AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake Notes: ನಿಮ್ಮ ಬಳಿ 500 ರೂ ನೋಟಿದ್ದರೆ ಹುಷಾರ್; ಹೆಚ್ಚು ನಕಲಿ ನೋಟು ಇರೋದು 2,000 ರೂದ್ದಲ್ಲವಂತೆ; ಕುತೂಹಲ ಮೂಡಿಸಿದೆ ಆರ್​ಬಿಐ ವರದಿ

RBI Annual Report Shows Counterfeit Currency: 2,000 ರೂ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿರುವ ಪ್ರಮಾಣ ಶೇ. 28ರಷ್ಟು ಕಡಿಮೆ ಆಗಿದೆ. 500 ರೂ ಮುಖಬೆಲೆ ನಕಲಿ ನೋಟುಗಳ ಸಂಖ್ಯೆ 91,110 ಆದರೆ, 2,000 ರೂ ಮುಖಬೆಲೆಯ ನಕಲಿ ನೋಟುಗಳು 9,806 ಇವೆ.

Fake Notes: ನಿಮ್ಮ ಬಳಿ 500 ರೂ ನೋಟಿದ್ದರೆ ಹುಷಾರ್; ಹೆಚ್ಚು ನಕಲಿ ನೋಟು ಇರೋದು 2,000 ರೂದ್ದಲ್ಲವಂತೆ; ಕುತೂಹಲ ಮೂಡಿಸಿದೆ ಆರ್​ಬಿಐ ವರದಿ
500 ರೂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 30, 2023 | 3:12 PM

Share

ನವದೆಹಲಿ: ಭಾರತದಲ್ಲಿ 500 ರೂ ಮುಖಬೆಲೆಯ ನಕಲಿ ನೋಟುಗಳು (Fake Notes) ಪತ್ತೆಯಾಗುವುದು ಹೆಚ್ಚುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಹೆಚ್ಚೂಕಡಿಮೆ ಒಂದು ಲಕ್ಷ ಸಮೀಪದಷ್ಟು 500 ರೂ ನಕಲಿ ನೋಟುಗಳು ಪತ್ತೆಯಾಗಿವೆ. 2021-22ಕ್ಕೆ ಹೋಲಿಸಿದರೆ 2022-23ರ ಹಣಕಾಸು ವರ್ಷದಲ್ಲಿ 500 ರೂ ಮುಖಬೆಲೆಯ ನಕಲಿ ನೋಟುಗಳು ಶೇ. 14.6ರಷ್ಟು ಹೆಚ್ಚು ಪತ್ತೆಯಾಗಿವೆ. ಹೆಚ್ಚು ನಕಲಿ ನೋಟುಗಳಿರಬಹುದು ಎಂದು ಭಾವಿಸಲಾಗಿರುವ 2,000 ರೂ ಮುಖಬೆಲೆಯ ನೋಟುಗಳಲ್ಲಿ ನಕಲಿ ನೋಟುಗಳು ಪತ್ತೆಯಾಗಿರುವ ಪ್ರಮಾಣ ಶೇ. 28ರಷ್ಟು ಕಡಿಮೆ ಆಗಿದೆ. 500 ರೂ ಮುಖಬೆಲೆ ನಕಲಿ ನೋಟುಗಳ ಸಂಖ್ಯೆ 91,110 ಆದರೆ, 2,000 ರೂ ಮುಖಬೆಲೆಯ ನಕಲಿ ನೋಟುಗಳು 9,806 ಇವೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ಕಂಡು ಬಂದ ಅಂಶ.

ಈ ವರದಿ ಪ್ರಕಾರ 2021-22ರಲ್ಲಿ ಒಟ್ಟು 2,30,971 ನಕಲಿ ನೋಟುಗಳು ಪತ್ತೆಯಾಗಿದ್ದವು. ಈ ಸಂಖ್ಯೆ 2022-23ರಲ್ಲಿ ಇಳಿಮುಖವಾಗಿದೆ. ಈ ಹಣಕಾಸು ವರ್ಷದಲ್ಲಿ ಪತ್ತೆಯಾದ ನಕಲಿ ನೋಟುಗಳ ಸಂಖ್ಯೆ 2,25,769 ಇದೆ. ನಕಲಿ ನೋಟುಗಳು ಪತ್ತೆಯಾಗುವುದು ಹೆಚ್ಚಾಗಿರುವುದು 500 ರೂ ಮತ್ತು 20 ರೂ ಮುಖಬೆಲೆಯ ನೋಟುಗಳು ಮಾತ್ರವೇ. 2000 ರೂ, 10 ರೂ ಮತ್ತು 100 ರೂ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಕಡಿಮೆ ಆಗಿದೆ.

