AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post Office Scheme: ನಿವೃತ್ತಿಗೆ ಕೋಟಿ ರೂಪಾಯಿ ಉಳಿತಾಯ ಮಾಡಬೇಕೆ? ಈ ಪೋಸ್ಟ್​ ಆಫೀಸ್​ ಯೋಜನೆಯಲ್ಲಿ ಹೂಡಿಕೆ ಮಾಡಿ

ಪೋಸ್ಟ್​ ಆಫೀಸ್​ನ ಈ ಯೋಜನೆ ಮೂಲಕ ಒಂದು ಕೋಟಿ ರೂಪಾಯಿ ಉಳಿತಾಯ ಮಾಡುವುದು ಹೇಗೆ ಎಂಬ ಮಾಹಿತಿ ಈ ಲೇಖನದಲ್ಲಿ ಇದೆ.

Post Office Scheme: ನಿವೃತ್ತಿಗೆ ಕೋಟಿ ರೂಪಾಯಿ ಉಳಿತಾಯ ಮಾಡಬೇಕೆ? ಈ ಪೋಸ್ಟ್​ ಆಫೀಸ್​ ಯೋಜನೆಯಲ್ಲಿ ಹೂಡಿಕೆ ಮಾಡಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jun 22, 2022 | 3:47 PM

Share

ನಿವೃತ್ತಿ (Retirement) ಎಂಬುದು ಬಹಳ ಮುಂಚಿತವಾಗಿಯೇ ಯೋಜನೆ ಹಾಕಿಕೊಳ್ಳಬೇಕಾದ ವಿಚಾರ. ಅಂದರೆ ದುಡಿಯುವ ಶಕ್ತಿ ಇರುವಾಗಲೇ ತಿಂಗಳಿಗೆ ಇಂತಿಷ್ಟು ಎಂದು ಉಳಿಸುತ್ತಾ ಸಾಗಿದರೆ ಅಂದುಕೊಂಡಷ್ಟು ಹಣ ಉಳಿತಾಯ ಮಾಡುವುದು ಕಷ್ಟದ ಸಂಗತಿ ಏನಲ್ಲ. ಷೇರು ಮಾರ್ಕೆಟ್, ಮ್ಯೂಚುವಲ್​ ಫಂಡ್​ನಂಥದ್ದು ಬೇಡ ಅಂದುಕೊಂಡಲ್ಲಿ ಸರ್ಕಾರದ ಉಳಿತಾಯ ಯೋಜನೆಗಳು ಆಯ್ಕೆ ಮಾಡಬಹುದು. ಅಂಥ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್​ (PPF) ಒಂದು. ಹಲವಾರು ಉಳಿತಾಯ ಯೋಜನೆಗಳಲ್ಲಿ ಸ್ಥಿರವಾದ ಹಾಗೂ ಹೆಚ್ಚಿನ ರಿಟರ್ನ್ ದೊರೆಯುತ್ತದೆ. ಭಾರತ ಸರ್ಕಾರದ ಈ ಪಿಪಿಎಫ್​ ಯೋಜನೆಯು ತೆರಿಗೆ ಉಳಿತಾಯ ಆಯ್ಕೆ ಸಹ ಹೌದು. ನಿವೃತ್ತಿ ಜೀವನಕ್ಕೆ 1 ಕೋಟಿ ರೂಪಾಯಿ ಉಳಿತಾಯ ಮಾಡಬೇಕು ಎಂದಾದಲ್ಲಿ ಅದಕ್ಕೆ ಪೂರಕ ಮಾಹಿತಿ ಇಲ್ಲಿದೆ.

ಪಿಪಿಎಫ್​ ಫೀಚರ್, ಬಡ್ಡಿ ದರ, ಅನುಕೂಲಗಳು

ಒಂದು ಹಣಕಾಸು ವರ್ಷಕ್ಕೆ ಪಿಪಿಎಫ್​ನಲ್ಲಿ ಕನಿಷ್ಠ 500 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಪಿಪಿಎಫ್​ಗೆ ಹೆಚ್ಚು ಬಡ್ಡಿಯೂ ಸಿಗುತ್ತದೆ, ಅಪಾಯವೂ ಇಲ್ಲ. ಸದ್ಯಕ್ಕೆ ಪಿಪಿಎಫ್​ ಬಡ್ಡಿ ದರ ಶೇ 7.1ರಷ್ಟಿದೆ. ಬ್ಯಾಂಕ್​ ಎಫ್​ಡಿಗಿಂತ ಹೆಚ್ಚಿಗಿದೆ. ಹೂಡಿಕೆ, ಬಡ್ಡಿ ಹಾಗೂ ನಿಧಿ ಮೂರಕ್ಕೂ ತೆರಿಗೆ ವಿನಾಯಿತಿ ಇದೆ. ಹೂಡಿಕೆದಾರರು ಸತತ 15 ವರ್ಷ ಹೂಡಿಕೆ ಮಾಡಬಹುದು. ಮಾರ್ಗದರ್ಶನದ ಪ್ರಕಾರ, 15 ವರ್ಷದ ಕೊನೆಗೆ ಹೂಡಿಕೆದಾರರಿಗೆ ಹಣ ವಾಪಸ್ ಪಡೆಯುವುದು ಬೇಡ ಎಂದಾದಲ್ಲಿ 5 ವರ್ಷದ ಒಂದು ಬ್ಲಾಕ್​ನಂತೆ ಅವಧಿಯನ್ನು ವಿಸ್ತರಣೆ ಮಾಡಿಸುವುದಕ್ಕೆ ಅವಕಾಶ ಇದೆ.

