7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಜುಲೈನಲ್ಲಿ ಡಿಎ ಹೆಚ್ಚಳ; ಲೆಕ್ಕಾಚಾರ ಹೇಗೆ ಎಂಬ ವಿವರಣೆ ಇಲ್ಲಿದೆ

| Updated By: Srinivas Mata

Updated on: Jun 23, 2022 | 4:12 PM

Dearness Allowance Update ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ 2022ರ ಜುಲೈನಲ್ಲಿ ಡಿಎ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಆ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ.

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಜುಲೈನಲ್ಲಿ ಡಿಎ ಹೆಚ್ಚಳ; ಲೆಕ್ಕಾಚಾರ ಹೇಗೆ ಎಂಬ ವಿವರಣೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಕೇಂದ್ರ ಸರ್ಕಾರಿ ನೌಕರರು ಮುಂದಿನ ತಿಂಗಳು, ಅಂದರೆ 2022ರ ಜುಲೈ ತಿಂಗಳಲ್ಲಿ ಪರಿಷ್ಕೃತ ತುಟ್ಟಿ ಭತ್ಯೆಯನ್ನು (DA) ಪಡೆಯಬಹುದು. ಡಿಎಯನ್ನು ವರ್ಷಕ್ಕೆ ಎರಡು ಬಾರಿ- ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ. ಜತೆಗೆ, ಈ ಬಾರಿ ಸರ್ಕಾರಿ ನೌಕರರು ತಮ್ಮ ಮೂಲ ವೇತನದಲ್ಲಿ ಫಿಟ್‌ಮೆಂಟ್ ಅಂಶದೊಂದಿಗೆ ಹೆಚ್ಚಳವನ್ನು ಪಡೆಯುತ್ತಾರೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರವು ಒಂದೂವರೆ ವರ್ಷಗಳ ಕಾಲ ನಿಲ್ಲಿಸಿದ ತುಟ್ಟಿಭತ್ಯೆಯ ಮೊತ್ತವಾಗಿ ಜುಲೈ 2022ರ ಡಿಎ ಮೊತ್ತವು ಗಮನಾರ್ಹವಾದ ಏರಿಕೆಯನ್ನು ಕಾಣಬಹುದು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಹಣಕಾಸು ಸಚಿವಾಲಯವು ಜನವರಿ 2020ರಿಂದ ಜೂನ್ 30, 2021ರವರೆಗೆ ಡಿಎ ಹೆಚ್ಚಳವನ್ನು ನಿಲ್ಲಿಸಿತ್ತು. ಕಳೆದ ವರ್ಷ ಜುಲೈನಲ್ಲಿ ಡಿಎ ಹೆಚ್ಚಳ ಪುನರಾರಂಭವಾಯಿತು. ಅಂದಹಾಗೆ ವರದಿಗಳ ಪ್ರಕಾರ, ಫಿಟ್‌ಮೆಂಟ್ ಅಂಶದಲ್ಲಿನ ಹೆಚ್ಚಳವನ್ನು ಸರ್ಕಾರವು ಶೀಘ್ರದಲ್ಲೇ ಅನುಮೋದಿಸಬಹುದು.

ಫಿಟ್‌ಮೆಂಟ್ ಅಂಶವನ್ನು ಶೇ 2.57ರಿಂದ 3.68 ಪಟ್ಟು ಹೆಚ್ಚಿಸಬೇಕು ಎಂದು ನೌಕರರ ಸಂಘಗಳು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿವೆ. ಅವರ ಈ ಬೇಡಿಕೆಯನ್ನು ಒಪ್ಪಿಕೊಂಡರೆ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ ಅಥವಾ ಮೂಲವೇತನವೂ ರೂ. 18,000ದಿಂದ ರೂ. 26,000ಕ್ಕೆ ಏರಿಕೆಯಾಗಲಿದೆ. ಈ ಹಿಂದೆ ಸರ್ಕಾರವು 2017ರಲ್ಲಿ ಆರಂಭಿಕ ಹಂತದಲ್ಲಿ ವೇತನವನ್ನು ಹೆಚ್ಚಿಸಿತ್ತು. ಆ ಸಮಯದಲ್ಲಿ ಮೂಲ ವೇತನವನ್ನು ರೂ.. 7,000ದಿಂದ ರೂ. 18,000ಕ್ಕೆ ಹೆಚ್ಚಿಸಲಾಗಿತ್ತು. ಆದ್ದರಿಂದ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ ಕೇಂದ್ರ ಸರ್ಕಾರಿ ಉದ್ಯೋಗಿಗಳ ಡಿಎ ಜೊತೆಗೆ ಜುಲೈನಲ್ಲಿ ತಮ್ಮ ಮೂಲ ವೇತನದಲ್ಲಿ ಹೆಚ್ಚಳವನ್ನು ಪಡೆಯಬಹುದು.

