Deepavali Bank Offers: ದೀಪಾವಳಿಗೆ ಇಂಡಸ್​ಇಂಡ್​, ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ, ಆಕ್ಸಿಸ್​ ಬ್ಯಾಂಕ್ ಆಫರ್​ಗಳಿವು

ದೀಪಾವಳಿ ಹಬ್ಬದ ಋತುವಿನ ಪ್ರಯುಕ್ತ ಇಂಡಸ್​ಇಂಡ್ ಬ್ಯಾಂಕ್ ಒಳಗೊಂಡಂತೆ ಎಚ್​ಡಿಎಫ್​ಸಿ ಬ್ಯಾಂಕ್, ಎಸ್​ಬಿಐ, ಐಸಿಐಸಿಐ ಬ್ಯಾಂಕ್, ಆಕ್ಸಿಸ್​ ಬ್ಯಾಂಕ್​ನಿಂದ ಆಫರ್​ಗಳನ್ನು ನೀಡಲಾಗುತ್ತಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Deepavali Bank Offers: ದೀಪಾವಳಿಗೆ ಇಂಡಸ್​ಇಂಡ್​, ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ, ಆಕ್ಸಿಸ್​ ಬ್ಯಾಂಕ್ ಆಫರ್​ಗಳಿವು
ಸಾಂದರ್ಭಿಕ ಚಿತ್ರ

ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಶಾಪಿಂಗ್​ ಮೇಲೆ ವಿವಿಧ ಆಫರ್​ಗಳನ್ನು ನೀಡುವ ಸಾಲಿಗೆ ಈಗ ಇಂಡಸ್​ಇಂಡ್​ ಬ್ಯಾಂಕ್ ಕೂಡ ಸೇರ್ಪಡೆ ಆಗಿದೆ. ಈಗಾಗಲೇ ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಿಂದ ಹಬ್ಬದ ಋತುವಿಗೆ ಆಫರ್​ಗಳನ್ನು ಘೋಷಿಸಲಾಗಿದೆ. ಅಕ್ಟೋಬರ್ 20ನೇ ತಾರೀಕಿನಿಂದ ಡೆಬಿಟ್ ಕಾರ್ಡ್ ಪಾವತಿಗೆ ಇಎಂಐ ವ್ಯವಸ್ಥೆ ವಿಸ್ತರಿಸಲಾಗಿದೆ. ವಯಕ್ತಿಕವಾಗಿ ಹೆಚ್ಚಿನ ಮೊತ್ತದ ವಹಿವಾಟು ನಡೆಸಿದ ಮೇಲೆ ಇಎಂಐ ವ್ಯವಸ್ಥೆಗೆ ಮಾರ್ಪಾಟು ಮಾಡಿಕೊಳ್ಳಬಹುದು. ಮೂರರಿಂದ 24 ತಿಂಗಳ ಅವಧಿಗೆ ಕನ್ವರ್ಟ್ ಮಾಡಿಸಬಹುದು. ಪ್ರಾಥಮಿಕವಾಗಿ ಇದು ವ್ಯಕ್ತಿಯ ಉಳಿತಾಯ ಖಾತೆಯ ಮೇಲಿನ ಸಾಲದ ವ್ಯವಸ್ಥೆ. ಸಾಮಾನ್ಯವಾಗಿ, ಗ್ರಾಹಕ ಉಪಯೋಗಿ ವಸ್ತುಗಳು, ಮೊಬೈಲ್ ಫೋನ್​ಗಳು, ಫ್ಯಾಷನ್​ ಐಟಮ್​ಗಳು ಮತ್ತು ಪರಿಕರಗಳನ್ನು ಈ ಸ್ಕೀಮ್​ ಅಡಿಯಲ್ಲಿ ಖರೀದಿ ಮಾಡಬಹುದು.

