Halal Certification: ಹೊಸ ಹಲಾಲ್ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ; ಏನಿದು ನೂತನ ನಿಯಮ?

|

Updated on: Apr 09, 2023 | 7:19 PM

Central Govt New Halal Guidelines: ವಿದೇಶಗಳಿಗೆ ರಫ್ತಾಗುವ ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಶನ್ ಅನ್ನು ಸರ್ಕಾರ ಸೂಚಿತ ಕೇಂದ್ರಗಳಿಂದಲೇ ಪಡೆಯಬೇಕಾಗುತ್ತದೆ. ಸರ್ಕಾರ ಇತ್ತೀಚೆಗೆ ಹೊಸ ನಿಯಮಾವಳಿಗಳಿರುವ ಅಧಿಸೂಚನೆ ಹೊರಡಿಸಿದೆ.

Halal Certification: ಹೊಸ ಹಲಾಲ್ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ; ಏನಿದು ನೂತನ ನಿಯಮ?
ನರೇಂದ್ರ ಮೋದಿ
Follow us on

ನವದೆಹಲಿ: ಹಲವು ವಿದೇಶಗಳಲ್ಲಿ ಹಲಾಲ್ ಉತ್ಪನ್ನಗಳಿಗೆ (Halal Products) ಬೇಡಿಕೆ ಇದೆ. ಭಾರತದಿಂದ ಈ ದೇಶಗಳಿಗೆ ರಫ್ತಾಗುವ ಉತ್ಪನ್ನಗಳು ಬಹುತೇಕ ಹಲಾಲ್ ಪ್ರಮಾಣಪತ್ರ (Halal Certification) ಹೊಂದಿರುತ್ತವೆ. ಆದರೆ, ಹಲಾಲ್ ಪ್ರಮಾಣಪತ್ರದಲ್ಲಿ ಭಾರತದಲ್ಲಿ ನಿರ್ದಿಷ್ಟ ನಿಯಮಾವಳಿ ರಚನೆಯಾಗಿರಲಿಲ್ಲ. ಈಗ ಕೇಂದ್ರ ಸರ್ಕಾರ ಈ ವಿಚಾರದ ಬಗ್ಗೆ ಗಮನ ಹರಿಸಿದೆ. ವಿದೇಶಗಳಿಗೆ ರಫ್ತಾಗುವ ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಶನ್ ಅನ್ನು ಸರ್ಕಾರ ಸೂಚಿತ ಕೇಂದ್ರಗಳಿಂದಲೇ ಪಡೆಯಬೇಕಾಗುತ್ತದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ (Quality Council of India) ಮಂಡಳಿಯ ಅಕ್ರೆಡಿಶನ್ ಪಡೆದ ಸಂಸ್ಥೆಯಿಂದ ಪ್ರಮಾಣಪತ್ರ ಹೊಂದಿರುವ ಪ್ಯಾಕೇಜಿಂಗ್ ಕೇಂದ್ರಗಳಲ್ಲಿ ಮಾಂಸ ಉತ್ಪನ್ನಗಳನ್ನು ತಯಾರಿಸಿ ಪ್ರೋಸಸಿಂಗ್ ನಡೆಸಿ ಪ್ಯಾಕ್ ಆಗಿರಬೇಕು. ಆಗಲೇ ಮಾತ್ರ ಹಲಾಲ್ ಸರ್ಟಿಫಿಕೇಶನ್ ಸಿಗುತ್ತದೆ ಎಂದು ಸರ್ಕಾರ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಹೊಸ ನಿಯಮ ಹಲಾಲ್ ಸರ್ಟಿಕೇಶನ್ ಪಡೆಯುವ ಆಹಾರ ಉತ್ಪನ್ನಗಳಿಗೆ ಮಾತ್ರ. ಇತರ ಉತ್ಪನ್ನಗಳ ರಫ್ತು ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್ನು, ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಶನ್ ಬೇಕೆಂಬ ನಿಯಮಗಳು ಇಲ್ಲದಿರವ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುವಾಗ ಆ ದೇಶದ ಅವಶ್ಯಕತೆಗಳಿಗೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನು ಕಳುಹಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಇದನ್ನೂ ಓದಿCashKaro: ಹನಿಮೂನ್ ವೇಳೆ ಬಂದ ಐಡಿಯಾ: ಸ್ವಾತಿ ಭಾರ್ಗವರ ಕ್ಯಾಷ್​ಕರೋ ಕಂಪನಿಗೆ ಇವತ್ತು ಭರ್ಜರಿ ಆದಾಯ

ಹಲಾಲ್ ಸರ್ಟಿಫಿಕೇಟ್ ಕೊಡುವ ಸಂಸ್ಥೆಗಳ ಅಕ್ರೆಡಿಶನ್​ಗೆ 6 ತಿಂಗಳ ಕಾಲಾವಕಾಶ

ಈಗ ಹಲವು ಸಂಸ್ಥೆಗಳು ಹಲಾಲ್ ಸರ್ಟಿಫಿಕೇಶನ್ ನೀಡುತ್ತವೆ. ಇನ್ಮುಂದೆ ಈ ಸಂಸ್ಥೆಗಳು ಎನ್​ಎಬಿಸಿಬಿ (ನ್ಯಾಷನಲ್ ಅಕ್ರೆಡಿಶನ್ ಬೋರ್ಡ್) ಯಿಂದ 6 ತಿಂಗಳ ಒಳಗಾಗಿ ಅಕ್ರೆಡಿಶನ್ ಪಡೆಯಬೇಕು. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಐಸಿಎಎಸ್ (ಇಂಡಿಯನ್ ಕನ್ಫಾರ್ಮಿಟಿ ಅಸೆಸ್ಮೆಂಟ್ ಸ್ಕೀಮ್) ಅಡಿಯಲ್ಲಿ ಈ ಹಲಾಲ್ ಸಂಸ್ಥೆಗಳು ಹಲಾಲ್ ಉತ್ಪಾದನಾ ಕೇಂದ್ರಗಳಿಗೆ ಪರವಾನಿಗೆ ನೀಡುತ್ತವೆ. ಇಂಥ ಕೇಂದ್ರಗಳಲ್ಲಿ ತಯಾರಾಗುವ ಉತ್ಪನ್ನಗಳಿಗೆ ಮಾತ್ರ ಹಲಾಲ್ ಸರ್ಟಿಫಿಕೇಶನ್ ಸಿಗುತ್ತದೆ ಎಂಬುದು ನೋಟಿಫಿಕೇಶನ್​ನಿಂದ ತಿಳಿದುಬರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