ಫಿಟ್‌ಮೆಂಟ್ ಅಂಶ ಯಾವುದು?

ಫಿಟ್‌ಮೆಂಟ್ ಅಂಶವು 7ನೇ ಕೇಂದ್ರೀಯ ವೇತನ ಆಯೋಗ (CPC) ಮೂಲಕ ಬಳಸಲಾಗುವ ಅಂಕಿ ಅಂಶವಾಗಿದ್ದು, ಪರಿಷ್ಕೃತ ವೇತನ ರಚನೆಯಲ್ಲಿ (7ನೇ CPC) ಮೂಲ ವೇತನವನ್ನು ನಿಗದಿಪಡಿಸಲು 6ನೇ ಕೇಂದ್ರೀಯ ವೇತನ ಆಯೋಗದ ಆಡಳಿತದಲ್ಲಿ (ಪೇ ಇನ್ ಪೇ ಬ್ಯಾಂಡ್ + ಗ್ರೇಡ್ ಪೇ) ಮೂಲ ವೇತನವನ್ನು ಗುಣಿಸಲಾಗುತ್ತದೆ. 7ನೇ ಕೇಂದ್ರ ವೇತನ ಆಯೋಗವು ರೂಪಿಸಿದ ಫಿಟ್‌ಮೆಂಟ್ ಅಂಶವು 2.57 ಆಗಿದೆ.

ಫಿಟ್‌ಮೆಂಟ್ ಅಂಶ ಹೆಚ್ಚಳದ ನಂತರ ನಿರೀಕ್ಷಿತ ಹೆಚ್ಚಳದ ಪ್ರಮಾಣ

ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ ಉದ್ಯೋಗಿಗಳ ಸಂಬಳವು ಗಮನಾರ್ಹವಾಗಿ ಹೆಚ್ಚಾಗಬಹುದು. ಇದನ್ನು ವಿವರಿಸಲು ನಾವು ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಬೇಡಿಕೆಗೆ ಅನುಗುಣವಾಗಿ ಸರ್ಕಾರವು ಫಿಟ್‌ಮೆಂಟ್ ಅಂಶವನ್ನು 3.68 ಪಟ್ಟು ಹೆಚ್ಚಿಸಿದೆ ಎಂದು ಭಾವಿಸೋಣ; ನೌಕರರ ಕನಿಷ್ಠ ವೇತನ ರೂ. 26,000 ಆಗಿರುತ್ತದೆ.

2.57 ಫಿಟ್‌ಮೆಂಟ್ ಅಂಶ (18,000 X 2.57 = ರೂ. 46,260) ಪ್ರಕಾರ, ರೂ 18,000 ಮೂಲ ವೇತನದಲ್ಲಿ ಎಲ್ಲ ಭತ್ಯೆಗಳನ್ನು ಸೇರಿಸಿದ ನಂತರ ವೇತನವು ರೂ 46,260ಕ್ಕೆ ಏರುತ್ತದೆ. ಫಿಟ್‌ಮೆಂಟ್ ಅಂಶವು 3.68 ಆಗಿದ್ದರೆ, ನಂತರ ಸಂಬಳವು ರೂ. 95,680 (26,000 X 3.68 = ರೂ. 95,680) ಗೆ ಏರುತ್ತದೆ.

ಇನ್ಷಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್  ಮಾಡಿ

ಇದನ್ನೂ ಓದಿ: Employment: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; 10 ಲಕ್ಷ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರ ನಿರ್ಧಾರ