ಆಫರ್
ಬ್ಯಾಂಕ್​ ಡೆಬಿಟ್ ಕಾರ್ಡ್​ದಾರರು ಯಾವುದೇ ಸ್ಟೋರ್​ಗೆ ತೆರಳಿ, ಪಿಒಎಸ್​ ಟರ್ಮಿನಲ್​ಗಳಲ್ಲಿ ಸರಳವಾಗಿ ಸ್ವೈಪ್ ಮಾಡುವ ಮೂಲಕ ಈ ವ್ಯವಸ್ಥೆ ಪಡೆಯಬಹುದು. ಇಂಡಸ್​ಇಂಡ್ ಬ್ಯಾಂಕ್​ನಿಂದ 60,000 ಆಫ್​ಲೈನ್ ಮರ್ಚೆಂಟ್ ಔಟ್​ಲೆಟ್​ಗಳ ಜತೆ ಸಹಭಾಗಿತ್ವ ವಹಿಸಿದೆ. ಇದರಲ್ಲಿ ದೊಡ್ಡ ಫಾರ್ಮಾಟ್​ನ ರೀಟೇಲರ್​ಗಳು, ಹೈಪರ್​ ಮಾರ್ಕೆಟ್​ಗಳು, ಮಲ್ಟಿ ಬ್ರ್ಯಾಂಡ್ ಏಕ ಸ್ಟೋರ್​ಗಳು ಒಳಗೊಂಡಿವೆ. ಗ್ರಾಹಕ ಉಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ಪರಿಕರಗಳು, ಆಟೋಮೊಬೈಲ್ಸ್ ಮುಂತಾದವು ವಿಭಾಗಗಳಿವೆ. ಬ್ಯಾಂಕ್​ನಿಂದ ಸದ್ಯದಲ್ಲೇ ಪ್ರಮುಖ ಇ-ಕಾಮರ್ಸ್​ ಪ್ಲಾಟ್​ಫಾರ್ಮ್​ಗಳ ಜತೆಗೆ ಸಹಭಾಗಿ ಆಗಿ, ಆನ್​ಲೈನ್ ಖರೀದಿ ಮಾಡಲು ಸಹ ಅನುಕೂಲ ಆಗುತ್ತದೆ. ಬ್ಯಾಂಕ್​ನ ಡೆಬಿಟ್​ಕಾರ್ಡ್​ದಾರರು ಉತ್ಪನ್ನಗಳನ್ನು ಖರೀದಿಸಿ, ಯಾವ ಅವಧಿಗೆ ಇಎಂಐ – 3, 6, 9, 12, 18 ಮತ್ತು 24 ತಿಂಗಳಿಗೆ ದೊರೆಯುತ್ತದೆ. ಗ್ರಾಹಕರು ತಮ್ಮ ಅರ್ಹತೆಯನ್ನು ಪರೀಕ್ಷೆ ಮಾಡಲು MYOFR ಅಂತ ಟೈಪ್ ಮಾಡಿ ಎಸ್ಸೆಮ್ಮೆಸ್​ ಅನ್ನು 5676757ಗೆ ಕಳಿಸಬೇಕು.

ಇತರ ಬ್ಯಾಂಕ್​ಗಳ ಆಫರ್​ಗಳು
ಈ ಸೌಲಭ್ಯವನ್ನು ನೀಡಿದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಎಸ್​ಬಿಐ. ಸಾಲವನ್ನು ಪಡೆಯಲು ಯಾವುದೇ ಪೂರ್ವ-ಅನುಮೋದಿತ ಮೊತ್ತ ಅಥವಾ ಡಾಕ್ಯುಮೆಂಟ್ ಅಗತ್ಯ ಇಲ್ಲ. ಯಾವುದೇ ಪ್ರೊಸೆಸಿಂಗ್ ಫೀ ಅಗತ್ಯವಿಲ್ಲ. ರೂ. 8,000 ಮತ್ತು ರೂ. 1 ಲಕ್ಷದ ಮಧ್ಯದ ಯಾವುದೇ ವಹಿವಾಟಿಗೆ ಈ ಅನುಕೂಲವನ್ನು ಪಡೆಯಬಹುದು. ಇದು ಗ್ರಾಹಕರ ಯಾವುದೇ ಉಳಿತಾಯ ಖಾತೆಯಲ್ಲಿ ಬಾಕಿಯನ್ನು (Balance) ನಿರ್ಬಂಧಿಸುವುದಿಲ್ಲ.

