AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NPS vs OPS: ಹಳೆಯ ಪೆನ್ಷನ್ ಸ್ಕೀಮ್​ಗೆ ಮರಳುವ ಯೋಜನೆ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ; ಏನಿದು ಹೊಸ ಪಿಂಚಣಿ ಸ್ಕೀಮ್?

Old Pension System vs National Pension System: ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ನೀಡಲು ಹಳೆಯ ಸ್ಕೀಮ್ ಜಾರಿ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸಚಿವರು ಲೋಕಸಭೆಗೆ ಸ್ಪಷ್ಟಪಡಿಸಿದ್ದಾರೆ. ಹಳೆಯ ಪಿಂಚಣಿ ಸ್ಕೀಮ್​ನಲ್ಲಿ ಸರ್ಕಾರಿ ನೌಕರರು ನಿವೃತ್ತರಾದಾಗ ಅವರ ಕೊನೆಯ ಸಂಬಳದ ಶೇ. 50ರಷ್ಟು ಹಣವನ್ನು ಪಿಂಚಣಿ ಹಣವೆಂದು ನಿರ್ಧರಿಸಲಾಗುತ್ತಿತ್ತು. ಹೊಸ ಪಿಂಚಣಿ ಸ್ಕೀಮ್​ನಲ್ಲಿ ಕನಿಷ್ಠ ಪಿಂಚಣಿ ಮೊತ್ತ ಎಂಬುದಿರುವುದಿಲ್ಲ. ಪೆನ್ಷನ್ ನಿಧಿಯಿಂದ ಹೂಡಿಕೆಯಾದ ಹಣಕ್ಕೆ ಬರುವ ರಿಟರ್ನ್ ಮೇಲೆ ಪೆನ್ಷನ್ ನಿರ್ಧಾರವಾಗುತ್ತದೆ.

NPS vs OPS: ಹಳೆಯ ಪೆನ್ಷನ್ ಸ್ಕೀಮ್​ಗೆ ಮರಳುವ ಯೋಜನೆ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ; ಏನಿದು ಹೊಸ ಪಿಂಚಣಿ ಸ್ಕೀಮ್?
ಪೆನ್ಷನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 13, 2023 | 6:45 PM

Share

ನವದೆಹಲಿ, ಡಿಸೆಂಬರ್ 13: ಸರ್ಕಾರಿ ಉದ್ಯೋಗಿಗಳಿಗೆ ಹಿಂದೆ ಜಾರಿಯಲ್ಲಿದ್ದ ಪಿಂಚಣಿ ಯೋಜನೆಗೆ (Old pension system) ಮರಳುವ ಯಾವ ಆಲೋಚನೆ ತನಗೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮೊನ್ನೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ‘2004ರ ಜನವರಿ 1ರಂದು ಮತ್ತು ಆ ಬಳಿಕ ನೇಮಕವಾದ ಕೇಂದ್ರ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ’ ಎಂದು ಸಚಿವರು ತಿಳಿಸಿದ್ದಾರೆ.

ಐದು ರಾಜ್ಯಗಳು ಓಲ್ಡ್ ಪೆನ್ಷನ್ ಸ್ಕೀಮ್ ಅನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಹಳೆಯ ಪಿಂಚಣಿ ಯೋಜನೆ ಜಾರಿ ಸಾಧ್ಯತೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆದರೆ, ಈ ಸಾಧ್ಯತೆ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇದರೊಂದಿಗೆ ಹೊಸ ಪಿಂಚಣಿ ಸ್ಕೀಮ್ ಆದ ನ್ಯಾಷನಲ್ ಪೆನ್ಷನ್ ಸಿಸ್ಟಂ (National Pension System) ಅನ್ನೇ ಸರ್ಕಾರಿ ಉದ್ಯೋಗಿಗಳಿಗೆ ಮುಂದುವರಿಸಲಾಗುತ್ತದೆ.

ಇದನ್ನೂ ಓದಿ: APY: ಅಟಲ್ ಪೆನ್ಷನ್ ಸ್ಕೀಮ್ ಪಡೆದವರ ಸಂಖ್ಯೆ 6 ಕೋಟಿಗೆ ಏರಿಕೆ; ಯಾವುದಿದು ಪಿಂಚಣಿ ಯೋಜನೆ?

ಆದರೆ, ಎನ್​ಪಿಎಸ್ ಬಗ್ಗೆ ಸಾಕಷ್ಟು ಆಕ್ಷೇಪಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳೇನೆಂದು ಗುರುತಿಸಿ ಅದಕ್ಕೆ ಪರಿಹಾರ ಹುಡುಕಲು ಒಂದು ಸಮಿತಿ ರಚಿಸಲಾಗಿದೆ. ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಈ ಕಮಿಟಿ ನೇತೃತ್ವ ವಹಿಸಿದ್ದಾರೆ.

ಹಳೆಯ ಪೆನ್ಷನ್ ಸ್ಕೀಮ್ ಮತ್ತು ಹೊಸ ಪೆನ್ಷನ್ ಸ್ಕೀಮ್ ಮಧ್ಯೆ ಏನು ವ್ಯತ್ಯಾಸ?

ಹಳೆಯ ಪೆನ್ಷನ್ ಸ್ಕೀಮ್ ಆದ ಒಪಿಎಸ್​ನಲ್ಲಿ ಸರ್ಕಾರಿ ಉದ್ಯೋಗಿ ನಿವೃತ್ತರಾದಾಗ ಅವರ ಕೊನೆಯ ಸಂಬಳದ ಶೇ. 50ರಷ್ಟು ಹಣವನ್ನು ಮಾಸಿಕ ಪಿಂಚಣಿಯಾಗಿ ನೀಡಲಾಗುತ್ತದೆ. ಸೇವೆಯಲ್ಲಿರುವಾಗ ಉದ್ಯೋಗಿಯ ಸಂಬಳದಲ್ಲಿ ಪಿಂಚಣಿಗಾಗಿ ಹಣವನ್ನು ಕಡಿತ ಮಾಡಲಾಗುತ್ತಿರಲಿಲ್ಲ.

ಇದನ್ನೂ ಓದಿ: Sovereign Gold Bond Scheme: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್, 3ನೇ ಮತ್ತು 4ನೇ ಸರಣಿ ಬಾಂಡ್​ಗಳ ಬಿಡುಗಡೆ ದಿನಾಂಕ ಪ್ರಕಟ

ಹೊಸ ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಉದ್ಯೋಗಿಯ ಮೂಲ ವೇತನದ ಶೇ. 10ರಷ್ಟು ಹಣವನ್ನು ಕಡಿತ ಮಾಡಿ ಪೆನ್ಷನ್ ಫಂಡ್​ಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಶೇ. 14ರಷ್ಟು ಕೊಡುಗೆ ನೀಡುತ್ತದೆ. ಈ ಹಣವನ್ನು ಸರ್ಕಾರದ ಸಾಲಪತ್ರಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಆದರೆ, ಪಿಂಚಣಿ ಹಣ ನಿರ್ದಿಷ್ಟವಾಗಿರುವುದಿಲ್ಲ. ಹೂಡಿಕೆಯಿಂದ ಸಿಗುವ ರಿಟರ್ನ್ ಮೇಲೆ ಪಿಂಚಣಿ ಮೊತ್ತ ನಿರ್ಧಾರಿತವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?