AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

APY: ಅಟಲ್ ಪೆನ್ಷನ್ ಸ್ಕೀಮ್ ಪಡೆದವರ ಸಂಖ್ಯೆ 6 ಕೋಟಿಗೆ ಏರಿಕೆ; ಯಾವುದಿದು ಪಿಂಚಣಿ ಯೋಜನೆ?

Atal Pension Yojana: ಎಂಟು ವರ್ಷದ ಹಿಂದೆ ಜಾರಿಗೆ ಬಂದ ಅಟಲ್ ಪಿಂಚಣಿ ಯೋಜನೆಯನ್ನು ಈವರೆಗೂ ಪಡೆದವರ ಸಂಖ್ಯೆ ಆರು ಕೋಟಿ ದಾಟಿದೆ. 18ರಿಂದ 40 ವರ್ಷ ವಯಸ್ಸಿನ ವ್ಯಕ್ತಿಗಳು ಈ ಪೆನ್ಷನ್ ಸ್ಕೀಮ್ ಪಡೆಯಬಹುದಾಗಿದ್ದು, ತಿಂಗಳಿಗೆ ಒಂದರಿಂದ ಐದು ಸಾವಿರ ರೂಗಳ ಪಿಂಚಣಿಗೆ ಅವಕಾಶ ಇದೆ. ಪ್ರೀಮಿಯಮ್ ಪಾವತಿಯನ್ನು ತಿಂಗಳಿಗೆ, ಮೂರು ತಿಂಗಳಿಗೆ ಅಥವಾ ವರ್ಷಕ್ಕೆ ಮಾಡುವ ಆಯ್ಕೆ ಇರುತ್ತದೆ. ಪಿಂಚಣಿಗೂ ಕೂಡ ಬೇರೆ ಬೇರೆ ಅವಧಿ ಆಯ್ಕೆಗಳಿರುತ್ತವೆ.

APY: ಅಟಲ್ ಪೆನ್ಷನ್ ಸ್ಕೀಮ್ ಪಡೆದವರ ಸಂಖ್ಯೆ 6 ಕೋಟಿಗೆ ಏರಿಕೆ; ಯಾವುದಿದು ಪಿಂಚಣಿ ಯೋಜನೆ?
ಅಟಲ್ ಪೆನ್ಷನ್ ಯೋಜನಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 13, 2023 | 6:09 PM

Share

ನವದೆಹಲಿ, ಡಿಸೆಂಬರ್ 13: ಸರ್ಕಾರದಿಂದ ನಡೆಸಲಾಗುವ ಪ್ರಮುಖ ಪಿಂಚಣಿ ಯೋಜನೆಗಳಲ್ಲಿ ಅಟಲ್ ಪೆನ್ಷನ್ ಯೋಜನಾ (atal pension yojana) ಒಂದು. ಈ ಸಾಮಾಜಿಕ ಭದ್ರತಾ ಯೋಜನೆಯ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಅಟಲ್ ಪೆನ್ಸನ್ ಯೋಜನೆ ಅಥವಾ ಪಿಎಂ ಎಪಿವೈ ಸ್ಕೀಮ್ ಅನ್ನು 79 ಲಕ್ಷ ಮಂದಿ ಪಡೆದಿದ್ದಅರೆ. ಇದರೊಂದಿಗೆ ಈ ಪಿಂಚಣಿ ಸ್ಕೀಮ್ ಪಡೆದ ಜನರ ಸಂಖ್ಯೆ 6 ಕೋಟಿ ದಾಟಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಹಿತಿಯಿಂದ ತಿಳಿದುಬಂದಿದೆ.

