AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

June Deadline: ಹೆಚ್ಚುವರಿ ಪಿಎಫ್, ಪ್ಯಾನ್ ಆಧಾರ್ ಲಿಂಕ್ ಇತ್ಯಾದಿ ಹಣಕಾಸು ಕಾರ್ಯಗಳಿಗೆ ಜೂನ್​ನಲ್ಲಿ ಡೆಡ್​ಲೈನ್; ತಪ್ಪದೇ ಮಾಡಿ

Financial Tasks Deadline In June Month: ಪ್ಯಾನ್ ಮತ್ತು ಆಧಾರ್ ನಂಬರ್ ಜೋಡಿಸುವುದು, ಹೆಚ್ಚುವರಿ ಇಪಿಎಫ್ ಪಿಂಚಣಿಗೆ ಮನವಿ ಸಲ್ಲಿಸುವುದು, ಆನ್​ಲೈನಲ್ಲಿ ಶುಲ್ಕವಿಲ್ಲದೇ ಆಧಾರ್ ಮಾಹಿತಿ ಅಪ್​ಡೇಟ್ ಮಾಡುವುದು ಇತ್ಯಾದಿಗಳಿಗೆ ಜೂನ್ ತಿಂಗಳಲ್ಲಿ ಗಡುವು ಇದೆ.

June Deadline: ಹೆಚ್ಚುವರಿ ಪಿಎಫ್, ಪ್ಯಾನ್ ಆಧಾರ್ ಲಿಂಕ್ ಇತ್ಯಾದಿ ಹಣಕಾಸು ಕಾರ್ಯಗಳಿಗೆ ಜೂನ್​ನಲ್ಲಿ ಡೆಡ್​ಲೈನ್; ತಪ್ಪದೇ ಮಾಡಿ
ಆಧಾರ್ ಅಪ್​ಡೇಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 31, 2023 | 10:36 AM

2023ರ ಜೂನ್ ತಿಂಗಳಲ್ಲಿ ಕೆಲ ಮಹತ್ವದ ಹಣಕಾಸು ಸಂಬಂಧಿತ ಕಾರ್ಯಗಳಿಗೆ (Financial tasks) ಡೆಡ್​ಲೈನ್ ಇದೆ. ಇವುಗಳನ್ನು ನೀವು ತಪ್ಪಿಸಿದರೆ ದಂಡ ಕಟ್ಟಬೇಕಾಬಹುದ ಅಥವಾ ಬೇರೆ ಕ್ರಮ ಎದುರಿಸಬೇಕಾಗಬಹುದು. ಹೆಚ್ಚುವರಿ ಪಿಎಫ್ ಪಿಂಚಣಿ ಬೇಕೆನ್ನುವವರು ಅರ್ಜಿ ಸಲ್ಲಿಸುವುದಿರಲಿ ಅಥವಾ ಪ್ಯಾನ್ ಮತ್ತ ಆಧಾರ್ ಲಿಂಕ್ ಮಾಡುವುದಿರಲಿ ಒಂದಿಷ್ಟು ಮಹತ್ವದ ಕಾರ್ಯಗಳನ್ನು ಜೂನ್ ಮುಗಿಯುವುದರೊಳಗೆ ನೀವು ಮಾಡಬೇಕಿದೆ.

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು:

ಪ್ಯಾನ್ ಮತ್ತು ಆಧಾರ್ ನಂಬರ್ ಜೋಡಣೆ ಬಹಳ ಮುಖ್ಯವಾದುದು. 1000 ರೂ ದಂಡ ಸಮೇತ ಈ ಕಾರ್ಯ ಮಾಡಲು 2023 ಮಾರ್ಚ್ 31ಕ್ಕೆ ಡೆಡ್​ಲೈನ್ ಇತ್ತು. ಆದರೆ, ಬಹಳ ಮಂದಿ ಇನ್ನೂ ಲಿಂಕ್ ಮಾಡದ ಹಿನ್ನೆಲೆಯಲ್ಲಿ ಗಡುವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ. ಈ ವಾಯಿದೆಯೊಳಗೆ ನೀವು ಪ್ಯಾನ್ ಆಧಾರ್ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ನಂಬರ್ ಅಸಿಂಧುಗೊಳ್ಳುತ್ತದೆ. ಈ ನಿಷ್ಕ್ರಿಯ ಪ್ಯಾನ್ ನಂಬರ್ ಅನ್ನು ನೀವು ಯಾವುದಾದರೂ ಹಣಕಾಸು ಚಟುವಟಿಕೆಗೆ ಬಳಸಿದಲ್ಲಿ ಭಾರೀ ಮೊತ್ತದ ದಂಡ ಕಟ್ಟಬೇಕಾಬಹುದು, ಅಥವಾ ಜೈಲು ಶಿಕ್ಷೆಗೂ ಒಳಗಾಗಬಹುದು.

