New Rules In June 2023: ಇ-ವಾಹನ ಬೆಲೆ ಹೆಚ್ಚಳ; ಎಲ್​ಪಿಜಿ ಬೆಲೆ ಇಳಿಕೆಯಾಗುತ್ತಾ? ಜೂನ್ 1ರಿಂದ ಏನೇನು ಹಣಕಾಸು ಬದಲಾವಣೆ? ಇಲ್ಲಿದೆ ಡೀಟೇಲ್ಸ್

Financial Rule Changes In June Month: ಆರ್​ಬಿಐನ 100 ದಿನ 100 ಪಾವತಿ, ಎಲ್​ಪಿಜಿ ಬೆಲೆ ಪರಿಷ್ಕರಣೆ ಸೇರಿದಂತೆ ಜೂನ್ ತಿಂಗಳಲ್ಲಿ ಬದಲಾವಣೆ ಆಗುವ ಹಣಕಾಸು ಸಂಬಂಧಿತ ಬೆಳವಣಿಗೆಗಳೇನು ಎಂಬ ವಿವರ ಇಲ್ಲಿದೆ...

New Rules In June 2023: ಇ-ವಾಹನ ಬೆಲೆ ಹೆಚ್ಚಳ; ಎಲ್​ಪಿಜಿ ಬೆಲೆ ಇಳಿಕೆಯಾಗುತ್ತಾ? ಜೂನ್ 1ರಿಂದ ಏನೇನು ಹಣಕಾಸು ಬದಲಾವಣೆ? ಇಲ್ಲಿದೆ ಡೀಟೇಲ್ಸ್
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:May 31, 2023 | 11:36 AM

ಇವತ್ತಿನ ಅನಿಶ್ಚಿತ ಆರ್ಥಿಕ ಪರಿಸ್ಥಿತಿಯಲ್ಲಿ (Economic Uncertainty) ಯಾವಾಗ ಯಾವ ಕಡೆಯಿಂದ ಏನೇನು ಅನಾಹುತಗಳಾಗುತ್ತವೋ, ಆಗಿದ್ದುದು ಈಗಿಲ್ಲ ಎನ್ನುವಂತಾಗುತ್ತದೋ ಎಂಬ ಭಯ ಎಲ್ಲರಿಗೂ ಇದ್ದದ್ದೇ. ಈ ತಿಂಗಳು ಕಳೆಯಿತು, ಮುಂದಿನ ತಿಂಗಳು ಏನು ಗ್ರಹಚಾರ ಕಾದಿದೆಯೋ ಎನಿಸದು. ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳನ್ನು ಯಾರೂ ಅಂದಾಜಿಸಲಾಗುವುದಿಲ್ಲ. ಆದರೆ, ಸರ್ಕಾರ ಕೈಗೊಂಡ ನಿರ್ಧಾರಗಳ ಫಲ ಯಾವಾಗ ಸಿಗಬಹುದು ಎಂದು ತಿಳಿಯಬಹುದು. ಎಲ್​ಪಿಜಿ ಸಿಲಿಂಡರ್, ಎಲೆಕ್ಟ್ರಿಕ್ ವಾಹನಗಳ ಬೆಲೆ ಸೇರಿದಂತೆ ಜೂನ್ ತಿಂಗಳಲ್ಲಿ ಕೆಲವೊಂದಿಷ್ಟು ಮಹತ್ವದ ಬೆಲೆ ವ್ಯತ್ಯಯಗಳಾಗುತ್ತವೆ. ಈ ಬಗ್ಗೆ ಒಂದಿಷ್ಟು ವಿವರ.

ಎಲ್​ಪಿಜಿ ಸಿಲಿಂಡರ್ ದರಗಳ ಪರಿಷ್ಕರಣೆ

ಪೆಟ್ರೋಲಿಯಂ ಕಂಪನಿಗಳು ಸಾಮಾನ್ಯವಾಗಿ ಪ್ರತೀ ತಿಂಗಳ ಮೊದಲ ದಿನದಂದು ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಪರಿಷ್ಕರಣೆ ಮಾಡುತ್ತವೆ. ಅಂತೆಯೇ ಜೂನ್ 1ರಂದು ಬೆಲೆ ಪರಿಷ್ಕರಣೆ ನಿರೀಕ್ಷಿಸಬಹುದು. ಕಳೆದ ತಿಂಗಳು, ಮೇ ನಲ್ಲಿ ಎಲ್​ಪಿಜಿ ಬೆಲೆಯನ್ನು 171.50 ರೂ ಕಡಿತಗೊಳಿಸಲಾಗಿತ್ತು. ಈಗ ಜೂನ್ ತಿಂಗಳಲ್ಲಿ ಐಒಎಲ್, ಬಿಪಿಸಿಎಲ್, ಹೆಚ್​ಪಿಸಿಎಲ್ ಕಂಪನಿಗಳು ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸುತ್ತವಾ ಎಂದು ಕಾದುನೋಡಬೇಕಷ್ಟೇ.

