Coca Cola: ಭಾರತದಲ್ಲಿ ಮದ್ಯ ಮಾರಾಟಕ್ಕಿಳಿದ ಕೋಕ ಕೋಲ; ರೆಡಿ ಟು ಡ್ರಿಂಕ್ ಲೆಮನ್ ಡೋ ಬಿಡುಗಡೆ

Ready-to-dring Alcohol Lemon Dou By Coca Cola: ಪಾನೀಯ ಮಾರಾಟಗಾರ ಕೋಕಾ ಕೋಲ ಸಂಸ್ಥೆ ಭಾರತದಲ್ಲಿ ಲಿಕ್ಕರ್ ಉತ್ಪನ್ನ ಪರಿಚಯಿಸುತ್ತಿದೆ. ರೆಡಿ ಟು ಡ್ರಿಂಕ್ ಮದ್ಯ ಪಾನೀಯ ಬಿಡುಗಡೆ ಮಾಡಿದೆ. ಕೋಕಾ ಕೋಲಾದ ಲೆಮನ್ ಡೌ ಉತ್ಪನ್ನವು ಮಹಾರಾಷ್ಟ್ರದ ಕೆಲ ಪ್ರದೇಶಗಳು ಹಾಗೂ ಗೋವಾದಲ್ಲಿ ಬಿಡುಗಡೆ ಆಗಿದೆ. 250 ಎಂಎಲ್​ನ ಕ್ಯಾನ್ ಬೆಲೆ 230 ರೂ ಇದೆ. ಕೋಕ ಕೋಲ ಲೆಮನ್ ಡೌ ಉತ್ಪನ್ನವನ್ನು ಚುಹಾಯ್ ಹೆಸರಿನಲ್ಲಿ ಐದು ವರ್ಷದ ಹಿಂದೆ ಜಪಾನ್​ನಲ್ಲಿ ಹೊರತಂದಿತ್ತು. ಚೀನಾ, ಫಿಲಿಪ್ಪೈನ್ಸ್ ದೇಶಗಳಲ್ಲೂ ಇದು ಲಭ್ಯ ಇದೆ.

Coca Cola: ಭಾರತದಲ್ಲಿ ಮದ್ಯ ಮಾರಾಟಕ್ಕಿಳಿದ ಕೋಕ ಕೋಲ; ರೆಡಿ ಟು ಡ್ರಿಂಕ್ ಲೆಮನ್ ಡೋ ಬಿಡುಗಡೆ
ಕೋಕಾ ಕೋಲಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 11, 2023 | 11:12 AM

ಮುಂಬೈ, ಡಿಸೆಂಬರ್ 11: ಕೋಕಾ ಕೋಲ ಇಂಡಿಯಾ ಸಂಸ್ಥೆ ಭಾರತದಲ್ಲಿ ಮೊದಲ ಬಾರಿಗೆ ಲಿಕರ್ ಕ್ಷೇತ್ರಕ್ಕೆ ಅಡಿ ಇಟ್ಟಿದೆ. ತನ್ನ ರೆಡಿ ಟು ಡ್ರಿಂಕ್ ಆಲ್ಕೋಹಾಲ್ ಆಗಿರುವ ಲೆಮನ್ ಡೌ (Lemon-Dou) ಅನ್ನು ಭಾರತದ ಕೆಲ ಆಯ್ದ ಪ್ರದೇಶಗಳಲ್ಲಿ ಬಿಡುಗಡೆ ಮಾಡಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಕೋಕಾ ಕೋಲದ ಲೆಮನ್ ಡೌ ರೆಡಿ ಟು ಡ್ರಿಂಕ್ ಮದ್ಯದ ಬಾಟಲಿಯನ್ನು ಗೋವಾದಲ್ಲಿ ಮೊದಲಿಗೆ ಪರೀಕ್ಷಾರ್ಥವಾಗಿ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲೂ ಇದನ್ನು ಬಿಡುಗಡೆ ಮಾಡಲಾಗಿರುವುದು ತಿಳಿದುಬಂದಿದೆ.