ಇದನ್ನೂ ಓದಿMS Dhoni: ಎಂಎಸ್ ಧೋನಿ ಕ್ರಿಕೆಟ್​ನಲ್ಲಿ ಪ್ರಚಂಡ; ಬ್ಯುಸಿನೆಸ್​ನಲ್ಲಿ ಬುದ್ಧಿಶಾಲಿ; ರಾಜಕೀಯದಲ್ಲಿ..? ರೋಮಾಂಚನಗೊಳಿಸುತ್ತೆ ಉದ್ಯಮಿ ಆನಂದ್ ಮಹೀಂದ್ರ ಹೇಳಿಕೆ

ಹೆಚ್ಚುವರಿ ಇಪಿಎಫ್ ಪಿಂಚಣಿ

ಇಪಿಎಫ್ ಸದಸ್ಯರು ಹೆಚ್ಚುವರಿ ಪಿಂಚಣಿ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಲು ಜೂನ್ 26ಕ್ಕೆ ಗಡುವು ಕೊಡಲಾಗಿದೆ. ಸದ್ಯ ಗರಿಷ್ಠ 15 ಸಾವಿರ ರೂವರೆಗಿನ ಬೇಸಿಕ್ ಸ್ಯಾಲರಿಗೆ ಉದ್ಯೋಗಿಗಳಿಂದ ಇಪಿಎಫ್​ಗೆ ಹಣ ಮುರಿದುಕೊಳ್ಳಲಾಗುತ್ತಿದೆ. ಇದಕ್ಕೂ ಹೆಚ್ಚಿನ ಸಂಬಳಕ್ಕೆ ಹೆಚ್ಚುವರಿ ಹಣ ಮುರಿದುಕೊಳ್ಳಬೇಕೆನ್ನುವುದು ಉದ್ಯೋಗಿಗಳ ಒತ್ತಾಯ. ಈ ಹಿನ್ನೆಲೆಯಲ್ಲಿ ಈ ಹೆಚ್ಚುವರಿ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ.

ಬ್ಯಾಂಕ್ ಲಾಕರ್ ಒಪ್ಪಂದ

ಆರ್​ಬಿಐ ರೂಪಿಸಿದ ಹೊಸ ಬ್ಯಾಂಕ್ ಲಾಕರ್ ಒಪ್ಪಂದವನ್ನು ಎಲ್ಲಾ ಬ್ಯಾಂಕುಗಳು ರಿನಿವಲ್ ಮಾಡಬೇಕು. 2023ರ ಡಿಸೆಂಬರ್ 31ರೊಳಗೆ ಈ ಕಾರ್ಯ ಪೂರ್ಣಗೊಳ್ಳಬೇಕು. ಹಂತ ಹಂತವಾಗಿ ಇದನ್ನು ಜಾರಿಗೊಳಿಸುವುದು ಆರ್​ಬಿಐ ಯೋಜನೆ. ಅದರಂತೆ 2023 ಜೂನ್ 30ರೊಳಗೆ ಎಲ್ಲಾ ಬ್ಯಾಂಕುಗಳು ಶೇ. 50ರಷ್ಟು ಲಾಕರ್ ರಿನಿವಲ್ ಮಾಡಿರಬೇಕು. 2023 ಸೆಪ್ಟಂಬರ್ 30ರೊಳಗೆ ಶೇ. 75ರಷ್ಟು ಕಾರ್ಯಗಳಾಗಿರಬೇಕು. ಡಿಸೆಂಬರ್ 31ರೊಳಗೆ ನೂರು ಪ್ರತಿಶತದಷ್ಟು ಯೋಜನೆ ಪೂರ್ಣಗೊಂಡಿರಬೇಕು.

ಇದನ್ನೂ ಓದಿFake Notes: ನಿಮ್ಮ ಬಳಿ 500 ರೂ ನೋಟಿದ್ದರೆ ಹುಷಾರ್; ಹೆಚ್ಚು ನಕಲಿ ನೋಟು ಇರೋದು 2,000 ರೂದ್ದಲ್ಲವಂತೆ; ಕುತೂಹಲ ಮೂಡಿಸಿದೆ ಆರ್​ಬಿಐ ವರದಿ

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವುದು

10 ವರ್ಷಕ್ಕಿಂತ ಹೆಚ್ಚು ಕಾಲದಿಂದ ಅಪ್​ಡೇಟ್ ಆಗದೇ ಉಳಿದಿರುವ ಆಧಾರ್ ಡೆಮೋಗ್ರಾಫಿಕ್ ಮಾಹಿತಿಯನ್ನು ಅಪ್​ಡೇಟ್ ಮಾಡುವಂತೆ ಸರ್ಕಾರ ತಿಳಿಸಿದೆ. ಅದರಂತೆ ಆನ್​ಲೈನ್​ನಲ್ಲಿ ಈ ಮಾಹಿತಿ ಉಚಿತವಾಗಿ ಅಪ್​​ಡೇಟ್ ಮಾಡುವ ಅವಕಾಶ ಇದೆ. ಇದು 2023 ಜೂನ್ 14ರವರೆಗೆ ಮಾತ್ರ. ಮೈ ಆಧಾರ್ ಪೋರ್ಟಲ್​ಗೆ ಹೋದರೆ ಯಾವುದೇ ಶುಲ್ಕವಿಲ್ಲದೇ ನಾವೇ ಮಾಡಬಹುದು. ಈ ಗಡುವು ದಾಟಿದರೆ 50 ರೂ ಶುಲ್ಕ ಕಟ್ಟಿ ಮಾಡಬೇಕಾಗುತ್ತದೆ. ಈ ಉಚಿತ ಅವಕಾಶ ಮೈ ಆಧಾರ್ ಪೋರ್ಟಲ್​ನಲ್ಲಿ ಮಾತ್ರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:35 am, Wed, 31 May 23

ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