Net Direct tax collection: ಈ ವರ್ಷ ಇಲ್ಲಿಯವರೆಗೆ 9.45 ಲಕ್ಷ ಕೋಟಿ ರೂಪಾಯಿ ನಿವ್ವಳ ತೆರಿಗೆ ಸಂಗ್ರಹ

ಈ ವರ್ಷದಲ್ಲಿ ಇಲ್ಲಿಯವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹದ ಮೊತ್ತವು ಕೇಂದ್ರ ಸರ್ಕಾರಕ್ಕೆ ರೂ. 9.45 ಲಕ್ಷ ಕೋಟಿ ಆಗಿದೆ ಎಂದು ಮಾಹಿತಿ ನೀಡಲಾಗಿದೆ.

Net Direct tax collection: ಈ ವರ್ಷ ಇಲ್ಲಿಯವರೆಗೆ 9.45 ಲಕ್ಷ ಕೋಟಿ ರೂಪಾಯಿ ನಿವ್ವಳ ತೆರಿಗೆ ಸಂಗ್ರಹ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 18, 2021 | 8:10 AM

ಈ ವರ್ಷ ಇಲ್ಲಿಯವರೆಗೆ ಕೇಂದ್ರ ಸರ್ಕಾರದ ನಿವ್ವಳ ನೇರ ತೆರಿಗೆ ಸಂಗ್ರಹವು 9.45 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 60.8ರಷ್ಟು ಬೆಳವಣಿಗೆಯಾಗಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಡಿಸೆಂಬರ್ 16ರ ಇತ್ತೀಚಿನ ಅಂಕಿ-ಅಂಶವು ಜೂನ್, ಸೆಪ್ಟೆಂಬರ್, ಡಿಸೆಂಬರ್ ಮತ್ತು ಮಾರ್ಚ್‌ನಲ್ಲಿನ ವಾರ್ಷಿಕ ಮುಂಗಡ ತೆರಿಗೆ ಸಂಗ್ರಹಗಳ ನಾಲ್ಕು ಕಂತುಗಳಲ್ಲಿ ಮೂರನೇ ನಂತರದ ನೇರ ತೆರಿಗೆ ರಸೀದಿಗಳನ್ನು ಪ್ರತಿನಿಧಿಸುತ್ತದೆ. ಈ ವರ್ಷ ಇಲ್ಲಿಯವರೆಗಿನ ನಿವ್ವಳ ನೇರ ತೆರಿಗೆ ರಸೀದಿಗಳು FY20ರ ಸಾಂಕ್ರಾಮಿಕ-ಪೂರ್ವ ವರ್ಷದಲ್ಲಿ ಹೋಲಿಸಬಹುದಾದ ಅವಧಿ ಜತೆಗೆ ಗಮನಿಸಿದರೆ ಶೇ 40ರಷ್ಟು ಬೆಳವಣಿಗೆಯನ್ನು ತೋರಿಸಿವೆ. ಆದಾಯ ತೆರಿಗೆ ಇಲಾಖೆ ರೂ. 1.35 ಲಕ್ಷ ಕೋಟಿ ರೂಪಾಯಿ ಈ ವರ್ಷ ಇದುವರೆಗೆ ತೆರಿಗೆ ಮರುಪಾವತಿಯಾಗಿದೆ.