ಪಿಪಿಎಫ್​ ಖಾತೆಯಲ್ಲಿ ಹೂಡಿಕೆ ಮಾಡಿ ಕೋಟ್ಯಧಿಪತಿ ಆಗುವುದು ಹೇಗೆ?

ಹೆಚ್ಚಿನ ಬಡ್ಡಿಯ ರಿಟರ್ನ್ಸ್, ಬಹು ಜನಪ್ರಿಯತೆ, ಕಡಿಮೆ ಅಪಾಯ ಹಾಗೂ ತೆರಿಗೆ ಇಲ್ಲ ಎಂಬ ಸ್ವರೂಪ ಇವೆಲ್ಲ ಸೇರಿ ಹೂಡಿಕೆದಾರರು ಒಂದು ಕೋಟಿ ರೂಪಾಯಿ ಉಳಿತಾಯ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಇಷ್ಟು ಮೊತ್ತ ಸಂಗ್ರಹಿಸುವ ಸಲುವಾಗಿ ಎಷ್ಟು ಉಳಿತಾಯ ಮಾಡಬೇಕು ಎಂಬ ವಿವರ ಇಲ್ಲಿದೆ. ದಿನಕ್ಕೆ 417 ರೂಪಾಯಿ ಅಂದುಕೊಂಡರೆ ತಿಂಗಳಿಗೆ 12,500 ರೂಪಾಯಿ ಆಗುತ್ತದೆ. ಇದರ ಅರ್ಥ ವರ್ಷಕ್ಕೆ 1,50,000 ರೂಪಾಯಿ ಪಿಪಿಎಫ್ ​ಖಾತೆಯಲ್ಲಿ ಉಳಿಸಿದಂತಾಗುತ್ತದೆ. ಗರಿಷ್ಠ ಅವಧಿಗೆ 15 ವರ್ಷ ಅಂತಾದಲ್ಲಿ 40.58 ಲಕ್ಷ ರೂಪಾಯಿ ಆಗುತ್ತದೆ. ಆ ನಂತರ ಐದೈದು ವರ್ಷದಂತೆ ಎರಡು ಬಾರಿಗೆ ಅವಧಿ ವಿಸ್ತರಣೆ ಮಾಡಬಹುದು.

ಹೀಗೆ 35 ವರ್ಷಕ್ಕೆ ಹೂಡಿಕೆ ಶುರು ಮಾಡಿ, 60 ವರ್ಷದ ತನಕ ಹಣ ಉಳಿಸಿದರೆ ಮೆಚ್ಯೂರಿಟಿ ಹೊತ್ತಿಗೆ 1.03 ಕೋಟಿ ದೊರೆಯುತ್ತದೆ. ಈ ಒಟ್ಟಾರೆ ಮೊತ್ತ ತೆರಿಗೆ ಮುಕ್ತವಾಗಿರುತ್ತದೆ ಮತ್ತು ಒಟ್ಟಾರೆ ಬಡ್ಡಿ ಗಳಿಕೆ 66 ಲಕ್ಷ ರೂಪಾಯಿ ಆಗಿರುತ್ತದೆ. ನಿವೃತ್ತಿ ತನಕ ಒಬ್ಬ ವ್ಯಕ್ತಿಯು ಉಳಿಸುವ ಮೊತ್ತ 37 ಲಕ್ಷ ರೂಪಾಯಿ ಆಗುತ್ತದೆ. ಉತ್ತಮ ರಿಟರ್ನ್ ದೊರೆಯುವುದಕ್ಕೆ ಒಂದೊಳ್ಳೆ ಮಾರ್ಗ ಏನೆಂದರೆ, ಪ್ರತಿ ತಿಂಗಳ 1ರಿಂದ 5ನೇ ತಾರೀಕಿನ ಮಧ್ಯೆ ಡೆಪಾಸಿಟ್ ಮಾಡಬೇಕು. ಏಕೆಂದರೆ ಪ್ರತಿ ತಿಂಗಳು ಬಡ್ಡಿಯನ್ನು ಲೆಕ್ಕ ಹಾಕುವುದು ಆ ದಿನಾಂಕದ ಮಧ್ಯೆಯೇ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: PPF Account: ಇನ್ನು ಮುಂದೆ ಮೆಚ್ಯೂರಿಟಿ ನಂತರ ಈ ಬಗೆಯ ಪಿಪಿಎಫ್ ಖಾತೆ ಅವಧಿ ವಿಸ್ತರಣೆ ಸಾಧ್ಯವಿಲ್ಲ

ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