ಸೆನ್ಸೆಕ್ಸ್ 500ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 143 ಪಾಯಿಂಟ್ಸ್ ಕುಸಿತ; Tega Industries ಷೇರುಗಳು ಶೇ 68ರಷ್ಟು ಪ್ರೀಮಿಯಂ ಲಿಸ್ಟಿಂಗ್

| Updated By: Srinivas Mata

Updated on: Dec 13, 2021 | 4:46 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 13ರಂದು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ. ಯಾವ ಕಂಪೆನಿ ಷೇರುಗಳು ಏರಿವೆ ಹಾಗೂ ಯಾವುವು ಇಳಿದಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಸೆನ್ಸೆಕ್ಸ್ 500ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 143 ಪಾಯಿಂಟ್ಸ್ ಕುಸಿತ; Tega Industries ಷೇರುಗಳು ಶೇ 68ರಷ್ಟು ಪ್ರೀಮಿಯಂ ಲಿಸ್ಟಿಂಗ್
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 13ನೇ ತಾರೀಕಿನ ಸೋಮವಾರದಂದು ಕುಸಿತ ಕಂಡಿದೆ. ಸತತ ಎರಡನೇ ಸೆಷನ್ ಇಳಿಕೆ ಆಗಿದ್ದು, ರಿಯಾಲ್ಟಿ, ತೈಲ ಮತ್ತು ಅನಿಲ ಹಾಗೂ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಷೇರುಗಳಲ್ಲಿ ಮಾರಾಟದ ಒತ್ತಡ ಕಂಡುಬಂತು. ಸೋಮವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕವು 503.25 ಪಾಯಿಂಟ್ಸ್ ಅಥವಾ ಶೇ 0.86ರಷ್ಟು ಕುಸಿತವಾಗಿ, 58,283.42 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಕ್ತಾಯಗೊಳಿಸಿತು. ಇನ್ನು ನಿಫ್ಟಿ ಸೂಚ್ಯಂಕವು 143 ಪಾಯಿಂಟ್ಸ್ ಅಥವಾ ಶೇ 0.82ರಷ್ಟು ಇಳಿಕೆ ಕಂಡು, 17,368.30 ಪಾಯಿಂಟ್ಸ್​ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು.

ಈ ದಿನದ ವಹಿವಾಟಿನಲ್ಲಿ 1840 ಕಂಪೆನಿಗಳ ಷೇರು ಏರಿಕೆಯನ್ನು ದಾಖಲಿಸಿದರೆ, 1554 ಕಂಪೆನಿಯ ಷೇರುಗಳು ಇಳಿಕೆ ಕಂಡವು. ಇನ್ನು 158 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ವಲಯವಾರು ಬೆಳವಣಿಗೆಯನ್ನು ಗಮನಿಸುವುದಾದರೆ, ನಿಫ್ಟಿಯ ಮಾಹಿತಿ ತಂತ್ರಜ್ಞಾನ ಹೊರತುಪಡಿಸಿ ಉಳಿದೆಲ್ಲವೂ ಇಳಿಕೆಯನ್ನು ಕಂಡವು. ಬಿಎಸ್​ಇ ಮಿಡ್​ಕ್ಯಾಪ್ ಸೂಚ್ಯಂಕವು ಶೇ 0.5ರಷ್ಟು ಇಳಿಯಿತು. ಸ್ಮಾಲ್​ಕ್ಯಾಪ್ ಸೂಚ್ಯಂಕವು ಶೇ 20ರಷ್ಟು ಏರಿಕೆ ಕಂಡಿತು.

ಇಂದು Tega Indutries ಶೇ 68ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್ ಮಾಡಿತು. ಪ್ರತಿ ಷೇರಿಗೆ 453 ರೂಪಾಯಿಯಂತೆ ವಿತರಿಸಲಾಗಿತ್ತು. ಎನ್​ಎಸ್​ಇಯಲ್ಲಿ ಈ ಷೇರಿನ ವಹಿವಾಟು 760 ರೂಪಾಯಿಯಂತೆ ಶುರುವಾಯಿತು. ದಿನದ ಗರಿಷ್ಠ ಮಟ್ಟ 767.70 ರೂಪಾಯಿ ಹಾಗೂ ಕನಿಷ್ಠ ಮಟ್ಟವಾದ 712.25 ರೂಪಾಯಿ ಮುಟ್ಟಿತು. ದಿನಾಂತ್ಯಕ್ಕೆ 726.05 ರೂಪಾಯಿಯೊಂದಿಗೆ ವ್ಯವಹಾರ ಮುಗಿಸಿತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಆಕ್ಸಿಸ್ ಬ್ಯಾಂಕ್ ಶೇ 2.32
ಟೆಕ್ ಮಹೀಂದ್ರಾ ಶೇ 2.22
ಮಾರುತಿ ಸುಜುಕಿ ಶೇ 1.22
ವಿಪ್ರೋ ಶೇ 1.12
ಎಸ್​ಬಿಐ ಲೈಫ್ ಇನ್ಷೂರೆನ್ಸ್ ಶೇ 0.94

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಬಜಾಜ್ ಫೈನಾನ್ಸ್ ಶೇ -3.14
ಬಜಾಜ್ ಫಿನ್​ಸರ್ವ್​ ಶೇ -2.19
ಟಾಟಾ ಕನ್​ಸ್ಯೂಮರ್​ ಪ್ರಾಡಕ್ಟ್ಸ್ ಶೇ -2.02
ರಿಲಯನ್ಸ್ ಶೇ -2.00
ಮಹೀಂದ್ರಾ ಅಂಡ್ ಮಹೀಂದ್ರಾ ಶೇ -1.93

ಇದನ್ನೂ ಓದಿ: Multibagger Stocks: ಈ ಕಂಪೆನಿ ಷೇರುಗಳ ಮೇಲೆ ಮಾಡಿದ ರೂ. 1 ಲಕ್ಷದ ಹೂಡಿಕೆ 3 ವರ್ಷದಲ್ಲಿ 5.67 ಕೋಟಿ ರೂಪಾಯಿ