AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Growth: 2013ಕ್ಕೆ ಮುಂಚಿನ ಭಾರತವೇ ಬೇರೆ, ಈಗಿನ ಭಾರತವೇ ಬೇರೆ; ಶಹಬ್ಬಾಸ್​ಗಿರಿ ನೀಡಿದ ಜಾಗತಿಕ ಹಣಕಾಸು ದೈತ್ಯ ಮಾರ್ಗನ್ ಸ್ಟಾನ್ಲೀ

Morgan Stanley's Report: 2013ರಿಂದೀಚೆ ಭಾರತ ಸಾಕಷ್ಟು ಪರಿವರ್ತನೆ ಕಂಡಿದೆ. 2013ಕ್ಕೆ ಮುಂಚಿನ ಭಾರತವೇ ಬೇರೆ, ಈಗಿರುವ ಭಾರತವೇ ಬೇರೆ. ಮುಂದಿನ ದಿನಗಳಲ್ಲಿ ಭಾರತದ ವಾರ್ಷಿಕ ತಲಾದಾಯವು 5,200 ಡಾಲರ್​ಗೆ ಏರಬಹುದು ಎಂದು ಮಾರ್ಗನ್ ಸ್ಟಾನ್ಲೀ ಹೇಳಿದೆ.

Indian Growth: 2013ಕ್ಕೆ ಮುಂಚಿನ ಭಾರತವೇ ಬೇರೆ, ಈಗಿನ ಭಾರತವೇ ಬೇರೆ; ಶಹಬ್ಬಾಸ್​ಗಿರಿ ನೀಡಿದ ಜಾಗತಿಕ ಹಣಕಾಸು ದೈತ್ಯ ಮಾರ್ಗನ್ ಸ್ಟಾನ್ಲೀ
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 31, 2023 | 4:24 PM

ನವದೆಹಲಿ: ಭಾರತ ಕಳೆದ 10 ವರ್ಷದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ಪರಿವರ್ತನೆ ಕಂಡಿದೆ, ಜಾಗತಿಕವಾಗಿ ಬಲ ಹೆಚ್ಚಿಸಿಕೊಂಡಿದೆ. 2013ಕ್ಕೆ ಮುಂಚೆ ಇದ್ದ ಭಾರತವೇ ಬೇರೆ, ಈಗ ಇರುವ ಭಾರತವೇ ಬೇರೆ. ಏಷ್ಯಾ ಮಾತ್ರವಲ್ಲ ಜಾಗತಿಕ ಪ್ರಗತಿಯ ಹಿಂದಿನ ಶಕ್ತಿ ಭಾರತವಾಗಿದೆ ಎಂದು ಜಾಗತಿಕ ಹಣಕಾಸು ದೈತ್ಯ ಸಂಸ್ಥೆ ಮಾರ್ಗನ್ ಸ್ಟಾನ್ಲೀ (Morgan Stanley) ಅಭಿಪ್ರಾಯಪಟ್ಟಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಭಾರತದಲ್ಲಿ ಬಹಳಷ್ಟು ಗಮನಾರ್ಹವಾದ ಬದಲಾವಣೆಗಳಾಗಿವೆ. ಅದರ ನೀತಿಗಳು ಸಕಾರಾತ್ಮಕ ಪರಿಣಾಮ ಬೀರಿರುವುದನ್ನು ಮಾರ್ಗನ್ ಸ್ಟಾನ್ಲೀ ಗುರುತಿಸಿದೆ. ಭಾರತದ ಮುಂದಿನ ದಶಕದ ಬೆಳವಣಿಗೆಯೂ ಅಮೋಘವಾಗಿರಲಿದೆ. 2007-11ರಲ್ಲಿ ಚೀನಾ ಕಂಡಂತಹ ಪ್ರಗತಿಯನ್ನು ಭಾರತ ಮುಂದಿನ ದಶಕದಲ್ಲಿ ಕಾಣಲಿದೆ ಎಂದೂ ಅದು ಹೇಳಿದೆ.

ತೈಲ ಬೆಲೆ, ಅಮೆರಿಕದ ಆರ್ಥಿಕ ಹಿಂಜರಿತ ಇತ್ಯಾದಿ ಅಂಶಗಳು ಭಾರತದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರದಂತೆ ಭಾರತ ಆರ್ಥಿಕ ರಕ್ಷಾ ಕವಚ ನಿರ್ಮಿಸಿದೆ ಎಂಬುದು ಮಾರ್ಗನ್ ಸ್ಟಾನ್ಲೀ ಅನಿಸಿಕೆ. ಮುಂಬರುವ ಒಂದು ದಶಕದಲ್ಲಿ ಭಾರತದ ತಲಾದಾಯ ಈಗಿರುವುದಕ್ಕಿಂತ ಕನಿಷ್ಠ ಎರಡು ಪಟ್ಟಾದರೂ ಹೆಚ್ಚಾಗಬಹುದು ಎಂದು ಅದು ನಿರೀಕ್ಷಿಸಿದೆ.

