ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿಯ ಎಲ್ಲ ವಲಯದ ಷೇರುಗಳಲ್ಲೂ ಶುಕ್ರವಾರ (ಮಾರ್ಚ್ 19, 2021) ಖರೀದಿ ಕಂಡುಬಂತು. ಆ ಹಿನ್ನೆಲೆಯಲ್ಲಿ ದಿನಾಂತ್ಯದ ಕೊನೆಗೆ ಸೆನ್ಸೆಕ್ಸ್ 641.72 ಪಾಯಿಂಟ್ಸ್ ಅಥವಾ ಶೇಕಡಾ 1.30ಯಷ್ಟು ಏರಿಕೆಯೊಂದಿಗೆ 49,858.24 ಪಾಯಿಂಟ್ನೊಂದಿಗೆ ವ್ಯವಹಾರ ಮುಗಿಸಿತು. ಇನ್ನು ನಿಫ್ಟಿ ಸೂಚ್ಯಂಕವು 186.10 ಪಾಯಿಂಟ್ ಅಥವಾ ಶೇ 1.28ರಷ್ಟು ಮೇಲೇರಿ, 14,744 ಪಾಯಿಂಟ್ನೊಂದಿಗೆ ವಹಿವಾಟು ಚುಕ್ತಾ ಮಾಡಿತು.
ಈ ದಿನದ ವಹಿವಾಟಿನಲ್ಲಿ 1461 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1418 ಕಂಪೆನಿಯ ಷೇರುಗಳ ಬೆಲೆಗಳು ಇಳಿದವು. ಇನ್ನು 200 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಎಲ್ಲ ವಲಯದ ಸೂಚ್ಯಂಕಗಳು ಗಳಿಕೆಯಲ್ಲೇ ಮುಕ್ತಾಯ ಕಂಡವು. ನಿಫ್ಟಿ ಎನರ್ಜಿ ಶೇ 3ರಷ್ಟು ಏರಿಕೆ ದಾಖಲಿಸಿತು. ಬಿಎಸ್ಇ ಮಿಡ್ಕ್ಯಾಪ್ ಹಾಗೂ ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಶೇ 0.4ರಿಂದ ಶೇ 1.3ರಷ್ಟು ಏರಿಕೆಗೆ ಕಾರಣ ಆದವು.
ಡಾಲರ್ ವಿರುದ್ಧ ರೂಪಾಯಿ ಮೌಲ್ಯ 72.51ರಲ್ಲಿ ಕೊನೆಯಾಯಿತು. ದಿನದ ಆರಂಭದಲ್ಲಿ ವಹಿವಾಟು 72.58ರೊಂದಿಗೆ ಶುರುವಾಯಿತು. ಈ ಹಿಂದಿನ ಸೆಷನ್ನಲ್ಲಿ ರೂಪಾಯಿ ಮೌಲ್ಯ 72.52ರಲ್ಲಿ ಕೊನೆಯಾಗಿತ್ತು. ಈ ದಿನ 72.46ರಿಂದ 72.58ರ ಮಧ್ಯೆ ವಹಿವಾಟು ನಡೆಸಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾ ಪ್ರಮಾಣ
ಎನ್ಟಿಪಿಸಿ ಶೇ 4.53
ಎಚ್ಯುಎಲ್ ಶೇ 4.37
ಪವರ್ಗ್ರಿಡ್ ಕಾರ್ಪ್ ಶೇ 4.14
ಜೆಎಸ್ಡಬ್ಲ್ಯು ಸ್ಟೀಲ್ ಶೇ 4.11
ಯುಪಿಎಲ್ ಶೇ 4.02
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾ ಪ್ರಮಾಣ
ಲಾರ್ಸನ್ -ಶೇ 1.18
ಟೆಕ್ ಮಹೀಂದ್ರಾ -ಶೇ 0.68
ಕೋಲ್ ಇಂಡಿಯಾ -ಶೇ 0.55
ಬಜಾಜ್ ಆಟೋ -ಶೇ 0.39
ಟೈಟಾನ್ ಕಂಪೆನಿ -ಶೇ 0.19
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
ಇದನ್ನೂ ಓದಿ: Tata Group Founders Day: ಹೂಡಿಕೆದಾರರಿಗೆ ಅದ್ಭುತ ಲಾಭ ಮೊಗೆದುಕೊಟ್ಟ ಟಾಟಾ ಸಮೂಹ ಕಂಪೆನಿಗಳು