AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Minimum Support Price: ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಹೆಚ್ಚಳ ಮಾಡಲು ಕೇಂದ್ರ ಸಂಪುಟ ಒಪ್ಪಿಗೆ

ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ನೀಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Minimum Support Price: ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಹೆಚ್ಚಳ ಮಾಡಲು ಕೇಂದ್ರ ಸಂಪುಟ ಒಪ್ಪಿಗೆ
ಸಾಂದರ್ಭಿಕ ಚಿತ್ರ - ಕೇಂದ್ರ ಸಚಿವ ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Jun 08, 2022 | 6:34 PM

Share

ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಏರಿಕೆಗೆ ಕೇಂದ್ರದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಮುಂಗಾರು ಮಾರುಕಟ್ಟೆ ಋತುವಿನಲ್ಲಿ ಬೆಳೆಗಳ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ. ಬೆಳೆಗಳ ಉತ್ಪಾದನಾ ವೆಚ್ಚದ 1.5ರಷ್ಟು ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಬೇಳೆಯ ಬೆಂಬಲ ಬೆಲೆ ಕ್ವಿಂಟಲ್​ಗೆ 480 ರೂಪಾಯಿ, ಎಳ್ಳು ಬೆಂಬಲ ಬೆಲೆ ಕ್ವಿಂಟಲ್​ಗೆ 523 ರೂಪಾಯಿ, ಸೂರ್ಯಕಾಂತಿ ಬೀಜದ ಬೆಂಬಲ ಬೆಲೆ ಕ್ವಿಂಟಲ್​ಗೆ 385 ರೂಪಾಯಿ, ‌ಸೋಯಾಬಿನ್ ಬೆಂಬಲ ಬೆಲೆ ಕ್ವಿಂಟಲ್​ಗೆ 350 ರೂಪಾಯಿ ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಲಾಗಿದೆ.

ಅದೇ ರೀತಿ ತೊಗರಿ ಮೇಲಿನ ಬೆಂಬಲ ಬೆಲೆ ಕ್ವಿಂಟಲ್​ಗೆ 300 ರೂಪಾಯಿ, ಹೆಸರುಕಾಳು ಮೇಲಿನ ಬೆಂಬಲ ಬೆಲೆ ಕ್ವಿಂಟಲ್​ಗೆ 300 ರೂಪಾಯಿ, ರಾಗಿ ಬೆಂಬಲ ಬೆಲೆ ಕ್ವಿಂಟಲ್​ಗೆ 201 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ವಾರ್ತಾ, ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಕೇಂದ್ರ ಸಂಪುಟ ಸಭೆಯ ಬಳಿಕ ಹೇಳಿಕೆ ನೀಡಿದ್ದಾರೆ‌.

ಮೂಲಗಳ ಪ್ರಕಾರ, 2022-23ರ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಶೇ 5ರಿಂದ 20ರಷ್ಟು ಹೆಚ್ಚಾಗಬಹುದು. ಸಂಪುಟದ ನಿರ್ಧಾರದ ನಂತರ ಖಾರಿಫ್ ಬೆಳೆಗಳ, ಅಂದರೆ ಭತ್ತ ಮತ್ತು ಸೋಯಾಬೀನ್‌ನ ಎಂಎಸ್‌ಪಿಯಲ್ಲಿ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಮೆಕ್ಕೆಜೋಳದ ಎಂಎಸ್‌ಪಿ ಹೆಚ್ಚಿಸುವ ಪ್ರಸ್ತಾವನೆಗೂ ಸಂಪುಟ ಅನುಮೋದನೆ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?

Published On - 6:20 pm, Wed, 8 June 22

Follow Us
TV9 Web
TV9 Web

TV9 Kannada

Read More
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