AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೇ ಆದರೆ ಮುಂದೆ ಅಮೆರಿಕ ದಿವಾಳಿ ಆಗುತ್ತೆ: ಸರ್ಕಾರವನ್ನು ಎಚ್ಚರಿಸಿದ ಉದ್ಯಮಿ ಇಲಾನ್ ಮಸ್ಕ್

Elon Musk Warns USA of Overspending: ಅಮೆರಿಕ ಸರ್ಕಾರ ಅತಿಯಾಗಿ ವ್ಯಯಿಸುತ್ತಿದೆ. ಇದು ಹೀಗೇ ಮುಂದುವರಿದರೆ ದೇಶ ದಿವಾಳಿ ಆಗುತ್ತೆ ಎಂದು ಉದ್ಯಮಿ ಇಲಾನ್ ಮಸ್ಕ್ ಎಚ್ಚರಿಸಿದ್ದಾರೆ. ಅಮೆರಿಕ ಸರ್ಕಾರದ ಬಡ್ಡಿ ಪಾವತಿ ಬಾಧ್ಯತೆಯು ಶೇ. 63ರಷ್ಟು ಆದಾಯ ತೆರಿಗೆ ಹಣಕ್ಕೆ ಸಮವಾಗಿದೆ ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಇನ್ನೊಬ್ಬರು, ಮುಂದೊಂದು ದಿನ ಎಲ್ಲಾ ಆದಾಯ ತೆರಿಗೆ ಹಣ ಬಡ್ಡಿ ಕಟ್ಟಲೇ ಸರಿಹೋಗುತ್ತದೆ ಎಂದಿದ್ದಾರೆ. ಇದಕ್ಕೆ ಇಲಾನ್ ಮಸ್ಕ್ ದಿವಾಳಿ ಮಾತುಗಳನ್ನಾಡಿದ್ದಾರೆ.

ಹೀಗೇ ಆದರೆ ಮುಂದೆ ಅಮೆರಿಕ ದಿವಾಳಿ ಆಗುತ್ತೆ: ಸರ್ಕಾರವನ್ನು ಎಚ್ಚರಿಸಿದ ಉದ್ಯಮಿ ಇಲಾನ್ ಮಸ್ಕ್
ಇಲಾನ್ ಮಸ್ಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 13, 2024 | 11:15 AM

Share

ನವದೆಹಲಿ, ಮಾರ್ಚ್ 13: ವಿಶ್ವದ ಅಗ್ರ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಇಲಾನ್ ಮಸ್ಕ್ (Elon Musk) ನೇರಾ ನೇರ ಮಾತುಗಳಿಗೆ ಹೆಸರುವಾಸಿಯಾದವರು. ಬಿಸಿನೆಸ್​ಮ್ಯಾನ್​ಗಳು ಬಹಳಷ್ಟು ಮುಲಾಜಿಗೆ ಒಳಗಾಗುತ್ತಾರೆ. ಇದಕ್ಕೆ ಮಸ್ಕ್ ಅಪವಾದ. ತಮಗೆ ಅನಿಸಿದ್ದನ್ನು ಯಾವ ಮುಲಾಜೂ ಇಲ್ಲದೇ ಹೇಳುತ್ತಾರೆ. ಇದೀಗ ಅಮೆರಿಕ ದಿವಾಳಿ (Bankrupt) ಎದ್ದುಬಿಡಬಹುದು ಎಂಬ ಆತಂಕವನ್ನು ಇವರು ತೋಡಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು ಅಮೆರಿಕ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸುತ್ತಾರೆ. ಅದಕ್ಕೆ ಕಾರಣ, ಅಮೆರಿಕದ ಅತಿಯಾದ ಖರ್ಚು ಎನ್ನುವುದು ಅವರ ಅಭಿಪ್ರಾಯ.

ಅಮೆರಿಕದಲ್ಲಿ ಜನಸಾಮಾನ್ಯರ ಬಹುತೇಕ ಆದಾಯ ತೆರಿಗೆ ಹಣ ಅಮೆರಿಕ ಸರ್ಕಾರಕ್ಕೆ ಸಾಲಕ್ಕೆ ಬಡ್ಡಿ ಕಟ್ಟಲೇ ವೆಚ್ಚವಾಗಿ ಹೋಗುತ್ತದೆ ಎಂದು ಎಕ್ಸ್ ಬಳಕೆದಾರರು ಹಾಕಿದ ಪೋಸ್ಟ್​ಗಳಿಗೆ ಇಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.

‘ಅತಿಯಾದ ವೆಚ್ಚ ನಿಲ್ಲಬೇಕು. ಇಲ್ಲದಿದ್ದರೆ ಅಮೆರಿಕ ದಿವಾಳಿ ಆಗುತ್ತದೆ,’ ಎಂದು ಎಕ್ಸ್ ಮಾಲೀಕರೂ ಆಗಿರುವ ಮಸ್ಕ್ ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಅಮೆರಿಕದ ರಾಷ್ಟ್ರೀಯ ಸಾಲಗಳಿಗೆ ಬಡ್ಡಿ ಕಟ್ಟಲು ತೆರಿಗೆದಾರರ ನೂರಕ್ಕೆ ನೂರು ಹಣ ಬಳಕೆ ಆಗುವ ಕಾಲಬಂದೀತು ಎಂದು ಒಬ್ಬರು ಎಚ್ಚರಿಸಿದ್ದಾರೆ.