ಮಾರ್ಗನ್ ಸ್ಟಾನ್ಲೀ ಪ್ರಕಾರ ಕಳೆದ 10 ವರ್ಷದಲ್ಲಿ ಭಾರತದಲ್ಲಿ ಆದ ದೊಡ್ಡ ಬದಲಾವಣೆಗಳು

  • ಸರಬರಾಜು ನೀತಿ ಸುಧಾರಣೆಗಳು
  • ಅಸಂಘಟಿತ ವಲಯವನ್ನು ಆರ್ಥಿಕತೆಯ ಮುಖ್ಯವಾಹಿನಿಗೆ ತಂದಿದ್ದು
  • ರಿಯಲ್ ಎಸ್ಟೇಟ್ ಕಾಯ್ದೆ
  • ಸಾಮಾಜಿಕ ಯೋಜನೆಗಳಿಗೆ ಹಣ ಸರಬರಾಜು ವ್ಯವಸ್ಥೆಯ ಡಿಜಿಟಲೀಕರಣ
  • ಹಣ ಬಿಕ್ಕಟ್ಟು ಮತ್ತು ದಿವಾಳಿ ಕಾನೂನು
  • ಅನುಕೂಲಕರ ಹಣದುಬ್ಬರ ಗುರಿ (ಫ್ಲೆಕ್ಸಿಬಲ್ ಇನ್​ಫ್ಲೇಶನ್ ಟಾರ್ಗೆಟಿಂಗ್)
  • ಎಫ್​ಡಿಐ ಮೇಲೆ ಗಮನ
  • ಭಾರತದ ರಿಟೈರ್ಮೆಂಟ್ ಪ್ಲಾನ್​ಗಳು
  • ಕಾರ್ಪೊರೇಟ್ ಲಾಭಗಳಿಗೆ ಸರ್ಕಾರದ ಬೆಂಬಲ
  • ಬಹುರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚು ವಿಶ್ವಾಸ

ಇದನ್ನೂ ಓದಿNew Rules In June 2023: ಇ-ವಾಹನ ಬೆಲೆ ಹೆಚ್ಚಳ; ಎಲ್​ಪಿಜಿ ಬೆಲೆ ಇಳಿಕೆಯಾಗುತ್ತಾ? ಜೂನ್ 1ರಿಂದ ಏನೇನು ಹಣಕಾಸು ಬದಲಾವಣೆ? ಇಲ್ಲಿದೆ ಡೀಟೇಲ್ಸ್

ಮಾರ್ಗನ್ ಸ್ಟಾನ್ಲೀ ಪ್ರಕಾರ ಮುಂದಿನ ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಪ್ರಮುಖ ಅಂಶಗಳು

  • ತಯಾರಿಕೆ ಮತ್ತು ಬಂಡವಾಳ ಹೂಡಿಕೆ (Manufacturing and Capex) ಗಮನಾರ್ಹವಾಗಿ ಹೆಚ್ಚಲಿದೆ. 2031ರಷ್ಟರಲ್ಲಿ ಜಿಡಿಪಿಯಲ್ಲಿ ಇವೆರೆಡರ ಪಾಲು 5 ಪರ್ಸೆಂಟೇಜ್ ಪಾಯಿಂಟ್​ಗಳಷ್ಟು ಏರಲಿದೆ.
  • ಭಾರತದ ರಫ್ತು ಮಾರುಕಟ್ಟೆ ಪಾಲು 2031ರಲ್ಲಿ ಶೇ. 4.5ಕ್ಕೆ ಏರಲಿದೆ.
  • ಭಾರತದ ವಾರ್ಷಿಕ ತಲಾದಾಯ ಪ್ರಮಾಣ ಈಗ 2,200 ಡಾಲರ್ ಇದ್ದದ್ದು 2032ರಲ್ಲಿ 5,200 ಡಾಲರ್​ಗೆ ಏರುವ ಸಾಧ್ಯತೆ ಇದೆ. 5,200 ಡಾಲರ್ ಎಂದರೆ 4.29 ಲಕ್ಷ ರುಪಾಯಿ ತಲಾದಾಯ ಇರಲಿದೆ.
  • ಹಣದುಬ್ಬರ ಕಡಿಮೆ ಮಟ್ಟದಲ್ಲೇ ಇರುತ್ತದೆ. ಬಡ್ಡಿ ದರವೂ ಕಡಿಮೆ ಇರುತ್ತದೆ.
  • ಚಾಲ್ತಿ ಖಾತೆ ಅಂತರ (Current Account Deficit) ಕೂಡ ಸಾಧಾರಣವಾಗಿಯೇ ಇರುತ್ತದೆ.
  • ಸರಬರಾಜು ವಿಚಾರದಲ್ಲಿ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಮುಂದಿನ ದಿನಗಳಲ್ಲಿ ಹೂಡಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗುತ್ತದೆ. ಲಾಭದ ಪ್ರಗತಿಗೆ ಇನ್ನಷ್ಟು ಪುಷ್ಟಿ ಸಿಗುತ್ತದೆ.
  • ಕರೆಂಟ್ ಅಕೌಂಟ್ ಫಂಡಿಂಗ್​ನಲ್ಲಿ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆ (FPI- foreign Portfolio Investment) ಪ್ರಮಾಣ ಕಡಿಮೆ ಇರುವುದರಿಂದ ಜಾಗತಿಕ ತೈಲ ಬೆಲೆ ವ್ಯತ್ಯಯಗಳು ಭಾರತದ ಷೇರುಪೇಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇರುತ್ತದೆ.
  • ಜಾಗತಿಕ ಬಂಡವಾಳದ ಮೇಲೆ ಭಾರತದ ಅವಲಂಬನೆ ಕಡಿಮೆ ಆಗಿರುವುದರಿಂದ ಅಮೆರಿಕದ ಆರ್ಥಿಕ ಹಿಂಜರಿತವಾಗಲೀ ಅಲ್ಲಿನ ಹಣಕಾಸು ನಿರ್ಧಾರಗಳಾಗಲೀ ಭಾರತದ ಮಾರುಕಟ್ಟೆಯ ಮೇಲೆ ಹೆಚ್ಚು ಪರಿಣಾಮ ಬೀರುವಂತೆ ಅನಿಸುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