ನವದೆಹಲಿ, ಡಿಸೆಂಬರ್ 3: ನವೆಂಬರ್ ತಿಂಗಳಲ್ಲಿ ಭಾರತದಲ್ಲಿ 3,50,000 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ತಿಂಗಳಲ್ಲಿ 3.36 ಲಕ್ಷ ಕಾರುಗಳು ವಿಲೇವಾರಿಯಾಗಿದ್ದವು. ಅದಕ್ಕೆ ಹೋಲಿಸಿದರೆ ಕಾರು ಮಾರಾಟದಲ್ಲಿ ಶೇ. 4ರಷ್ಟು ಹೆಚ್ಚಳವಾಗಿದೆ. ಇಲ್ಲಿ ಕಾರು ಮಾರಾಟ ಎಂದರೆ ಶೋರೂಮ್ನಿಂದ ಗ್ರಾಹಕರಿಗೆ ಆದ ಮಾರಾಟದ ಮಾಹಿತಿ ಅಲ್ಲ. ತಯಾರಕರಿಂದ ಕಾರುಗಳು ಡೀಲರ್ಗಳಿಗೆ ತಲುಪಿರುವ ಸಂಖ್ಯೆ ಇದು. ಅಂದರೆ, ಹೋಲ್ಸೇಲ್ ಮಾರಾಟದ ಸಂಖ್ಯೆ ಇದು.
ಹಬ್ಬದ ಸೀಸನ್ ಮುಗಿದರೂ ಕಾರುಗಳಿಗೆ ಬೇಡಿಕೆ ಮುಂದುವರಿದಿರುವುದು ಗಮನಾರ್ಹ. ಭಾರತದ ನಂಬರ್ ಒನ್ ಕಾರ್ ಕಂಪನಿಯಾದ ಮಾರುತಿ ಸುಜುಕಿಯ 1,41,312 ಕಾರುಗಳು ನವೆಂಬರ್ನಲ್ಲಿ ಮಾರಾಟವಾಗಿವೆ. ಕಾರುಗಳಲ್ಲಿ ಎಸ್ಯುವಿಗಳು ಹೆಚ್ಚು ಬೇಡಿಕೆ ಪಡೆಯುತ್ತಿವೆ. ಮಾರುತಿ ಸುಜುಕಿಯ ಒಟ್ಟಾರೆ ಕಾರು ಮಾರಾಟದಲ್ಲಿ ಎಸ್ಯುವಿಗಳ ಪಾಲು ಶೇ. 29ರಷ್ಟಿದೆ.
ಇದನ್ನೂ ಓದಿ: ನವೆಂಬರ್ನಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ 90.62 ಮಿಲಿಯನ್ ಟನ್; ಶೇ. 7.2ರಷ್ಟು ಉತ್ಪಾದನೆ ಹೆಚ್ಚಳ
ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ನಂಬರ್ ಒನ್ ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರಿದಿದೆ. ಅದರ ಸ್ವಿಫ್ಟ್ ಡಿಜೈರ್ ಕಾರು ಅತಿಹೆಚ್ಚು ಮಾರಾಟ ಗಳಿಸಿದೆ. ಮಾರುತಿ ಸುಜುಕಿ ಬಿಟ್ಟರೆ ಹ್ಯುಂಡೈ, ಟಾಟಾ ಮೋಟಾರ್ಸ್, ಟೊಯೋಟಾ ಕಿರ್ಲೋಸ್ಕರ್, ನವೆಂಬರ್ನಲ್ಲಿ ಅತಿಹೆಚ್ಚು ಕಾರು ಮಾರಿರುವ ಸಂಸ್ಥೆಗಳಾಗಿವೆ. ಟೊಯೊಟಾ ಕಿರ್ಲೋಸ್ಕರ್ ಕಾರುಗಳ ಮಾರಾಟದಲ್ಲಿ ಬರೋಬ್ಬರಿ ಶೇ. 44ರಷ್ಟು ಹೆಚ್ಚಳವಾಗಿದೆ.
ಈ ಮೇಲಿನ ಟಾಪ್-5 ಕಂಪನಿಗಳ ಪೈಕಿ ಹ್ಯುಂಡೈ ಮಾತ್ರವೇ ನವೆಂಬರ್ನಲ್ಲಿ ಮಾರಾಟದಲ್ಲಿ ಹಿನ್ನಡೆ ಕಂಡಿರುವುದು.
ಇದನ್ನೂ ಓದಿ: ಪಂಚಾಯತಿ ಸ್ತರದಲ್ಲಿ ಪರಿವರ್ತನೆ ತರುತ್ತಿರುವ ಕೃತಕ ಬುದ್ಧಿಮತ್ತೆಯ ಭಾಷಿಣಿ ಆ್ಯಪ್
ಸುಜುಕಿ ಮೋಟಾರ್ಸೈಕಲ್ ಸಂಸ್ಥೆ ನವೆಂಬರ್ನಲ್ಲಿ 94,370 ದ್ವಿಚಕ್ರ ವಾಹನಗಳನ್ನು ಮಾರಿದೆ. ಇದರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿರುವುದು 78,333 ವಾಹನಗಳಾಗಿವೆ. 16 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಸುಜುಕಿ ರಫ್ತು ಮಾಡಿದೆ. ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಈ ಬಾರಿ ಶೇ. 15ರಷ್ಟು ಹೆಚ್ಚು ರಫ್ತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