ಇಲಾನ್ ಮಸ್ಕ್ ಹಾಕಿರುವ ಪೋಸ್ಟ್

ಇದನ್ನೂ ಓದಿ: ಎನ್​ಎಸ್​ಇ ಪ್ಲಾಟ್​ಫಾರ್ಮ್​ನಲ್ಲಿ ಟ್ರಾನ್ಸಾಕ್ಷನ್ ಶುಲ್ಕ ಶೇ. 1ರಷ್ಟು ಇಳಿಕೆ; ಏಪ್ರಿಲ್ 1ರಿಂದ ಜಾರಿ

2024ರ ಫೆಬ್ರುವರಿ ತಿಂಗಳಲ್ಲಿ ಅಮೆರಿಕ ಸರ್ಕಾರದ ಆದಾಯ ಮತ್ತು ವ್ಯಯದ ದತ್ತಾಂಶದ ಪ್ರಕಾರ ಅಲ್ಲಿ ಸಾಲಗಳಿಗೆ ಸರ್ಕಾರ ಕಟ್ಟಬೇಕಾದ ಹಣ 76.162 ಬಿಲಿಯನ್ ಡಾಲರ್. ಇನ್ನು, ಜನಸಾಮಾನ್ಯರಿಂದ ಕಲೆಹಾಕಲಾಗುವ ವೈಯಕ್ತಿ ಆದಾಯ ತೆರಿಗೆಗಳ ಮೊತ್ತ 120.884 ಬಿಲಿಯನ್ ಡಾಲರ್ ಇದೆ. ಅಂದರೆ, ಆದಾಯ ತೆರಿಗೆದಾರರಿಂದ ಸಂಗ್ರಹವಾಗುವ ಹಣದಲ್ಲಿ ಶೇ. 63ರಷ್ಟು ಮೊತ್ತವು ಸರ್ಕಾರದ ಸಾಲಗಳ ಬಡ್ಡಿ ಪಾವತಿಗೇ ವ್ಯಯವಾಗುತ್ತದೆ ಎಂಬ ಅಂಶವನ್ನು ಎಕ್ಸ್ ಬಳಕೆದಾರರೊಬ್ಬರು ಎತ್ತಿ ತೋರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬ ಬಳಕೆದಾರರು, ಮುಂದೊಂದು ದಿನ ಇಡೀ ಆದಾಯ ತೆರಿಗೆ ಹಣವು ಬಡ್ಡಿ ಕಟ್ಟಲು ಬಳಕೆ ಆದರೆ ಅಚ್ಚರಿ ಇಲ್ಲ ಎಂದಿದ್ದಾರೆ. ಕುತೂಹಲದ ಸಂಗತಿ ಎಂದರೆ ಅಮೆರಿಕ ಸರ್ಕಾರಕ್ಕೆ ಒಂದು ಹಣಕಾಸು ವರ್ಷದಲ್ಲಿ ಸುಮಾರು 271.126 ಬಿಲಿಯನ್ ಡಾಲರ್​ನಷ್ಟು ಆದಾಯ ಬರುತ್ತದೆ. ಅದರಲ್ಲಿ 120 ಬಿಲಿಯನ್ ಡಾಲರ್ ವೈಯಕ್ತಿಕ ಆದಾಯ ತೆರಿಗೆಗಳಿಂದಲೇ ಬರುತ್ತದೆ.

ಅಮೆರಿಕ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಗಳು ಮತ್ತು ಆರೋಗ್ಯ ಹಾಗೂ ಮಾನವ ಸೇವೆಗಳಿಗೆ ಅತ್ಯಧಿಕ ವ್ಯಯ ಮಾಡುತ್ತದೆ. ಈ ಇಲಾಖೆಗಳಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಆಗುತ್ತದೆ. ಸೋಷಿಯಲ್ ಸೆಕ್ಯೂರಿಟಿ ಸ್ಕೀಮ್​ಗಳ ಮೂಲಕ ಜನರಿಗೆ ಬಹಳಷ್ಟು ಸಬ್ಸಿಡಿ ಇತ್ಯಾದಿ ನೀಡಲಾಗುತ್ತದೆ.

ಇದನ್ನೂ ಓದಿ: ಜೆಟ್ ಏರ್ವೇಸ್ ಮಾಲಕತ್ವ ವರ್ಗಾವಣೆಗೆ ಒಪ್ಪಿಗೆ; ಎಸ್​ಬಿಐ ನೇತೃತ್ವದ ಗುಂಪಿನ ವಿರೋಧ ತಳ್ಳಿಹಾಕಿದ ಮೇಲ್ಮನವಿ ನ್ಯಾಯಮಂಡಳಿ

2025ಕ್ಕೆ ದಾಖಲೆ ಗಾತ್ರ ಬಜೆಟ್ ಮಂಡಿಸಲಿರುವ ಬೈಡನ್ ಸರ್ಕಾರ

2025ರ ವರ್ಷಕ್ಕೆ ಅಮೆರಿಕ ಸರ್ಕಾರ 7.3 ಟ್ರಿಲಿಯನ್ ಡಾಲರ್ ಗಾತ್ರದಷ್ಟು ಬೃಹತ್ ಬಜೆಟ್ ಮಂಡಿಸುವ ಗುರಿ ಹೊಂದಿದೆ. ಹಿಂದೆ ಆಗುತ್ತಿದ್ದುದಕ್ಕಿಂತ ಎರಡು ಪಟ್ಟು ಹೆಚ್ಚು ಗಾತ್ರ ಬಜೆಟ್ ಇದಾಗಿರುತ್ತದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ ಇದು 600 ಲಕ್ಷ ಕೋಟಿ ರೂಗೂ ಹೆಚ್ಚು. ಭಾರತದಲ್ಲಿ 2023ರಲ್ಲಿ ಮಂಡನೆಯಾದ ಬಜೆಟ್​ನ ಗಾತ್ರ 45 ಲಕ್ಷ ಕೋಟಿ ರೂ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