ಗ್ರಾಹಕರು ತಮ್ಮ ಆಯ್ಕೆಯ ಅವಧಿ ಆರು ತಿಂಗಳು, ಒಂಬತ್ತು ತಿಂಗಳು, 12 ತಿಂಗಳು ಮತ್ತು 18 ತಿಂಗಳು ಆಯ್ಕೆ ಮಾಡಿಕೊಳ್ಳಬಹುದು. ಬ್ಯಾಂಕ್​ನಲ್ಲಿ ಸಲ್ಲಿಸಿರುವ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 567676ಗೆ DCEMI ಎಂದು ಕಳುಹಿಸುವ ಮೂಲಕ ಗ್ರಾಹಕರು ತಮ್ಮ ಅರ್ಹತೆಯನ್ನು ಪರಿಶೀಲಿಸಬಹುದು.

ಐಸಿಐಸಿಐ ಬ್ಯಾಂಕ್‌: ಖಾಸಗಿ ಬ್ಯಾಂಕ್​ ಆದ ಐಸಿಐಸಿಐ ಬ್ಯಾಂಕ್​ನಿಂದ ಈ ಪ್ರಯೋಜನವನ್ನು ಪಡೆಯುವುದಕ್ಕೆ ಇರುವ ಏಕೈಕ ಷರತ್ತು ಅಂದರೆ, ಉಳಿತಾಯ ಖಾತೆಗೆ ಜೋಡಣೆ ಆದಂತೆ ಕನಿಷ್ಠ 10,000 ರೂಪಾಯಿಗಳ ಫಿಕ್ಸೆಡ್ ಡೆಪಾಸಿಟ್ ಹೊಂದಿರಬೇಕು. ಒಂದು ವರ್ಷದವರೆಗೆ ಅವಧಿಯನ್ನು ಆಯ್ಕೆ ಮಾಡುವವರಿಗೆ ಬಡ್ಡಿದರಗಳು ಶೇ 13ರಿಂದ ಪ್ರಾರಂಭವಾಗುತ್ತವೆ. ಮರುಪಾವತಿಗೆ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಬೇಕಾದರೆ ಬಡ್ಡಿದರವು ಇಳಿಕೆ (Reducing) ವಿಧಾನದಲ್ಲಿ ಶೇ 15 ಆಗಿರುತ್ತದೆ. ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಮೂರು ತಿಂಗಳಿಂದ 24 ತಿಂಗಳವರೆಗೆ ಇಎಂಐ ಆಯ್ಕೆಗೆ ಅವಕಾಶವಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌: ಈ ಬ್ಯಾಂಕ್​ನಲ್ಲಿ ಮೂರು ತಿಂಗಳಿಂದ 24 ತಿಂಗಳವರೆಗೆ ಮರುಪಾವತಿ ಅವಧಿ ದೊರೆಯುತ್ತದೆ. ಇದರ ಜತೆಗೆ ಶೀಘ್ರ ಅನುಮೋದನೆ ಮತ್ತು ವಿತರಣೆ ಸಿಗುತ್ತದೆ. ಪ್ರಾಡಕ್ಟ್​ ಒಟ್ಟು ಮೊತ್ತದ ಶೇ 100ರ ವರೆಗೆ ನೀವು ‘ಶೂನ್ಯ’ ಪ್ರೊಸೆಸಿಂಗ್ ಶುಲ್ಕದೊಂದಿಗೆ ಲಭ್ಯವಿದೆ. ಇಎಂಐ ಸೌಲಭ್ಯವನ್ನು ಪಡೆಯಲು ಎಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್ ಬಳಕೆದಾರರು – MYHDFC ಎಂದು 5676712ಗೆ ಸಂದೇಶ ಕಳುಹಿಸಬಹುದು. ಆ ಸಂದೇಶ ಕಳುಹಿಸಿದ ನಂತರ ಸಾಲದ ಮೊತ್ತ, ಕಾನೂನುಬದ್ಧತೆ, ಮುಗಿಯುವ ಅವಧಿ ಮತ್ತು ವ್ಯಾಪಾರಿಯ ಹೆಸರಿನ ಬಗ್ಗೆ ಮಾಹಿತಿ ಸಿಗುತ್ತದೆ. ದೇಶದಲ್ಲಿ ಡೆಬಿಟ್ ಕಾರ್ಡ್‌ಗೆ ಇಎಂಐ ಸೌಲಭ್ಯವನ್ನು ಪರಿಚಯಿಸಿದ ಮೊದಲ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್.

