ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 14ನೇ ಬಜೆಟ್ ಮಂಡಿಸಿದ್ದು, ಈ ಬಾರಿ ಬಜೆಟ್ ಗಾತ್ರ 3,27,747 ಲಕ್ಷ ಕೋಟು ರೂ ಗಾತ್ರದ್ದಾಗಿದೆ. ಇದರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿಯೇ 7ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. 3.27 ಲಕ್ಷ ಕೋಟಿ ರೂ ಬಜೆಟ್ನಲ್ಲಿ ಸಾಲ ಮರುಪಾವತಿಗೆ 22,441 ಕೋಟಿ ರೂ ವ್ಯಯವಾಗಲಿದೆ. ಇನ್ನು ಬಂಡವಾಳ ಹೂಡಿಕೆಗಳಿಗೆ 54,374 ಕೋಟಿ ರೂ ವೆಚ್ಚ ಮಾಡಲಾಗುತ್ತದೆ ಎಂಬ ಸಂಗತಿಯನ್ನು ಸಿದ್ದರಾಮಯ್ಯ ತಿಳಿಸಿದ್ದಾರೆ.
ಆದಾಯ ಹೆಚ್ಚಿಸಲು ಸರ್ಕಾರ ನಿರೀಕ್ಷೆಯಂತೆ ಅಬಕಾರಿ ಸುಂಕವನ್ನು ಶೇ. 20ರಷ್ಟು ಹೆಚ್ಚಿಸಿದೆ. ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಈ ಗ್ಯಾರಂಟಿ ಯೋಜನೆಗಳು ಬಿಟ್ಟಿ ಯೋಜನೆಗಳಲ್ಲ ಎಂದು ಹೇಳುತ್ತಾ ಬಿಆರ್ ಅಂಬೇಡ್ಕರ್ ಮಾತುಗಳನ್ನು ಉಲ್ಲೇಖಿಸಿದರು.
ಇದನ್ನೂ ಓದಿ: Liquor Prices in Karnataka: ಮದ್ಯ ಪ್ರಿಯರಿಗೆ ಬಿಗ್ ಶಾಕ್, ಕರ್ನಾಟಕದಲ್ಲಿ ಅಬಕಾರಿ ತೆರಿಗೆ ಹೆಚ್ಚಳ
ಐದು ಗ್ಯಾರಂಟಿ ಯೋಜನೆಗಳಿಗೆ 52,000 ಕೋಟಿ ರೂ ವ್ಯಯವಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ, ಕೇಂದ್ರದಿಂದ ತೆರಿಗೆ ಪಾಲಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ. ಕರ್ನಾಟಕ ಹೆಚ್ಚು ತೆರಿಗೆ ಸಂಗ್ರಹಿಸಿದರೂ ಶೇ. 3.65ರಷ್ಟು ಮಾತ್ರ ತೆರಿಗೆ ಪಾಲು ಸಿಗುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ದ್ರೋಹ ಬಗೆಯಲಾಗಿದೆ ಎಂದು ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.
ಒಟ್ಟು ಬಜೆಟ್ ಗಾತ್ರ: 3.27 ಲಕ್ಷ ಕೋಟಿ ರೂ
ಲೋಕಪಯೋಗಿ ಇಲಾಖೆಗೆ: 10,143 ಕೋಟಿ ರೂ
ಆಹಾರ ಇಲಾಖೆ: 10,460 ಕೋಟಿ ರೂ
ಸಮಾಜ ಕಲ್ಯಾಣ ಇಲಾಖೆ: 11,173 ಕೋಟಿ ರೂ
ನಮ್ಮ ಮೆಟ್ರೋ ಯೋಜನೆ: 30,000 ಕೋಟಿ ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