ಇದನ್ನೂ ಓದಿJune Deadline: ಹೆಚ್ಚುವರಿ ಪಿಎಫ್, ಪ್ಯಾನ್ ಆಧಾರ್ ಲಿಂಕ್ ಇತ್ಯಾದಿ ಹಣಕಾಸು ಕಾರ್ಯಗಳಿಗೆ ಜೂನ್​ನಲ್ಲಿ ಡೆಡ್​ಲೈನ್; ತಪ್ಪದೇ ಮಾಡಿ

ಎಲೆಕ್ಟ್ರಿಕ್ ವಾಹನಗಳ ಬೆಲೆ ಏರಿಕೆ

ಕೇಂದ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ನೀಡುವ ಸಬ್ಸಿಡಿಯ ಮೊತ್ತವನ್ನು ಕಡಿಮೆಗೊಳಿಸಿದೆ. ಇದು ಜೂನ್ 1ರಿಂದ ಜಾರಿಗೆ ಬರುತ್ತದೆ. ಅಂದರೆ 2023ರ ಜೂನ್ 1ರ ಬಳಿಕ ನೊಂದಣಿಯಾಗುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಕಡಿಮೆ ಸಬ್ಸಿಡಿ ಸಿಗುತ್ತದೆ. ಇದರ ಪರಿಣಾಮವಾಗಿ ಈಗಿರುವ ಬೆಲೆಗಿಂತ ಈ ವಾಹನಗಳು ಜೂನ್ 1ರಿಂದ ತುಸು ದುಬಾರಿಯಾಗಲಿವೆ.

ಕೆಮ್ಮಿನ ಸಿರಪ್ ಪರೀಕ್ಷೆ ಕಡ್ಡಾಯ

ಭಾರತದಿಂದ ರಫ್ತಾದ ಕೆಮ್ಮಿನ ಸಿರಪ್​ಗಳಿಂದ ಕೆಲ ವಿದೇಶಗಳಲ್ಲಿ ಅನಾಹುತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ಈಗ ಕೆಮ್ಮಿನ ಸಿರಪ್​ಗಳ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಕೆಮ್ಮಿನ ಸಿರಪ್ ರಫ್ತಾಗುವ ಮುನ್ನ ಅದರ ತಯಾರಕರು ಕಳುಹಿಸುವ ಸ್ಯಾಂಪಲ್ ಅನ್ನು ನಿಗದಿತ ಸರ್ಕಾರಿ ಲ್ಯಾಬ್​ಗಳಿಗೆ ಕಳುಹಿಸಬೇಕು. ಈ ಲ್ಯಾಬ್​ಗಳು ಆದ್ಯತೆ ಮೇರೆಗೆ ಅದನ್ನು ಪರೀಕ್ಷಿಸಿ ರಿಪೋರ್ಟ್ ಕೊಡಬೇಕು ಎಂದು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಡಿಸಿಜಿಐ ಆದೇಶಿಸಿದೆ. ಜೂನ್ 1ರಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರುತ್ತದೆ.

ಇದನ್ನೂ ಓದಿನೀವು ಬಾಡಿಗೆ ಬಾಬತ್ತಿನಿಂದ ವಾರ್ಷಿಕ 10 ಲಕ್ಷ ರೂ. ಗಳಿಸುತ್ತಿದ್ದರೆ ತೆರಿಗೆ ಪಾವತಿಸಬೇಕಾ, ಬೇಡವಾ? ವಿನಾಯಿತಿ ಪಡೆಯುವುದಾದರೂ ಹೇಗೆ?

ಆರ್​ಬಿಐ 100 ದಿನ 100 ಪಾವತಿ

ವಿವಿಧ ಬ್ಯಾಂಕುಗಳಲ್ಲಿ ವರ್ಷಗಳಿಂದ ಹಿಂಪಡೆಯದೇ ಉಳಿದುಹೋಗಿರುವ ಹಣವನ್ನು ಅದರ ಖಾತೆದಾರರು ಅಥವಾ ಅವರ ವಾರಸುದಾರರಿಗೆ ಮರಳಿಸಲು ಆರ್​ಬಿಐ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಯಾಗಿ 100 ದಿನ 100 ಪಾವತಿ ಅಭಿಯಾನವನ್ನು ಆರಂಭಿಸಿದೆ. ಅದರಂತೆ ದೇಶದ ಪ್ರತಿಯೊಂದು ಬ್ಯಾಂಕ್ ಪ್ರತಿಯೊಂದು ಜಿಲ್ಲೆಯಲ್ಲೂ 100 ದಿನದೊಳಗೆ ಇಂಥ 100 ಅಗ್ರ ಪ್ರಕರಣಗಳನ್ನು ಗುರುತಿಸಿ ಇತ್ಯರ್ಥಗೊಳಿಸಬೇಕು ಎಂಬುದು ಆರ್​ಬಿಐ ನೀಡಿರುವ ಗುರಿ. ಮೊದಲಿಗೆ ದೊಡ್ಡ ಮೊತ್ತದ ಅನ್​ಕ್ಲೈಮ್ಡ್ ಡೆಪಾಸಿಟ್​​ಗಳ ಪಟ್ಟಿ ಮಾಡಿಕೊಂಡು ಅದರ ಖಾತೆದಾರರು ಅಥವಾ ವಾರಸುದಾರರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Wed, 31 May 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್