FD vs Share: ಬ್ಯಾಂಕ್ನಲ್ಲಿ ಎಫ್ಡಿ ಇಡ್ತೀರೋ, ಬ್ಯಾಂಕ್ ಷೇರನ್ನೇ ಕೊಳ್ತೀರೋ; ಒಂದು ವರ್ಷದಲ್ಲಿ ಯಾವುದು ಮಸ್ತ್ ರಿಟರ್ನ್ಸ್? ನೋಡಿ ಡೀಟೇಲ್ಸ್
Investment Advice: ಸ್ಟಾಕ್ ರಿಪೋರ್ಟ್ಸ್ ಪ್ಲಸ್ ವರದಿಯೊಂದು ಸುಮಾರು 4,000 ಷೇರುಗಳನ್ನು ಅವಲೋಕಿಸಿ ಅವರುಗಳು ಮುಂದಿನ 12 ತಿಂಗಳಲ್ಲಿ, ಅಂದರೆ ಒಂದು ವರ್ಷದಲ್ಲಿ ಎಷ್ಟು ಮೌಲ್ಯ ಹೆಚ್ಚಿಸಿಕೊಳ್ಳಬಹುದು ಎಂದು ಪಟ್ಟಿ ಮಾಡಿದೆ. ಈ ಬಗ್ಗೆ ಒಂದು ರಿಪೋರ್ಟ್.
ಹಣ ಹೂಡಿಕೆ (Investment) ಮಾಡುವುದು ಒಂದು ರೀತಿಯಲ್ಲಿ ಕಲೆ, ಇನ್ನೊಂದು ರೀತಿಯಲ್ಲಿ ತಾಳ್ಮೆ, ಮಗದೊಂದು ರೀತಿಯಲ್ಲಿ ಜಾಣ್ಮೆ. ಅದರಲ್ಲಿಯೂ ಮೂರನೇ ಅಂಶ ಜಾಣ್ಮೆ ಬಹಳ ಮುಖ್ಯ. ಹಣ ಹೂಡಿಕೆ ಮಾಡಲು ಹತ್ತಾರು ಮಾರ್ಗಗಳು ಈಗ ಇವೆ. ಬ್ಯಾಂಕ್ನಲ್ಲಿ ಎಫ್ಡಿ, ಆರ್ಡಿ ಇಡುವುದರಿಂದ ಹಿಡಿದು ವಿಮೆ, ಬಾಂಡ್, ಚಿನ್ನ, ಷೇರು, ಮ್ಯೂಚುವಲ್ ಫಂಡ್ ಇತ್ಯಾದಿ ಸಾಧನಗಳಿವೆ. ಕೆಲ ಪ್ಲಾನ್ಗಳು ಲಾಭ ಕೊಡುವುದು ಕಡಿಮೆ ಆದರೂ ಗ್ಯಾರಂಟಿ ರಿಟರ್ನ್ ಕೊಡಬಲ್ಲುವು. ಷೇರುಗಳು ಅದೃಷ್ಟ ಇದ್ದರೆ ಭರ್ಜರಿ ಲಾಭ ಕೊಡಬಹುದು. ದುರದೃಷ್ಟವಿದ್ದರೆ ಭಾರೀ ನಷ್ಟಕ್ಕೆ ದೂಡಬಹುದು. ಆದರೆ, ಮಾರುಕಟ್ಟೆ ಮತ್ತು ಉದ್ಯಮದ ಪರಿಸ್ಥಿತಿ ಅವಲೋಕಿಸಿ ತಜ್ಞರು ನೀಡುವ ಸಲಹೆಯನ್ನು ಪರಿಗಣಿಸಿ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಸ್ಟಾಕ್ ರಿಪೋರ್ಟ್ಸ್ ಪ್ಲಸ್ ವರದಿಯೊಂದು ಸುಮಾರು 4,000 ಷೇರುಗಳನ್ನು ಅವಲೋಕಿಸಿ ಅವರುಗಳು ಮುಂದಿನ 12 ತಿಂಗಳಲ್ಲಿ, ಅಂದರೆ ಒಂದು ವರ್ಷದಲ್ಲಿ ಎಷ್ಟು ಮೌಲ್ಯ ಹೆಚ್ಚಿಸಿಕೊಳ್ಳಬಹುದು ಎಂದು ಪಟ್ಟಿ ಮಾಡಿದೆ. ಇದರಲ್ಲಿ ಆ ಕಂಪನಿಯ ಹಣಕಾಸು ಲಭ, ಅದು ಇರುವ ಉದ್ಯಮದ ಸ್ಥಿತಿ ಗತಿ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಿವಿಧ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ಪಟ್ಟಿ ಮಾಡಿರುವುದು ತಿಳಿದುಬಂದಿದೆ. ಈ ಪಟ್ಟಿಯಲ್ಲಿ ಬ್ಯಾಂಕುಗಳೂ ಇದ್ದು, ಒಂದು ವರ್ಷದಲ್ಲಿ ಶೇ 29ರಿಂದ ಶೇ. 38ರವರೆಗೂ ಷೇರುಬೆಲೆ ಬೆಳೆಯಬಲ್ಲ ಐದು ಬ್ಯಾಂಕುಗಳನ್ನು ಹೆಸರಿಸಲಾಗಿದೆ.
