AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Byju’s: ಲೇ ಆಫ್ ಬಳಿಕ ಬೆಂಗಳೂರಿನಲ್ಲಿ ದೊಡ್ಡ ಕಚೇರಿ ಖಾಲಿ ಮಾಡಿದ ಬೈಜುಸ್; ಉದ್ಯೋಗಿಗಳಿಗೆ ಇನ್ಸೆಂಟಿವ್ ಆಫರ್

Kalyani Tech Park Byju's Office: ಬೆಂಗಳೂರಿನಲ್ಲಿರುವ ಬೈಜುಸ್​ನ 3 ಕಚೇರಿಗಳಲ್ಲಿ ಅತಿದೊಡ್ಡ ಕಚೇರಿ ಕಲ್ಯಾಣಿ ಟೆಕ್ ಪಾರ್ಕ್​ನಲ್ಲಿದೆ. ಇಲ್ಲಿನ ಕಚೇರಿಯನ್ನು ಬೈಜುಸ್ ಖಾಲಿ ಮಾಡಿದೆ.

Byju's: ಲೇ ಆಫ್ ಬಳಿಕ ಬೆಂಗಳೂರಿನಲ್ಲಿ ದೊಡ್ಡ ಕಚೇರಿ ಖಾಲಿ ಮಾಡಿದ ಬೈಜುಸ್; ಉದ್ಯೋಗಿಗಳಿಗೆ ಇನ್ಸೆಂಟಿವ್ ಆಫರ್
ಬೈಜುಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2023 | 11:31 AM

ಬೆಂಗಳೂರು, ಜುಲೈ 24: ಹಲವು ಸಂಕಷ್ಟಗಳಿಗೆ ಸಿಲುಕಿರುವ ದೇಶದ ಅತಿದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ (Byju’s) ಇದೀಗ ವೆಚ್ಚ ಕಡಿತದ ಉದ್ದೇಶದಿಂದ ಬೆಂಗಳೂರಿನಲ್ಲಿನ ತನ್ನ ಬೃಹತ್ ಕಚೇರಿಯನ್ನು ಖಾಲಿ ಮಾಡುತ್ತಿದೆ. ಕಳೆದ ಕೆಲ ತಿಂಗಳಿನಿಂದ ಸಾವಿರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಬೈಜುಸ್ ಈಗ ಕಲ್ಯಾಣಿ ಟೆಕ್ ಪಾರ್ಕ್​ನಲ್ಲಿರುವ 5.58 ಲಕ್ಷ ಚದರ ಅಡಿಯ ತನ್ನ ಕಚೇರಿ ಸ್ಥಳವನ್ನು ತೆರವುಗೊಳಿಸುತ್ತಿದೆ ಎಂದು ಮನಿ ಕಂಟ್ರೋಲ್ ವೆಬ್​ಸೈಟ್ ವರದಿ ಮಾಡಿದೆ. ಬೈಜುಸ್ ಸಂಸ್ಥೆ ಬೆಂಗಳೂರು ಮೂಲದ್ದಾಗಿದ್ದು ಇಲ್ಲಿ 3 ಕಚೇರಿಗಳನ್ನು ಹೊಂದಿದೆ. ಅದರಲ್ಲಿ ಬ್ರೂಕ್​ಫೀಲ್ಡ್ ಪ್ರದೇಶದಲ್ಲಿರುವ ಕಲ್ಯಾಣಿ ಟೆಕ್ ಪಾರ್ಕ್​ನಲ್ಲಿನ ಅದರ ಕಚೇರಿ ಅತಿದೊಡ್ಡದು. ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರೆಸ್ಟೀಜ್ ಟೆಕ್ ಪಾರ್ಕ್​ನಲ್ಲಿಯದ್ದು ಒಂದು ಸೇರಿದಂತೆ ಬೈಜುಸ್​ನ ಇನ್ನೆರಡು ಕಚೇರಿಗಳಿವೆ. ಪ್ರೆಸ್ಟೀಜ್ ಟೆಕ್ ಪಾರ್ಕ್​ನಲ್ಲಿ ಬೈಜುಸ್ ಒಟ್ಟು 9 ಮಹಡಿಗಳನ್ನು ಹೊಂದಿದ್ದು ಅದರಲ್ಲಿ 2 ಮಹಡಿಗಳ ಕಚೇರಿ ಸ್ಥಳವನ್ನು ತೆರವುಗೊಳಿಸಿದೆ.

