AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಶಿಯೋಮಿ ಸಂಸ್ಥೆಯ 5500 ಕೋಟಿ ರೂ ಜಪ್ತಿ ವಿರುದ್ಧ ಸಂಸ್ಥೆ ಆಕ್ಷೇಪ, ರಿಟ್ ಅರ್ಜಿ ವಿಚಾರಣೆ

ಜಪ್ತಿಯಿಂದ ಹಣದ ವಹಿವಾಟಿಗೆ ಅಡ್ಡಿಯಾಗಿರುವುದಾಗಿ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಮಧ್ಯೆ, 5,500 ಕೋಟಿಗೆ ಬ್ಯಾಂಕ್ ಗ್ಯಾರಂಟಿ ನೀಡಲು ಹೈಕೋರ್ಟ್ ಸಲಹೆ ನೀಡಿದೆ.

ಚೀನಾದ ಶಿಯೋಮಿ ಸಂಸ್ಥೆಯ 5500 ಕೋಟಿ ರೂ ಜಪ್ತಿ ವಿರುದ್ಧ ಸಂಸ್ಥೆ ಆಕ್ಷೇಪ, ರಿಟ್ ಅರ್ಜಿ ವಿಚಾರಣೆ
ಜಪ್ತಿಯಿಂದ ಹಣದ ವಹಿವಾಟಿಗೆ ಅಡ್ಡಿಯಾಗಿರುವುದಾಗಿ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಮಧ್ಯೆ, 5,500 ಕೋಟಿಗೆ ಬ್ಯಾಂಕ್ ಗ್ಯಾರಂಟಿ ನೀಡಲು ಹೈಕೋರ್ಟ್ ಸಲಹೆ ನೀಡಿದೆ.
TV9 Web
| Edited By: |

Updated on:Oct 06, 2022 | 1:53 PM

Share

ಬೆಂಗಳೂರು: ಚೀನಾ ಮೂಲದ ಶಿಯೋಮಿ (China Xiaomi) ಸಂಸ್ಥೆಯ 5,500 ಕೋಟಿ ರೂ ಜಪ್ತಿ (seizure of over ₹5,500-cr assets) ವಿರುದ್ಧ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ. ಜಾರಿ ನಿರ್ದೇಶನಾಲಯದ ಜಪ್ತಿ ಕ್ರಮ ಪ್ರಶ್ನಿಸಿ ಸಂಸ್ಥೆ ರಿಟ್ ಅರ್ಜಿ (writ petition) ಸಲ್ಲಿಸಿದ್ದು, ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ರಿಟ್ ಅರ್ಜಿ ವಿಚಾರಣೆ ನಡೆದಿದೆ. ಜಪ್ತಿಯಿಂದ ಹಣದ ವಹಿವಾಟಿಗೆ ಅಡ್ಡಿಯಾಗಿರುವುದಾಗಿ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.

ಈ ಮಧ್ಯೆ, 5,500 ಕೋಟಿಗೆ ಬ್ಯಾಂಕ್ ಗ್ಯಾರಂಟಿ ನೀಡಲು ಹೈಕೋರ್ಟ್ ಸಲಹೆ ನೀಡಿದೆ. ಬ್ಯಾಂಕ್ ಗ್ಯಾರಂಟಿ ನೀಡಿದರೆ ಮಾತ್ರ ಜಪ್ತಿಗೆ ತಡೆ ನೀಡಬಹುದು ಎಂದು ಹೈಕೋರ್ಟ್ ನ್ಯಾ. ಎನ್.ಎಸ್. ಸಂಜಯ್ ಗೌಡ ಅಭಿಪ್ರಾಯಪಟ್ಟಿದ್ದಾರೆ. ಪ್ರತಿಕ್ರಿಯೆ ಸಲ್ಲಿಸಲು ಇ.ಡಿ, ಶಿಯೋಮಿ ಸಂಸ್ಥೆಗೆ ಸೂಚನೆ ನೀಡಿ, ವಿಚಾರಣೆಯನ್ನು ಅಕ್ಟೋಬರ್​ 14ಕ್ಕೆ ಮಂದೂಡಿದೆ.

FEMA ಉಲ್ಲಂಘನೆಯಾಗಿಲ್ಲ -ಶಿಯೋಮಿ ಪುನರುಚ್ಚಾರ

ಇಡಿ 5,500 ಕೋಟಿ ರೂಪಾಯಿ ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಲ್ಲಿ 84 % ಮೊತ್ತವನ್ನು ಪೇಟೆಂಟ್ ತಂತ್ರಜ್ಞಾನದ ಬಳಕೆಗಾಗಿ ಅಮೆರಿಕದ ಮೊಬೈಲ್ ತಂತ್ರಜ್ಞಾನ ಸಂಸ್ಥೆ ಕ್ವಾಲ್ಕಾಮ್ ಇಂಕ್‌ ಟೆಕ್ ಸಂಸ್ಥೆಗೆ ಪಾವತಿ ಮಾಡಿದ್ದೇವೆ ಎಂದು Xiaomi ಇಂಡಿಯಾ ಕರ್ನಾಟಕ HC ಗೆ ತಿಳಿಸಿದೆ. ಹೀಗೆ ಮೂರು ವಿದೇಶಿ ಕಂಪನಿಗಳಿಗೆ ಪಾವತಿಸಿರುವ ತಂತ್ರಜ್ಞಾನದ ರಾಯಧನವು (ರಾಯಲ್ಟಿ) ಫೆಮಾ ಕಾನೂನಿಗೆ (FEMA) ವಿರುದ್ಧವಾಗಿಲ್ಲ ಎಂದು ಶಿಯೋಮಿ ಇಂಡಿಯಾ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತ್ತು.

ಶಿಯೋಮಿ ಟೆಕ್ನಾಲಜಿ ಇಂಡಿಯಾ ಸಂಸ್ಥೆಯು 2016 ರಿಂದ ವಿದೇಶಿ ಖಾತೆಗಳಿಗೆ 5,500 ಕೋಟಿ ರೂಪಾಯಿಗಳ ರಾಯಲ್ಟಿ ಪಾವತಿಗಳು ಆಗಿವೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ಉಲ್ಲಂಘನೆಯಾಗಿದೆ ಎಂಬ ಆಧಾರದ ಮೇಲೆ ED ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ.

Published On - 1:22 pm, Thu, 6 October 22