Fiscal Deficit: ವಿತ್ತೀಯ ಕೊರತೆ ಶೇ. 6.4: 2022-23ರ ಗುರಿ ಮುಟ್ಟಿದ ಸರ್ಕಾರ; ಅನುಕೂಲವಾದ ಅಂಶಗಳೇನು?

|

Updated on: May 31, 2023 | 4:57 PM

Controller General of Accounts: ಮೇ 31ರಂದು ಬಿಡುಗಡೆ ಆದ ವರದಿ ಪ್ರಕಾರ 2022-23ರಲ್ಲಿ ಭಾರತದ ವಿತ್ತೀಯ ಕೊರತೆ ಶೇ. 6.4 ಇದೆ. ಹಿಂದಿನ ವರ್ಷದಲ್ಲಿ, ಅಂದರೆ 2021-22ರ ಹಣಕಾಸು ವರ್ಷದಲ್ಲಿ ಭಾರತದ ಫಿಸ್ಕಲ್ ಡೆಫಿಸಿಟ್ ಶೇ. 6.7 ಇತ್ತು. ಈಗ ಅದು ಇನ್ನಷ್ಟು ಉತ್ತಮಗೊಂಡಿದೆ.

Fiscal Deficit: ವಿತ್ತೀಯ ಕೊರತೆ ಶೇ. 6.4: 2022-23ರ ಗುರಿ ಮುಟ್ಟಿದ ಸರ್ಕಾರ; ಅನುಕೂಲವಾದ ಅಂಶಗಳೇನು?
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: 2022-23ರ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು (Fiscal Deficit) ಮಿತಿಗೊಳಿಸಲು ಸರ್ಕಾರ ಇಟ್ಟುಕೊಂಡಿದ್ದ ಗುರಿ ಈಡೇರಿದೆ. ಆ ವರ್ಷ ವಿತ್ತೀಯ ಕೊರತೆ ಶೇ. 6.4ಕ್ಕೆ ಇರಬೇಕು ಎಂದು ಸರ್ಕಾರ ಗುರಿ ಹಾಕಿತ್ತು. ಮೇ 31ರಂದು ಕಂಟ್ರೋಲರ್ ಜನರಲ್ ಅಫ್ ಅಕೌಂಟ್ಸ್ ಬಿಡುಗಡೆ ಮಾಡಿದ ವರದಿ ಪ್ರಕಾರ 2022-23ರಲ್ಲಿ ಭಾರತದ ವಿತ್ತೀಯ ಕೊರತೆ ಶೇ. 6.4 ಇದೆ. ಹಿಂದಿನ ವರ್ಷದಲ್ಲಿ, ಅಂದರೆ 2021-22ರ ಹಣಕಾಸು ವರ್ಷದಲ್ಲಿ ಭಾರತದ ಫಿಸ್ಕಲ್ ಡೆಫಿಸಿಟ್ ಶೇ. 6.7 ಇತ್ತು. ಈಗ ಅದು ಇನ್ನಷ್ಟು ಉತ್ತಮಗೊಂಡಿದೆ.