ಇದನ್ನೂ ಓದಿ: SBI: ಫ್ರೀ ಆಗಿ ಬಿಟ್ಟ ಎಸ್​ಬಿಐಗೆ ಮುಗಿಬಿದ್ದರಾ ಜನರು?; 17,000 ಕೋಟಿ ಮೌಲ್ಯದ 2,000 ರೂ ನೋಟುಗಳ ಸಂಗ್ರಹ

ಈ ನಕಲಿ ನೋಟುಗಳು ಪತ್ತೆಯಾಗಿರುವುದು ಎಲ್ಲಿ?

ನಕಲಿ ನೋಟುಗಳ ಹರಿವನ್ನು ಬ್ಯಾಂಕ್ ಹಂತದಲ್ಲಿ ತಡೆಯಲಾಗುತ್ತದೆ. ಬ್ಯಾಂಕಿಗೆ ಬರುವ ಪ್ರತಿಯೊಂದು ನೋಟನ್ನೂ ನಕಲಿ ನೋಟಿಗೆ ಪರಿಶೀಲಿಸಲಾಗುತ್ತದೆ. ಅಷ್ಟಾಗಿಯೂ ಬಹಳಷ್ಟು ನಕಲಿ ನೋಟುಗಳು ಬ್ಯಾಂಕ್ ಗಮನದಿಂದ ತಪ್ಪಿಸಿಕೊಂಡು ಆರ್​ಬಿಐನಲ್ಲಿ ಪತ್ತೆಯಾಗಿವೆ. 2022-23ರಲ್ಲಿ ಪತ್ತೆಯಾದ ನಕಲಿ ನೋಟುಗಳ ಪೈಕಿ ಶೆ. 4.6ರಷ್ಟು ನೋಟುಗಳು ಆರ್​ಬಿಐನಲ್ಲಿ ಪತ್ತೆಯಾಗಿವೆ. ಇನ್ನುಳಿದ ನಕಲಿ ನೋಟುಗಳನ್ನು ಬ್ಯಾಂಕ್​ಗಳಲ್ಲೇ ಕಂಡುಹಿಡಿಯಲಾಗಿದೆ.

ಇದನ್ನೂ ಓದಿ: eSubsidy: ಎಲೆಕ್ಟ್ರಿಕ್ ಗಾಡಿಗಳಿಗೆ ಕೇಂದ್ರದಿಂದ 2.5 ಲಕ್ಷ ರೂವರೆಗೂ ಸಬ್ಸಿಡಿ ಘೋಷಣೆ ಸಾಧ್ಯತೆ; ವಿವಿಧ ರಾಜ್ಯಗಳು ನೀಡುವ ಡಿಸ್ಕೌಂಟ್ ಎಷ್ಟು?

2000 ರೂ, 500 ರೂ ನೋಟುಗಳೇ ಅತಿಹೆಚ್ಚು

ಭಾರತದಲ್ಲಿ ಸದ್ಯ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ನೋಡುವುದಾದರೆ ಶೇ. 87.9ರಷ್ಟು ಮೊತ್ತವು 500 ರೂ ಮತ್ತು 2,000 ರೂ ಮುಖಬೆಲೆಯ ನೋಟುಗಳೇ ಇವೆ. ಇನ್ನು, ಒಟ್ಟಾರೆ ನೋಟುಗಳ ಸಂಖ್ಯೆಯಲ್ಲಿ ಶೇ. 37.9ರಷ್ಟು ನೋಟುಗಳು 500 ರೂನದ್ದಾಗಿದೆ. ಅದಾದ ಬಳಿಕ ಅತಿಹೆಚ್ಚು ನೋಟುಗಳಿರುವುದು 10 ರೂನದ್ದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್