ಬ್ರಾಂದಿ, ವೋಡ್ಕಾ ರೀತಿಯ ಮದ್ಯ

ಲೆಮನ್ ಡೌ ರೆಡಿ ಟು ಡ್ರಿಂಕ್ ಮದ್ಯವಾಗಿದೆ. ಅಂದರೆ ಇದನ್ನು ಇತರ ಜ್ಯೂಸ್, ಕೋಲಾ ಬಾಟಲಿಗಳಂತೆ ಕುಡಿಯಲು ಸಿದ್ಧವಾಗಿರುವ ಪಾನೀಯ. ಬ್ರಾಂದಿ ಮತ್ತು ವೋಡ್ಕಾ ರೀತಿ ಇರುವ ಶೋಚು (Shochu) ಇದರ ಪ್ರಮುಖ ಸಾರ. ಶೋಚು ಮತ್ತು ಲೈಮ್ ಮಿಶ್ರಣದಿಂದ (cocktail) ಲೆಮನ್ ಡೌ ಉತ್ಪನ್ನ ತಯಾರಿಸಲಾಗಿದೆ.

ಇದನ್ನೂ ಓದಿ: ಒಂದೇ ವಾರದಲ್ಲಿ ಇಬ್ಬರು ನುರಿತ ಟೆಕ್ ಎಕ್ಸಿಕ್ಯೂಟಿವ್ಸ್ ರಾಜೀನಾಮೆ; ಆ್ಯಪಲ್​ಗೆ ತಲೆನೋವು

ಪುಟ್ಟ ಕ್ಯಾನ್ ಬೆಲೆ 230 ರೂ

ಕೋಕ ಕೋಲಾದ ಲೆಮನ್ ಡೌ ಮದ್ಯಪಾನೀಯ ಭಾರತದಲ್ಲಿ ಸದ್ಯ 250 ಎಂಎಲ್ ಕ್ಯಾನ್​ನಲ್ಲಿ ಲಭ್ಯ ಇರಲಿದೆ. ಇದರ ಬೆಲೆ ಸದ್ಯಕ್ಕೆ 230 ರೂ ನಿಗದಿ ಮಾಡಲಾಗಿದೆ.

ಕೋಕ ಕೋಲದಿಂದ ಲಿಕರ್ ಮಾರಾಟ ಇದೇ ಮೊದಲಲ್ಲ. ಲೆಮನ್ ಡೌ ಉತ್ಪನ್ನವನ್ನು ಬೇರೆ ಹೆಸರಿನಲ್ಲಿ ಐದು ವರ್ಷದ ಹಿಂದೆ ಹೊರತಂದಿತ್ತು. ಚುಹಾಯ್ (chuhai) ಅನ್ನು 2018ರಲ್ಲಿ ಜಪಾನ್​ನಲ್ಲಿ ತಂದಿತ್ತು. ಚೀನಾ, ಫಿಲಿಪ್ಪೈನ್ಸ್ ದೇಶಗಳಲ್ಲೂ ಇದು ಲಭ್ಯ ಇದೆ.

ಇದನ್ನೂ ಓದಿ: Inspiration: ಕರ್ನಾಟಕದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಮನೆಗೆಲಸ ಮಾಡುತ್ತಿದ್ದ ವ್ಯಕ್ತಿ ಇವತ್ತು 40 ಕೋಟಿ ರೂ ಕಂಪನಿಯ ಒಡೆಯ

ಹಾಗೆಯೇ, ಪರ್ನಾಡ್ ರಿಕಾರ್ಡ್ ಎಂಬ ಸ್ಪಿರಿಟ್ ಕಂಪನಿ ಜೊತೆ ಸೇರಿ ಕೋಕಾ ಕೋಲ ಅಬ್ಸಲೂಟ್ ವೋಡ್ಕ (Absolut vodka) ಮತ್ತು ಸ್ಪ್ರೈಟ್ ಮಿಶ್ರಣದ ಕಾಕ್​ಟೈಲ್ ಅನ್ನು ಮುಂದಿನ ವರ್ಷ (2024) ಬಿಡುಗಡೆ ಮಾಡಲು ಆಲೋಚಿಸುತ್ತಿದೆ. ಈ ಉತ್ಪನ್ನವು ಬ್ರಿಟನ್, ನೆದರ್​ಲ್ಯಾಂಡ್ಸ್, ಸ್ಪೇನ್ ಮತ್ತು ಜರ್ಮನಿಯಲ್ಲಿ ಮೊದಲಿಗೆ ಲಭ್ಯ ಇರಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Mon, 11 December 23