ಸಿಜಿಎ ವರದಿ ಪ್ರಕಾರ 2022-23ರಲ್ಲಿ 17.33 ಲಕ್ಷ ಕೋಟಿಯಷ್ಟು ವಿತ್ತೀಯ ಕೊರತೆ ಎದುರಾಗಿದೆ. ಇದು ಜಿಡಿಪಿಯ ಒಟ್ಟು ಮೊತ್ತಕ್ಕೆ ಹೋಲಿಸಿದರೆ ವಿತ್ತೀಯ ಕೊರತೆ ಆಗಿರುವ ಮೊತ್ತವು ಶೇ. 6.4. ಪರಿಷ್ಕೃತ ಅಂದಾಜಿನ ಪ್ರಕಾರ ವಿತ್ತೀಯ ಕೊರತೆ 17.55 ಲಕ್ಷ ಕೋಟಿ ರೂ ಇರಬಹುದೆನ್ನಲಾಗಿತ್ತು. ಆ ಲೆಕ್ಕಾಚಾರಕ್ಕಿಂತಲೂ ಕೊರತೆ ತುಸು ಕಡಿಮೆ ಆಗಿದೆ. ಇನ್ನು, 2023-24ರ ಬಜೆಟ್​ನಲ್ಲಿ ವಿತ್ತೀಯ ಕೊರತೆ 16.61 ಲಕ್ಷ ಕೋಟಿ ರೂ ಆಗಬಹುದು ಎಂದು ಎಣಿಸಲಾಗಿತ್ತು. ಆದರೆ, ಆ ಅಂದಾಜಿಗಿಂತ ಹೆಚ್ಚು ಕೊರತೆ ಉಂಟಾಗಿದೆ. ಆದರೆ, ಪೂರ್ವದಲ್ಲಿ ಇರಿಸಿಕೊಳ್ಳಲಾಗಿದ್ದ ಮಿತಿಯ ಗುರಿಯನ್ನು ಮುಟ್ಟುವಲ್ಲಿ ಸರ್ಕಾರ ಯಶಸ್ವಿಯಾಗಿರುವುದು ಗಮನಾರ್ಹ.

ಇದನ್ನೂ ಓದಿIndian Growth: 2013ಕ್ಕೆ ಮುಂಚಿನ ಭಾರತವೇ ಬೇರೆ, ಈಗಿನ ಭಾರತವೇ ಬೇರೆ; ಶಹಬ್ಬಾಸ್​ಗಿರಿ ನೀಡಿದ ಜಾಗತಿಕ ಹಣಕಾಸು ದೈತ್ಯ ಮಾರ್ಗನ್ ಸ್ಟಾನ್ಲೀ

ಏನಿದು ವಿತ್ತೀಯ ಕೊರತೆ?

ವಿತ್ತೀಯ ಕೊರತೆ ಅಥವಾ ವಿತ್ತೀಯ ಅಂತರ ಎಂಬುದು ಒಂದು ಹಣಕಾಸು ವರ್ಷದಲ್ಲಿ ಸರ್ಕಾರ ಗಳಿಸುವ ಆದಾಯ ಮತ್ತು ಅದು ಮಾಡುವ ವ್ಯಯದ ನಡುವಿನ ಅಂತರವಾಗಿದೆ. ಸರ್ಕಾರ ಮಾಡುವ ಖರ್ಚು ಅದರ ಆದಾಯಕ್ಕಿಂತ ಹೆಚ್ಚಾಗಿದ್ದರೆ ಆಗ ವಿತ್ತೀಯ ಕೊರತೆ ಸೃಷ್ಟಿಯಾಗುತ್ತದೆ. ಅಂದರೆ ಈಗ ಸರ್ಕಾರದ ಆದಾಯಕ್ಕಿಂತ 17.33 ಲಕ್ಷ ಕೋಟಿ ರೂನಷ್ಟು ವೆಚ್ಚ ಹೆಚ್ಚಾಗಿದೆ.

ಆದರೆ, ವಿತ್ತೀಯ ಕೊರತೆ ಇಷ್ಟು ಪ್ರಮಾಣಕ್ಕೆ ಸೀಮಿತವಾಗಬೇಕೆಂದು ಸರ್ಕಾರ ಇರಿಸಿದ್ದ ಗುರಿಯಂತೂ ಈಡೇರಿದೆ. ಇದಕ್ಕೆ ಕಾರಣ ನಿವ್ವಳ ತೆರಿಗೆ ಅದಾಯ ಮತ್ತು ತೆರಿಗೆಯೇತರ ಆದಾಯವು ನಿರೀಕ್ಷೆಮೀರಿ ಹೆಚ್ಚಾಗಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