AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Digital Economy: ಡಿಜಿಟಲ್ ಇಂಡಿಯಾ ಏನು ಫಲಕೊಟ್ಟಿದೆ? ಡಿಜಿಟಲ್ ಎಕನಾಮಿ ಎಷ್ಟಿದೆ?; ಅಮೂಲಾಗ್ರ ಅಧ್ಯಯನಕ್ಕೆ ಸರ್ಕಾರ ಮುಂದು?

Central Government to Measure Digital Economy: ಸರ್ಕಾರ ಮುಂದಿನ 9 ತಿಂಗಳ ಕಾಲ ಭಾರತದಲ್ಲಿ ಡಿಜಿಟಲ್ ಆರ್ಥಿಕತೆಯ ಪರಿಸ್ಥಿತಿಯನ್ನು ಅವಲೋಕಿಸಿ, ಮುಂದಿನ 5 ವರ್ಷಗಳಿಗೆ ಮಾರ್ಗ ರೂಪಿಸಲು ನಿರ್ಧರಿಸಿದೆ. (News18 Exclusive)

Digital Economy: ಡಿಜಿಟಲ್ ಇಂಡಿಯಾ ಏನು ಫಲಕೊಟ್ಟಿದೆ? ಡಿಜಿಟಲ್ ಎಕನಾಮಿ ಎಷ್ಟಿದೆ?; ಅಮೂಲಾಗ್ರ ಅಧ್ಯಯನಕ್ಕೆ ಸರ್ಕಾರ ಮುಂದು?
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 07, 2023 | 11:45 AM

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಡಿಜಿಟಲ್ ಇಂಡಿಯಾ (Digital India) ಮಹದ್ ಯೋಜನೆ ಶುರುವಾಯಿತು. ಇದಾದ ಬಳಿಕ ಭಾರತದ ಡಿಜಿಟಲ್ ವ್ಯವಸ್ಥೆ ಅಗಾಧವಾಗಿ ಬೆಳೆದಿದೆ. ಡಿಜಿಟಲ್ ಇಂಡಿಯಾ ಎಷ್ಟರಮಟ್ಟಿಗೆ ಸಾಕಾರಗೊಂಡಿದೆ, ಎಷ್ಟು ಉದ್ಯೋಗಸೃಷ್ಟಿಯಾಗಿದೆ, ಎಷ್ಟು ವ್ಯವಹಾರ ಜೋಡಿತವಾಗಿದೆ, ಡಿಜಿಟಲ್ ಆರ್ಥಿಕತೆಯ (Digital Economy) ಗಾತ್ರ ಎಷ್ಟಿದೆ ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಒದಗಿಸಲು ಸರ್ಕಾರ ಮುಂದಾಗಿದೆ. ಖಾಸಗಿ ಹಣಕಾಸು ಏಜೆನ್ಸಿಗಳು ಸಾಮಾನ್ಯವಾಗಿ ಇಂಥ ಅಧ್ಯಯನ ಮತ್ತು ಅವಲೋಕನ ನಡೆಸುತ್ತವೆ. ಗೂಗಲ್ ಸಂಸ್ಥೆ ಇತ್ತೀಚೆಗಷ್ಟೇ ಇಂಥದ್ದೊಂದು ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ 2030ರಷ್ಟರಲ್ಲಿ ಭಾರತದ ಡಿಜಿಟಲ್ ಆರ್ಥಿಕತೆಯು 1 ಟ್ರಿಲಿಯನ್ ಡಾಲರ್ ತಲುಪಬಹುದು ಎಂದು ಅಂದಾಜಿಸಿದೆ. ಆದರೆ, ಜಿಡಿಪಿ ಇತ್ಯಾದಿಯನ್ನು ಅಳೆಯುವ ಸರ್ಕಾರ ಯಾವತ್ತೂ ಡಿಜಿಟಲ್ ಆರ್ಥಿಕತೆಯ ಆಳ ಅಗಲ ಅಳೆಯುವ ಗೋಜಿಗೆ ಹೋಗಿರಲಿಲ್ಲ. ಈಗ ಆ ಕೆಲಸ ಮಾಡಲು ಸರ್ಕಾರ ಮುಂದಾಗಿದೆ ಎಂದು ನ್ಯೂಸ್18 ಸುದ್ದಿವಾಹಿನಿ ವರದಿ ಮಾಡಿದೆ.

