೆ.

ಮಾರ್ಚ್ 12, ಮಂಗಳವಾರ ಸಂಜೆ ಸರ್ಕಾರದಿಂದ ಅಧಿಕೃತ ದತ್ತಾಂಶ ಬಿಡುಗಡೆ ಆಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