34,615 ಕೋಟಿ ರೂಪಾಯಿ ವಂಚನೆ: ಡಿಎಚ್​ಎಫ್​ಎಲ್​, ಕಪಿಲ್- ಧೀರಜ್ ವಾಧ್ವಾನ್ ವಿರುದ್ಧ ಸಿಬಿಐ ಪ್ರಕರಣ

| Updated By: Srinivas Mata

Updated on: Jun 22, 2022 | 4:33 PM

34,615 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಡಿಎಚ್​ಎಫ್​ಎಲ್, ಅದರ ಮಾಜಿ ಸಿಎಂಡಿ, ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

34,615 ಕೋಟಿ ರೂಪಾಯಿ ವಂಚನೆ: ಡಿಎಚ್​ಎಫ್​ಎಲ್​, ಕಪಿಲ್- ಧೀರಜ್ ವಾಧ್ವಾನ್ ವಿರುದ್ಧ ಸಿಬಿಐ ಪ್ರಕರಣ
ಸಾಂದರ್ಭಿಕ ಚಿತ್ರ
Follow us on

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ 34,615 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಡಿಎಚ್‌ಎಫ್‌ಎಲ್‌ ಹಾಗೂ ಕಪಿಲ್ ವಾಧ್ವಾನ್ ಮತ್ತು ಧೀರಜ್ ವಾಧ್ವಾನ್ ವಿರುದ್ಧ ಸಿಬಿಐ (CBI) ಹೊಸ ಪ್ರಕರಣವನ್ನು ದಾಖಲಿಸಿದ್ದು, ಇದು ಸಂಸ್ಥೆಯು ತನಿಖೆ ನಡೆಸಿದ ಅತಿದೊಡ್ಡ ಬ್ಯಾಂಕಿಂಗ್ ವಂಚನೆಯಾಗಿದೆ ಎನ್ನಲಾಗಿದೆ. ಪ್ರಕರಣದ ಆರೋಪಿಗಳಿಗೆ ಸೇರಿದ ಮುಂಬೈನ 12 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ ಎಂದು ತಿಳಿಸಲಾಗಿದೆ.

ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (DHFL) ಆಗಿನ ಸಿಎಂಡಿ ಕಪಿಲ್ ವಾಧ್ವಾನ್, ನಿರ್ದೇಶಕ ಧೀರಜ್ ವಾಧ್ವಾನ್ ಮತ್ತು ಆರು ರಿಯಾಲ್ಟರ್ ಕಂಪೆನಿಗಳ ವಿರುದ್ಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟವನ್ನು 34,615 ಕೋಟಿ ವಂಚಿಸುವ ಕ್ರಿಮಿನಲ್ ಪಿತೂರಿಯ ಭಾಗವಾಗಿದೆ ಎಂದು ಸಂಸ್ಥೆಯು ಪ್ರಕರಣ ದಾಖಲಿಸಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 11, 2022ರಂದು ಬ್ಯಾಂಕ್‌ನಿಂದ ಬಂದ ದೂರಿನ ಮೇರೆಗೆ ಸಿಬಿಐ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಒಳಗೊಂಡಿರುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ವಾಧ್ವಾನ್​ಗಳು ಈಗಾಗಲೇ ಸಿಬಿಐ ತನಿಖೆ ಎದುರಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Yes Bank Scam: ರಾಣಾ ಕಪೂರ್, ಡಿಎಚ್​ಎಫ್​ಎಲ್ ಪ್ರವರ್ತಕರ ವಿರುದ್ಧ 5050 ಕೋಟಿ ವಂಚನೆಯ ಆರೋಪ ಪಟ್ಟಿ