Closing Bell: 58 ಸಾವಿರ ಪಾಯಿಂಟ್ಸ್​ಗಿಂತ ಕೆಳಗಿಳಿದ ಸೆನ್ಸೆಕ್ಸ್; ಪವರ್​ಗ್ರಿಡ್ ಕಾರ್ಪೊರೇಷನ್ ಶೇ 4ರಷ್ಟು ಇಳಿಕೆ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 3ನೇ ತಾರೀಕಿನ ಶುಕ್ರವಾರ ಭಾರೀ ಇಳಿಕೆ ಆಗಿದೆ. ಕುಸಿತ ಹಾಗೂ ಏರಿಕೆ ಕಂಡ ಷೇರುಗಳ ವಿವರ ಇಲ್ಲಿದೆ.

Closing Bell: 58 ಸಾವಿರ ಪಾಯಿಂಟ್ಸ್​ಗಿಂತ ಕೆಳಗಿಳಿದ ಸೆನ್ಸೆಕ್ಸ್; ಪವರ್​ಗ್ರಿಡ್ ಕಾರ್ಪೊರೇಷನ್ ಶೇ 4ರಷ್ಟು ಇಳಿಕೆ
ಸಾಂದರ್ಭಿಕ ಚಿತ್ರ
Edited By:

Updated on: Dec 03, 2021 | 5:45 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್​ 3ನೇ ತಾರೀಕಿನ ಶುಕ್ರವಾರ ಭಾರೀ ಇಳಿಕೆ ಆಗಿದೆ. ಅಂದಹಾಗೆ ಸೆನ್ಸೆಕ್ಸ್ 58 ಸಾವಿರ ಪಾಯಿಂಟ್ಸ್​ಗಿಂತ ಕೆಳಗೆ ಇಳಿದಿದೆ. ಷೇರುಪೇಟೆಗೆ ವಾರಾಂತ್ಯದ ದಿನವಾದ ಶುಕ್ರವಾರದ ಕೊನೆ ಸೆನ್ಸೆಕ್ಸ್ 764.83 ಪಾಯಿಂಟ್ಸ್ ಅಥವಾ ಶೇ 1.31 ಇಳಿಕೆ ಕಂಡು 57,696.46 ಪಾಯಿಂಟ್ಸ್​​ನೊಂದಿಗೆ ವ್ಯವಹಾರ ಮುಗಿದಿದೆ. ಇನ್ನು ನಿಫ್ಟಿ ಸೂಚ್ಯಂಕವು 205 ಪಾಯಿಂಟ್ಸ್​ ಅಥವಾ ಶೇ 1.18ರಷ್ಟು ಕುಸಿತ ಕಂಡು, 17,196.70 ಪಾಯಿಂಟ್ಸ್​​ನೊಂದಿಗೆ ವಹಿವಾಟು ಚುಕ್ತಾ ಮಾಡಿದೆ. 1722 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1453 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ. ಇನ್ನು 137 ಕಂಪೆನಿಗಳ ಷೇರಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕ್ಯಾಪಿಟಲ್ ಗೂಡ್ಸ್​ ಹೊರತುಪಡಿಸಿ ಎಲ್ಲ ವಲಯದ ಸೂಚ್ಯಂಕಗಳು ಇಳಿಕೆಯಲ್ಲೇ ದಿನಾಂತ್ಯ ಮುಗಿಸಿದೆ. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ಮಹತ್ವದ ಬದಲಾವಣೆಗಳೇನೂ ಆಗಿಲ್ಲ. ವಿಶ್ಲೇಷಕರ ಅಭಿಪ್ರಾಯ ಪ್ರಕಾರ, ಮುಂದಿನ ವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿಯ ಬಗ್ಗೆ ಹೂಡಿಕೆದಾರರು ಎಚ್ಚರಿಕೆ ವಹಿಸಿದ್ದಾರೆ. ಜತೆಗೆ ಭಾರತದಲ್ಲಿ ಒಮಿಕ್ರಾನ್ ಪ್ರಕರಣ ವರದಿ ಆದ ಮೇಲೆ ಆತಂಕ ಮತ್ತೂ ಹೆಚ್ಚಾಗಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಯುಪಿಎಲ್ ಶೇ 2.08
ಬಿಪಿಸಿಎಲ್ ಶೇ 1.86
ಒಎನ್​ಜಿಸಿ ಶೇ 1.32
ಐಒಸಿ ಶೇ 1.28
ಲಾರ್ಸನ್ ಶೇ 0.67

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಪವರ್​ಗ್ರಿಡ್ ಕಾರ್ಪೊರೇಷನ್ ಶೇ -3.92
ರಿಲಯನ್ಸ್ ಶೇ -3.00
ಕೊಟಕ್ ಮಹೀಂದ್ರಾ ಶೇ -2.55
ಟೆಕ್​ ಮಹೀಂದ್ರಾ ಶೇ -2.23
ಏಷ್ಯನ್ ಪೇಂಟ್ಸ್ ಶೇ -2.21

ಇದನ್ನೂ ಓದಿ: Multibagger: ಈ ಷೇರಿನ ಮೇಲೆ ಹೂಡಿಕೆ ಮಾಡಿದ್ದ 1 ಲಕ್ಷ ರೂಪಾಯಿ 8 ತಿಂಗಳಲ್ಲಿ 71 ಲಕ್ಷ ರೂಪಾಯಿ