ಕೇಂದ್ರ ಸರ್ಕಾರ 2015ರ ಮೇ 9ರಂದು ಅಟಲ್ ಪೆನ್ಷನ್ ಯೋಜನೆಯನ್ನು ಜಾರಿಗೆ ತಂದಿತು. ಎಲ್ಲಾ ಪ್ರಜೆಗಳಿಗೂ ಈ ಸ್ಕೀಮ್ ಇದೆಯಾದರೂ ಬಡಜನರು, ಅಸಂಘಟಿತ ವಲಯದವರು ಹಾಗೂ 60 ವರ್ಷ ಮೇಲ್ಪಟ್ಟ ವಯಸ್ಸಿನವರ ಮೇಲೆ ಹೆಚ್ಚಿನ ಗಮನ ಕೊಡಲಾಗಿದೆ. ಸರ್ಕಾರಿ ಸ್ವಾಮ್ಯದ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (ಪಿಎಫ್​ಆರ್​ಡಿಎ) ಸಂಸ್ಥೆ ಈ ಪೆನ್ಷನ್ ಸ್ಕೀಮ್ ಅನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ: Sovereign Gold Bond Scheme: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್, 3ನೇ ಮತ್ತು 4ನೇ ಸರಣಿ ಬಾಂಡ್​ಗಳ ಬಿಡುಗಡೆ ದಿನಾಂಕ ಪ್ರಕಟ

ಏನಿದು ಅಟಲ್ ಪೆನ್ಷನ್ ಯೋಜನಾ?

ಎಪಿವೈ ಸ್ಕೀಮ್ ಅನ್ನು 18ರಿಂದ 40 ವರ್ಷದೊಳಗಿನ ವಯಸ್ಸಿನವರು ಪಡೆಯಬಹುದು. ಒಂದು ಸಾವಿರ ರೂನಿಂದ ಹಿಡಿದು ಐದು ಸಾವಿರ ರೂವರೆಗೂ ಪಿಂಚಣಿ ತರುವ ವಿವಿಧ ಪ್ಲಾನ್​ಗಳು ಇದರಲ್ಲಿವೆ.

ನಿಯಮಿತವಾಗಿ ಹಣ ಕಟ್ಟುತ್ತಾ ಹೋದರೆ 60ನೇ ವಯಸ್ಸಿನ ಬಳಿಕ ಪಿಂಚಣಿ ಬರಲು ಆರಂಭವಾಗುತ್ತದೆ. 18ನೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ ಅಟಲ್ ಪೆನ್ಷನ್ ಸ್ಕೀಮ್ ಅನ್ನು ಆರಂಭಿಸಿದರೆ ಪ್ರತೀ ತಿಂಗಳು 42 ರೂ ಕಟ್ಟುತ್ತಾ ಹೋದರೆ 1,000 ರೂ ಪಿಂಚಣಿ ಬರುತ್ತದೆ. 5,000 ರೂ ಪಿಂಚಣಿ ಬೇಕೆಂದರೆ 18ರ ವಯಸ್ಸಿನಿಂದ ಪ್ರತೀ ತಿಂಗಳು 210 ರೂ ಕಟ್ಟುತ್ತಾ ಹೋಗಬೇಕಾಗುತ್ತದೆ.

ಇದನ್ನೂ ಓದಿ: ಶೇ. 8ರವರೆಗೂ ಬಡ್ಡಿ; ಈ ಮೂರು ಬ್ಯಾಂಕ್​ಗಳ ಸ್ಪೆಷಲ್ ಠೇವಣಿ ಪ್ಲಾನ್​ಗಳಿಗೆ ಡಿಸೆಂಬರ್ 31 ಡೆಡ್​ಲೈನ್

ಇದು ಕಡಿಮೆ ಆದಾಯ ಗುಂಪಿನ ಜನರಿಗೆಂದು ಮಾಡಲಾದ ಸ್ಕೀಮ್ ಆಗಿದ್ದರಿಂದ ಇನ್ಕಮ್ ಸರ್ಟಿಫಿಕೇಟ್ ಸಲ್ಲಿಸಬೇಕಾಗುತ್ತದೆ. ಈ ಸ್ಕೀಮ್ ಅನ್ನು ಬ್ಯಾಂಕ್​ಗಳಲ್ಲಿಯೂ ಪಡೆಯಬಹುದು. ಆದಾಯ ಪ್ರಮಾಣಪತ್ರ, ಆಧಾರ್, ಪ್ಯಾನ್ ಇತ್ಯಾದಿ ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ತಿಂಗಳಿಗೆ, ಮೂರು ತಿಂಗಳಿಗೆ, ವರ್ಷಕ್ಕೆ ಹೀಗೆ ಪಾವತಿ ಅವಧಿಯನ್ನು ನೀವೆ ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಪಿಂಚಣಿ ಕೂಡ ಮಾಸಿಕವೋ, ವಾರ್ಷಿಕೋ ಯಾವುದೆಂದು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