ನಿವ್ವಳ ತೆರಿಗೆ ಸಂಗ್ರಹಗಳು ಕಾರ್ಪೊರೇಟ್ ತೆರಿಗೆಯಲ್ಲಿ 5.15 ಲಕ್ಷ ಕೋಟಿ ರೂಪಾಯಿ ಮತ್ತು ಸೆಕ್ಯೂರಿಟೀಸ್ ವಹಿವಾಟು ತೆರಿಗೆಯನ್ನು ಒಳಗೊಂಡಿರುವ ವೈಯಕ್ತಿಕ ಆದಾಯ ತೆರಿಗೆಯಲ್ಲಿ 4.29 ಲಕ್ಷ ಕೋಟಿ ರೂಪಾಯಿ ಸೇರಿವೆ. ಮರುಪಾವತಿಗೆ ಸರಿಹೊಂದಿಸುವ ಮೊದಲು ಒಟ್ಟು ನೇರ ತೆರಿಗೆ ಸಂಗ್ರಹವು ರೂ. 10.8 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ ಹಿಂದಿನ ಹಣಕಾಸು ವರ್ಷದ ಅವಧಿಯಲ್ಲಿ 7.3 ಲಕ್ಷ ಕೋಟಿ ರೂಪಾಯಿ ಆಗಿದೆ. FY22ಗಾಗಿ ಒಟ್ಟು ನೇರ ತೆರಿಗೆ ರಶೀದಿಯಲ್ಲಿ ಸರ್ಕಾರವು 11 ಲಕ್ಷ ಕೋಟಿ ರೂಪಾಯಿ ಗುರಿಯನ್ನು ಹೊಂದಿದೆ. ಜಾಗತಿಕ ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಗ್ರಾಹಕರಿಗೆ ನಿರಾಳ ನೀಡಲು ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ ಕೇಂದ್ರ ಸರ್ಕಾರಕ್ಕೆ ನೇರ ತೆರಿಗೆ ಸಂಗ್ರಹದಲ್ಲಿನ ಬೆಳವಣಿಗೆಯು ಪರಿಹಾರವನ್ನು ನಿರೀಕ್ಷಿಸುತ್ತದೆ.

ಸರ್ಕಾರಿ ಕಂಪೆನಿಗಳಲ್ಲಿ ಷೇರು ಮಾರಾಟದ ಮೂಲಕ 1.75 ಲಕ್ಷ ಕೋಟಿ ರೂಪಾಯಿಯನ್ನು ಸಂಗ್ರಹಿಸುವ ಗುರಿಯನ್ನು ಸಾಧಿಸುವ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಸರ್ಕಾರದ ಹಣಕಾಸಿನ ಸ್ಥಿತಿಗೆ ಸಂಬಂಧಿಸಿದಂತೆ ತೆರಿಗೆ ಆದಾಯದ ಬೆಳವಣಿಗೆಯು ಗಮನಾರ್ಹವಾಗಿದೆ. ಆದರೆ ಸರ್ಕಾರವು ಷೇರು ಮಾರಾಟ ಗುರಿಯನ್ನು ಸಕ್ರಿಯವಾಗಿ ಅನುಸರಿಸುತ್ತಿದೆ. ಪರೋಕ್ಷ ತೆರಿಗೆಯ ಕಡೆಯಿಂದ ಬೇಡಿಕೆ ಮತ್ತು ಹಬ್ಬದ ಋತುವಿನ ಬಳಕೆಯಿಂದಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಆರೋಗ್ಯಕರ ಟ್ರೆಂಡ್ ತೋರಿಸುತ್ತಿದೆ.

FY22ರ ಮೊದಲ, ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಸಂಚಿತ ಮುಂಗಡ ತೆರಿಗೆ ಸಂಗ್ರಹಗಳು ಡಿಸೆಂಬರ್ 16ಕ್ಕೆ ಇದ್ದ 4.59 ಲಕ್ಷ ಕೋಟಿ ರೂಪಾಯಿ ಗಮನಿಸಿದರೆ FY21ರ ಇದೇ ಅವಧಿಯಲ್ಲಿ 2.9 ಲಕ್ಷ ಕೋಟಿ ರೂಪಾಯಿ ಇದ್ದು, ಶೇ 53.5ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: Petrol and Diesel Tax Collection: 3 ಹಣಕಾಸು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆಯ 8.02 ಲಕ್ಷ ಕೋಟಿ ರೂ. ಸಂಗ್ರಹ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್