ಆಕ್ಸಿಸ್ ಬ್ಯಾಂಕ್: ಈ ಬ್ಯಾಂಕ್​ನ ಡೆಬಿಟ್ ಕಾರ್ಡ್‌ಗಳಲ್ಲಿ ಕೂಡ ಇಎಂಐ ಸೌಲಭ್ಯ ಸಿಗುತ್ತದೆ. ಪಾರ್ಟನರ್​ ಅಂಗಡಿಗಳಲ್ಲಿ ಮತ್ತು ಪಾಯಿಂಟ್​ ಆಫ್ ಸೇಲ್ಸ್​ಗಳಲ್ಲಿ ಯಾವುದೇ ಹೆಚ್ಚಿನ ಮೊತ್ತದ ಖರೀದಿಗಳನ್ನು ಸುಲಭವಾಗಿ ಮಾಸಿಕ ಕಂತುಗಳಾಗಿ ಪರಿವರ್ತಿಸಬಹುದು. ಬಡ್ಡಿದರವು ವರ್ಷಕ್ಕೆ ಶೇ 14ರ ದರದಲ್ಲಿ ಇಳಿಕೆಯ ಆಧಾರದ ಮೇಲೆ ಇರುತ್ತದೆ. ಈ ಸೇವೆಯನ್ನು ಬಳಸಿಕೊಂಡು ಒಬ್ಬರು ಮುಂಗಡವಾಗಿ ಕನಿಷ್ಠ ಮೊತ್ತ 10,000 ರೂಪಾಯಿ, ಗರಿಷ್ಠ ಮೊತ್ತ 1 ಲಕ್ಷ ರೂಪಾಯಿ ಪಡೆಯಬಹುದು. ಅದಕ್ಕಾಗಿ ಪ್ರೊಸೆಸಿಂಗ್ ಫೀ ಶೇ 1ರಷ್ಟು ಅಥವಾ 150 ರೂಪಾಯಿ ಇವೆರಡರಲ್ಲಿ ಯಾವುದು ಹೆಚ್ಚೋ ಅದನ್ನು ಭರಿಸಬೇಕಾಗುತ್ತದೆ. ಇದು ಒಂದು ಬಾರಿಯ ಶುಲ್ಕ ಆಗಿರುತ್ತದೆ.

ಆರ್‌ಬಿಐ ದತ್ತಾಂಶದ ಪ್ರಕಾರ, 2021ರ ಮೇ ತಿಂಗಳವರೆಗೆ ದೇಶದಲ್ಲಿ 6.3 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಮತ್ತು 91 ಕೋಟಿ ಡೆಬಿಟ್ ಕಾರ್ಡ್‌ಗಳಿವೆ. 91 ಕೋಟಿ ಡೆಬಿಟ್ ಕಾರ್ಡ್‌ಗಳಲ್ಲಿ ಗರಿಷ್ಠ ಶೇ 3ರಷ್ಟು ಇಎಂಐ ಸೌಲಭ್ಯವನ್ನು ಹೊಂದಿವೆ. ಎಸ್‌ಬಿಐ ಅಧ್ಯಯನದ ಪ್ರಕಾರ, 2025ರ ವೇಳೆಗೆ ಕನಿಷ್ಠ ಶೇ 55ರಷ್ಟು ಡೆಬಿಟ್ ಕಾರ್ಡ್‌ಗಳಿಗೆ ಇಎಂಐ ಸೌಲಭ್ಯ ಲಭ್ಯವಾಗುವಂತೆ ನೋಡಿಕೊಳ್ಳಬಹುದು.

ಇದನ್ನೂ ಓದಿ: Home Loan: ಸ್ವ ಉದ್ಯೋಗಿಗಳಿಗೆ ಕಡಿಮೆ ಬಡ್ಡಿ ದರಕ್ಕೆ ಹೋಮ್​ ಲೋನ್ ನೀಡುವ ಬ್ಯಾಂಕ್​ಗಳು, ಹೌಸಿಂಗ್ ಫೈನಾನ್ಸ್ ಕಂಪೆನಿಗಳಿವು

Click on your DTH Provider to Add TV9 Kannada