ಕಾರು ಖರೀದಿ ಮಾಡಬೇಕು ಅಂತಿದ್ದೀರಾ? ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಈ ಋತುವು ಸರಿಯಾದ ಸಮಯ ಆಗಲಿದೆ. ಈ ಹಬ್ಬದ ಋತುವಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್ಗಳಿಂದ ಆಕರ್ಷಕ ಆಫರ್ಗಳನ್ನು ನೀಡಲಾಗುತ್ತಿದೆ. ಈ ವರೆಗಿನ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವಾಹನ ಖರೀದಿದಾರರಿಗೆ ಸಾಲ ದೊರೆಯುತ್ತಿದೆ. ಹಲವು ಬ್ಯಾಂಕ್ಗಳು ಪ್ರೊಸೆಸಿಂಗ್ ಶುಲ್ಕವನ್ನು ಹಿಂಪಡೆದಿವೆ. ಇನ್ನೂ ಕೆಲವು ಬ್ಯಾಂಕ್ಗಳು ವಾಹನದ ಆನ್- ರೋಡ್ ಬೆಲೆಯ ಶೇ 90ರ ತನಕ ಸಾಲ ದೊರೆಯುತ್ತದೆ. ಸದ್ಯಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ ಅತ್ಯಂತ ಅಗ್ಗದ ವಾಹನ ಸಾಲ ಒದಗಿಸುತ್ತಿದೆ. ದರ ಪರಿಷ್ಕರಣೆ ನಂತರ ಶೇ 0.50ರಷ್ಟು ಇಳಿಕೆ ಮಾಡಲಾಗಿದೆ. ಆ ನಂತರ ಬಡ್ಡಿ ದರವು ವಾರ್ಷಿಕ ಶೇ 6.85 ಆಗಿದೆ. ಉಳಿದ ಪ್ರಮುಖ ಬ್ಯಾಂಕ್ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸದ್ಯಕ್ಕೆ ಶೇ 7.25ರ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದೆ. ಯಾವುದೇ ಪ್ರೊಸೆಸಿಂಗ್ ಶುಲ್ಕ ಇಲ್ಲ. ಅಷ್ಟೇ ಅಲ್ಲ, ಕಾರಿನ ಆನ್ ರೋಡ್ ಬೆಲೆಯ ಶೇ 90ರ ತನಕ ಸಾಲ ದೊರೆಯುತ್ತದೆ. 5 ಲಕ್ಷ ರೂಪಾಯಿಯ ಸಾಲ ಆಗಿ, ಐದು ವರ್ಷದ ಅವಧಿಗೆ ಆದಲ್ಲಿ ಪ್ರತಿ ತಿಂಗಳು 9960 ರೂಪಾಯಿ ಇಎಂಐ ಬರುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಹಬ್ಬದ ಸೀಸನ್ ಪ್ರಯುಕ್ತ ದೇಶದ ಎರಡನೇ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಚೆಗೆ ಬಡ್ಡಿ ದರವನ್ನು ಇಳಿಕೆ ಮಾಡಿದ್ದು, ಶೇ 7.15ರ ದರದಲ್ಲಿ ಆರಂಭವಾಗುತ್ತದೆ. ಇದರ ಜತೆಗೆ ಗ್ರಾಹಕರು ಪ್ರೊಸೆಸಿಂಗ್ ಶುಲ್ಕ ಪಾವತಿಸುವ ಅಗತ್ಯ ಇಲ್ಲ. ಯಾವ ಗ್ರಾಹಕರು 5 ಲಕ್ಷ ರೂಪಾಯಿ ಸಾಲವನ್ನು 5 ವರ್ಷದ ಅವಧಿಗೆ ಪಡೆಯುತ್ತಾರೋ ಅಂಥವರಿಗೆ ಪ್ರತಿ ತಿಂಗಳಿಗೆ 9936 ರೂಪಾಯಿ ಇಎಂಐ ಬರುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್
ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್ಡಿಎಫ್ಸಿ ಬ್ಯಾಂಕ್ ಹಬ್ಬದ ಋತುವಿನ ಪ್ರಯುಕ್ತ ವಿಶೇಷ ಆಫರ್ ನೀಡುತ್ತಿದೆ. ಬಡ್ಡಿ ದರ ಶೇ 7.50 ಮೇಲ್ಪಟ್ಟು ಇದ್ದು, ಪೂರ್ವ ಪಾವತಿಗೆ ಶೂನ್ಯ ಶುಲ್ಕ ಇದೆ. ಜತೆಗೆ ಕಾರಿನ ಬೆಲೆಯು ಶೇ 100ರಷ್ಟು ಸಾಲ ದೊರೆಯುತ್ತದೆ. ಈ ರಿಯಾಯಿತಿಯು ನವೆಂಬರ್ 30, 2021ರ ತನಕ ಅನ್ವಯಿಸುತ್ತದೆ.
ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ನಿಂದ ಕಾರು ಸಾಲವು ಶೇ 7.90 ಬಡ್ಡಿ ದರದಲ್ಲಿ ನೀಡಲಾಗುತ್ತದೆ ಗ್ರಾಹಕರಿಗೆ 8 ವರ್ಷಗಳ ಅವಧಿಗೆ ದೊರೆಯುತ್ತದೆ.
ಇದನ್ನೂ ಓದಿ: Deepavali Bank Offers: ದೀಪಾವಳಿಗೆ ಇಂಡಸ್ಇಂಡ್, ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಆಫರ್ಗಳಿವು