ಮನಿಕಂಟ್ರೋಲ್ ವರದಿ ಪ್ರಕಾರ, ಬೈಜುಸ್ ಟ್ಯೂಷನ್ ಸೆಂಟರ್​ನ (ಬಿಟಿಸಿ) ಉದ್ಯೋಗಿಗಳು ಜುಲೈ 25, ಮಂಗಳವಾರದಂದು ದೇಶಾದ್ಯಂತ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಜುಲೈ 22ರಂದು ಉದ್ಯೋಗಿಗಳ ಸಭೆ ಕರೆದ ಬೈಜುಸ್ ಆಡಳಿತವು, ಇನ್ಮುಂದೆ ಯಾವುದೇ ಲೇ ಆಫ್ ಇರುವುದಿಲ್ಲ ಎಂದು ಭರವಸೆ ಕೊಟ್ಟಿತು. ಹಾಗೆಯೇ, ಇನ್ಸೆಂಟಿವ್ ಮೊದಲಾದ ಕೊಡುಗೆಗಳನ್ನು ಉದ್ಯೋಗಿಗಳಿಗೆ ಆಫರ್ ಮಾಡಿ ಸಮಾಧಾನಗೊಳಿಸಲು ಪ್ರಯತ್ನಿಸಿರುವುದು ತಿಳಿದುಬಂದಿದೆ.

ಇದನ್ನೂ ಓದಿFresher Demand: ದಿನಕ್ಕೆ 4 ಗಂಟೆ, ವಾರಕ್ಕೆ 4 ದಿನ ಕೆಲಸ; ಸಂಬಳ 50,000 ರೂ ಬೇಕಂತೆ; ಹೊಸಬರ ಬೇಡಿಕೆಗೆ ಸಂದರ್ಶಕರ ಪ್ರತಿಕ್ರಿಯೆ ಹೇಗಿತ್ತು..!

ಅದೇ ವೇಳೆ, ಕಲ್ಯಾಣಿ ಟೆಕ್ ಪಾರ್ಕ್​ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ (ವರ್ಕ್ ಫ್ರಂ ಹೋಮ್) ಅವಕಾಶ ಕೊಡಲಾಗಿದೆ. ಬೇಕೆಂದರೆ ಬೆಂಗಳೂರಿನಲ್ಲಿರುವ ಅದರ ಇನ್ನೆರಡು ಕಚೇರಿಗಳಿಗೆ ಹೋಗಿ ಕೆಲಸ ಮಾಡುವ ಅವಕಾಶವನ್ನು ಉದ್ಯೋಗಿಗಳಿಗೆ ನೀಡಲಾಗಿರುವುದು ತಿಳಿದುಬಂದಿದೆ.

ಸಾಲಮರುಪಾವತಿಗೆ ಬೈಜೂಸ್ ಮತ್ತು ಸಾಲಗಾರರ ಮಧ್ಯೆ ಒಪ್ಪಂದ

ಒಂದು ಕಾಲದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಬೆಳೆದ ಬೈಜುಸ್ ಸಂಸ್ಥೆ ಇದೀಗ ಹಣಕಾಸು ಸಂಕಷ್ಟದ ಜೊತೆಗೆ ತೆರಿಗೆ ವಿವಾದಗಳಿಗೂ ಸಿಲುಕಿದೆ. ಉದ್ಯೋಗಿಗಳಿಗೆ ಕೊಡುವ ಪಿಎಫ್ ಅನ್ನೂ ಸಂಸ್ಥೆ ಪಾವತಿಸಿಲ್ಲದಿರುವುದು ಬೆಳಕಿಗೆ ಬಂದಿದೆ. ಸಾಕಷ್ಟು ಸಾಲ ಮಾಡಿಕೊಂಡಿರುವ ಬೈಜುಸ್ ಅಮೆರಿಕದಲ್ಲಿ ಎರಡು ಪ್ರಕರಣಗಳನ್ನು ಎದುರಿಸುತ್ತಿದೆ. ಇದೀಗ 1.2 ಬಿಲಿಯನ್ ಡಾಲರ್ ಮೊತ್ತದ ಒಂದು ಸಾಲದ ಮರುಪಾವತಿ ವಿಚಾರದಲ್ಲಿ ಬೈಜುಸ್ ಮತ್ತು ಸಾಲಗಾರರ ಮಧ್ಯೆ ಒಪ್ಪಂದವಾಗಿದ್ದು, ಬೈಜುಸ್ ಬಿಸೋ ದೊಣ್ಣೆಯಿಂದ ಸದ್ಯದ ಮಟ್ಟಿಗೆ ಪಾರಾಗುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