2024ರ ಲೋಕಸಭಾ ಚುನಾವಣೆಯಷ್ಟರಲ್ಲಿ ಈ ವರದಿ ತಯಾರಿಸುವುದು ಸರ್ಕಾರದ ಆಲೋಚನೆ ಇದ್ದಂತಿದೆ. 2015ರಲ್ಲಿ ಡಿಜಿಟಲ್ ಇಂಡಿಯಾ ಆರಂಭಗೊಂಡಂದಿನಿಂದ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ, ಯಾವ್ಯಾವ ಮೈಲಿಗಲ್ಲು ಮುಟ್ಟಲಾಗಿದೆ, ಆರ್ಥಿಕತೆಗೆ ಡಿಜಿಟಲ್ ಇಂಡಿಯಾ ಯಾವ ರೀತಿಯಲ್ಲಿ ಪುಷ್ಟಿ ಕೊಟ್ಟಿದೆ ಇವೇ ಇತ್ಯಾದಿ ಅಂಕಿಅಂಶಗಳನ್ನು ಸರ್ಕಾರ ಹೊರತೆಗೆಯಲಿದೆ. ಮುಂದಿನ 9 ತಿಂಗಳು ಈ ಕೆಲಸ ಭರಪೂರವಾಗಿ ನಡೆಯಲಿದ್ದು, ಮುಂದಿನ 5 ವರ್ಷದಲ್ಲಿ ಡಿಜಿಟಲ್ ಆರ್ಥಿಕತೆಯ ದಾರಿ ಹೇಗೆ ಸಾಗಲಿದೆ ಎಂಬುದನ್ನೂ ಅವಲೋಕಿಸಲಾಗುತ್ತದೆ. ಚುನಾವಣೆಗೆ ಮುನ್ನ ಸರ್ಕಾರ ತನ್ನ ಸಾಧನೆ ಹಾಗೂ ಭವಿಷ್ಯದ ಸ್ಥಿತಿಯನ್ನು ಜನರ ಮುಂದಿಡುವ ಪ್ರಯತ್ನವಾಗಲಿದೆ.

ಇದನ್ನೂ ಓದಿGo First: ಗೋಫಸ್ಟ್​ಗೆ ತಿಂಗಳಿಗೆ 5 ಎಂಜಿನ್ ಒದಗಿಸಿ: ಪಿಅಂಡ್​ಡಬ್ಲ್ಲ್ಯೂಗೆ ಸಿಂಗಾಪುರ ಕೋರ್ಟ್ ಆದೇಶ

ಭಾರತದ ಡಿಜಿಟಲ್ ಆರ್ಥಿಕತೆಯ ಅಳತೆ ಮತ್ತು ಅಂದಾಜು ಕಾರ್ಯಗಳು ನಡೆಯಲಿದೆ. ಜಾಗತಿಕವಾಗಿ ಡಿಜಿಟಲ್ ಆರ್ಥಿಕತೆಯ ಮಾಪನಕ್ಕೆ ಬಳಸಲಾಗುವ ವಿಧಾನಗಳನ್ನು ಈ ಸಂದರ್ಭದಲ್ಲಿ ಅವಲೋಕಿಸಲಾಗುತ್ತದೆ. ಭಾರತಕ್ಕೆ ಸೂಕ್ತವಾಗುವ ವಿಧಾನವನ್ನು ಗುರುತಿಸುವ ಕೆಲಸವೂ ಈ ಸಂದರ್ಬದಲ್ಲಿ ಆಗುತ್ತದೆ ಎಂದು ಹಿರಿಯ ಅಧಿಕಾರಿಗಳು ನ್ಯೂಸ್18 ಬಳಿ ಅಭಿಪ್ರಾಯ ವ್ಯಕ್ತಪಡಿಸಿರುವುದು ತಿಳಿದುಬಂದಿದೆ.

ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನ ಬಹಳ ದೊಡ್ಡದಾಗಿ ಬೆಳೆದಿದೆ. ಯುಪಿಐ ಇತ್ಯಾದಿ ಡಿಜಿಟಲ್ ಪಾವತಿ ಮುಕ್ಕಾಲು ಭಾಗದ ಜನಸಂಖ್ಯೆಯನ್ನು ತಲುಪಿದೆ. ಸ್ಮಾರ್ಟ್​ಫೋನ್​ಗಳು ಬಹಳ ಮಂದಿಯನ್ನು ತಲುಪಿದೆ. ಇದು ಇಕಾಮರ್ಸ್ ಸೇರಿದಂತೆ ಡಿಜಿಟಲ್ ಆರ್ಥಿಕತೆ ಭರ್ಜರಿಯಾಗಿ ಬೆಳೆಯಲು ಸಾಧ್ಯವಾಗಿಸಿದೆ. ಇದರ ಪರಿಣಾಮವಾಗಿ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಇದೆ.

ಇದನ್ನೂ ಓದಿInvestment Options: ಭೂಮಿ ಮತ್ತು ಚಿನ್ನ; ಯಾವುದರ ಮೇಲೆ ಹೂಡಿಕೆ ಉತ್ತಮ? ಸಾಧಕ, ಬಾಧಕ ತಿಳಿದಿರಿ

ಇದೆಲ್ಲವನ್ನೂ ಹೊರಜಗತ್ತಿಗೆ ಮೊಗೆದು ತೋರಿಸಲು ಈಗ ಸರ್ಕಾರ ಸನ್ನದ್ಧವಾಗಿದೆ. 2029-30ರವರೆಗೂ ಭಾರತದ ಡಿಜಿಟಲ್ ಆರ್ಥಿಕತೆ ಎಷ್ಟು ಗಾತ್ರವಾಗಬಹುದು ಎಂದು ಒಂದು ಗುರಿ ನಿಗದಿ ಮಾಡುವುದರ ಜೊತೆಗೆ, ಆ ಗುರಿ ಈಡೇರಿಕೆಗೆ ಸೂಕ್ತ ವಿಧಾನ ಮತ್ತು ಮಾರ್ಗವನ್ನು ಸರ್ಕಾರ ಪ್ರಸ್ತುತಪಡಿಸಲಿರುವ ಆಲೋಚನೆ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?