ಇದನ್ನೂ ಓದಿ: Prepayment: ಹೋಮ್ ಲೋನ್ ಪಡೆದಿದ್ದೀರಾ? ಪ್ರೀಪೇಮೆಂಟ್ ಸೂತ್ರ ಅನುಸರಿಸಿ, ಲಕ್ಷಾಂತರ ರೂ ಬಡ್ಡಿ ಉಳಿಸಿ
ಮುಂದಿನ 1 ವರ್ಷದಲ್ಲಿ ಒಳ್ಳೆಯ ಲಾಭ ತರಬಹುದಾದ ಬ್ಯಾಂಕ್ ಷೇರುಗಳು
- ಸಿಟಿ ಯೂನಿಯನ್ ಬ್ಯಾಂಕ್: ಶೇ. 37.80ರಷ್ಟು ಷೇರುಬೆಲೆ ಹೆಚ್ಚಳ ಸಾಧ್ಯತೆ
- ಫೆಡರಲ್ ಬ್ಯಾಂಕ್: ಶೇ. 31.70ರಷ್ಟು ಷೇರುಬೆಲೆ ಹೆಚ್ಚಳ ಸಾಧ್ಯತೆ
- ಕರೂರ್ ವೈಶ್ಯ ಬ್ಯಾಂಕ್: ಶೇ. 29.90ರಷ್ಟು ಷೇರುಬೆಲೆ ಹೆಚ್ಚಳ ಸಾಧ್ಯತೆ
- ಎಚ್ಡಿಎಫ್ಸಿ ಬ್ಯಾಂಕ್: ಶೇ. 20.40ರಷ್ಟು ಷೇರುಬೆಲೆ ಹೆಚ್ಚಳ ಸಾಧ್ಯತೆ
ಬ್ಯಾಂಕ್ ಷೇರಿನಲ್ಲಿ ಒಂದು ವರ್ಷ ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತೆ?
ಈಗ ಎಚ್ಡಿಎಫ್ಸಿ ಬ್ಯಾಂಕ್ ಷೇರುಬೆಲೆ ಒಂದು ವರ್ಷದಲ್ಲಿ ಶೇ. 20.40ರಷ್ಟು ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ. ಇದು ನಿಜವಾದಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ 1.25 ಲಕ್ಷ ರೂ ರಿಟರ್ನ್ ನಿಮಗೆ ಸಿಗುತ್ತದೆ.
ಇನ್ನು, ಸಿಟಿ ಯೂನಿಯನ್ ಬ್ಯಾಂಕ್ ಷೇರಿನ ಮೇಲೆ ಒಂದು ಲಕ್ಷ ರೂ ಹೂಡಿಕೆ ಮಾಡಿದರೆ ಒಂದು ವರ್ಷದ ಬಳಿಕ ನಿಮ್ಮ ಹಣ 1.38 ಲಕ್ಷ ರೂಗೆ ಬೆಳೆಯುತ್ತದೆ.
ಇದನ್ನೂ ಓದಿ: HDFC: ಎಚ್ಡಿಎಫ್ಸಿ ಬ್ಯಾಂಕ್ ಹೊಸ ಎಫ್ಡಿ ಸ್ಕೀಮ್; ಹೆಚ್ಚು ಬಡ್ಡಿ, ಸೀಮಿತ ಅವಕಾಶ; ಇಲ್ಲಿದೆ ಡೀಟೇಲ್ಸ್
ಬ್ಯಾಂಕ್ನ ನಿಶ್ಚಿತ ಠೇವಣಿ ಮೇಲೆ 1ಲಕ್ಷ ರೂ ಹೂಡಿಕೆ ಮಾಡಿದರೆ?
ಕಮರ್ಷಿಯಲ್ ಬ್ಯಾಂಕ್ನಲ್ಲಿ ಒಂದು ವರ್ಷದ ಎಫ್ಡಿಗೆ ಸಿಗುವ ಬಡ್ಡಿ ಶೇ. 6.5ರಿಂದ 7ರಷ್ಟು ಇದೆ. ಅಂದರೆ ನೀವು ಒಂದು ಲಕ್ಷ ರೂ ಹಣವನ್ನು ಫಿಕ್ಸೆಡ್ ಇಟ್ಟರೆ ಒಂದು ವರ್ಷದ ಬಳಿಕ ನಿಮಗೆ ಸಿಗುವುದು 1.07 ರೂ ಮಾತ್ರ.
ಅಂದರೆ, ಬ್ಯಾಂಕ್ ಎಫ್ಡಿಯಿಂದ ಬರುವ ಲಾಭಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಲಾಭವನ್ನು ಅದರ ಷೇರುಗಳ ಮೇಲೆ ಹೂಡಿಕೆಯಿಂದ ಪಡೆಯಬಹುದು. ಆದರೆ, ಈ ಲೆಕ್ಕಾಚಾರವೇ ನಿಜ ಆಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಷೇರುಪೇಟೆಯಲ್ಲಿ ಬಹಳ ಲೆಕ್ಕಾಚಾರಗಳು ತಲೆಕೆಳಗಾಗಿರುವುದುಂಟು. ಈ ಮೇಲೆ ಹೇಳಿದ ಬ್ಯಾಂಕುಗಳು ದಿವಾಳಿಯಾಗುವ ಸ್ಥಿತಿಯಲ್ಲಂತೂ ಇಲ್ಲ. ಷೇರುಬೆಲೆ ಬಿದ್ದರೂ ತೀರಾ ಕೆಳಗೆ ಬಿದ್ದುಹೋಗುವ ಸಾಧ್ಯತೆ ಕಡಿಮೆ. ಹಾಗಾಗಿ, ನೀವು ರಿಸ್ಕ್ ತೆಗೆದುಕೊಂಡು ಹೂಡಿಕೆ ಮಾಡಬಹುದು.