AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Money Matters: ಒಟ್ಟಿಗೆ ಹಣ ಬಂದರೆ ಸಾಲ ತೀರಿಸಬೇಕಾ? ಹೂಡಿಕೆ ಮಾಡಬೇಕಾ? ಯಾವ ನಿರ್ಧಾರ ಉತ್ತಮ?

Loan Prepayment or Investment: ನೀವು ಹೂಡಿಕೆ ಹಾಗೂ ಸಾಲ ಎರಡನ್ನೂ ಮಾಡಿದ್ದ ಸಂದರ್ಭದಲ್ಲಿ ಒಟ್ಟಿಗೆ ಲಂಪ್ಸಮ್ ಹಣ ಬಂದರೆ ಏನು ಮಾಡುತ್ತೀರಿ? ತಜ್ಞರ ಪ್ರಕಾರ ನಿಮ್ಮ ಹೆಚ್ಚುವರಿ ಹಣವು ಸಾಲ ತೀರಿಸಲು ಉಪಯೋಗವಾಗಬೇಕು. ಸಾಲವೆಂಬುದು ಶೂಲದಂತೆ. ಸಾಲಮುಕ್ತರಾಗುವುದು ಮೊದಲ ಆದ್ಯತೆ ಆಗಬೇಕು.

Money Matters: ಒಟ್ಟಿಗೆ ಹಣ ಬಂದರೆ ಸಾಲ ತೀರಿಸಬೇಕಾ? ಹೂಡಿಕೆ ಮಾಡಬೇಕಾ? ಯಾವ ನಿರ್ಧಾರ ಉತ್ತಮ?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 11, 2023 | 12:41 PM

Share

ಹಣದ ವಿಚಾರ ಸಾಕಷ್ಟು ಗೊಂದಲಗಳನ್ನು ಮೂಡಿಸುತ್ತದೆ. ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುವುದು (Money Management) ಗೊತ್ತಾಗದೇ ಹೋಗಬಹುದು. ಸಾರ್ವತ್ರಿಕವಾಗಿರುವ ಪ್ರಮುಖ ಹಣಕಾಸು ಸೂತ್ರಗಳಲ್ಲಿ ‘ಸಾಲವೆಂಬುದು ಶೂಲ’ (Debt trap) ಎಂಬ ನೀತಿಯೂ ಒಂದು. ಇವತ್ತಿನ ಸಂದರ್ಭದಲ್ಲಿ ಸಾಲ ಮಾಡದೇ ವಿಧಿ ಇಲ್ಲ ಎನ್ನವ ಸ್ಥಿತಿ ಇದೆ. ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತೆಗೆದುಕೊಂಡು ಬರಲು ಸಾಧ್ಯವಿಲ್ಲವೋ, ಹಾಗೆಯೇ ಸಾಲವಿಲ್ಲದ ಮನೆಯಿಂದ ಸಾಂಬಾರು ತರಲು ಸಾಧ್ಯವಿಲ್ಲ. ಅದೇನೇ ಇರಲಿ, ಕ್ರೆಡಿಟ್ ಕಾರ್ಡ್ ರೂಪದಲ್ಲಾದರೂ ಸಾಲ ಮಾಡುವವರೇ ಎಲ್ಲಾ.

ಹೂಡಿಕೆಯೂ ಮುಖ್ಯ…

ಇವತ್ತು ಹಣಕಾಸು ಸ್ಥಿತಿ ಸುಭದ್ರವಾಗಿರಬೇಕೆಂದರೆ ಹೂಡಿಕೆ ಬಹಳ ಮುಖ್ಯ. ಸಾಲ ತೀರಿಸುವುದೂ ಮುಖ್ಯ, ಹೂಡಿಕೆ ಮಾಡುವುದೂ ಮುಖ್ಯ. ಸಾಲ ಮುಕ್ತವಾಗಿರಬೇಕು. ಹೂಡಿಕೆಗಳು ಆದಷ್ಟೂ ಹೆಚ್ಚಿರಬೇಕು. ಹಣ ಸಂಪಾದನೆ ಹೆಚ್ಚುತ್ತಿರಬೇಕು. ಈ ಮೂರು ಅಂಶಗಳನ್ನು ನೀವು ಪಾಲಿಸುತ್ತಿದ್ದರೆ ಹಣಕಾಸು ಭವಿಷ್ಯದ ಸ್ಥಿತಿ ಸುದೃಢವಾಗಿರುತ್ತದೆ.

ಇದನ್ನೂ ಓದಿ: ಚಿನ್ನದ ಬೆಲೆ ಹೆಚ್ಚಾದರೆ ಸಾಲದ ದರ ಹೆಚ್ಚುತ್ತದಾ, ಕಡಿಮೆ ಆಗುತ್ತದಾ? ಇಲ್ಲಿದೆ ಡೀಟೇಲ್ಸ್

ಲಂಪ್ಸಮ್ ಹಣ ಬಂದರೆ ಸಾಲ ತೀರಿಸಬೇಕಾ ಅಥವಾ ಹೂಡಿಕೆ ಮಾಡಬೇಕಾ?

ನೀವು ಒಂದೆಡೆ ನಿರ್ದಿಷ್ಟ ಮೊತ್ತದ ಹಣವನ್ನು ಎಸ್​ಐಪಿಯಂತಹ ಹೂಡಿಕೆಗೆ ಉಪಯೋಗಿಸುತ್ತಿದ್ದೀರಿ. ಮತ್ತೊಂದೆಡೆ, ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇಂಥ ಸಂದರ್ಭದಲ್ಲಿ ನಿಮಗೆ ಲಂಪ್ಸಮ್ ಆಗಿ ಒಂದಷ್ಟು ಹಣ ಸಿಗುತ್ತದೆ. ಈ ಹಣವನ್ನು ಸಾಲ ತೀರಿಸಲು ಬಳಸುವುದೋ ಅಥವಾ ಹೂಡಿಕೆ ಹೆಚ್ಚಿಸಲು ಬಳಸುವುದೋ ಎಂಬ ಗೊಂದಲ ಉಂಟಾಗಬಹುದು.

ಇದನ್ನೂ ಓದಿ: Gold Income: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ಗೆ ನಿಮ್ಮ ಒಡವೆ ಬಳಸುವ ಮುನ್ನ ಈ ಸಂಗತಿಗಳನ್ನು ತಿಳಿದಿರಿ

ಹಣಕಾಸು ತಜ್ಞರು ಹೇಳುವ ಪ್ರಕಾರ, ಈ ರೀತಿ ಲಂಪ್ಸಮ್ ಆಗಿ ಹಣ ಬಂದರೆ, ಅಥವಾ ತಿಂಗಳ ಆದಾಯ ಹೆಚ್ಚಿದ್ದರೆ ಆ ಹಣವನ್ನು ಸಾಲ ತೀರಿಸುವುದಕ್ಕೆ ಉಪಯೋಗಿಸಲು ಆದ್ಯತೆ ನೀಡಬೇಕು. ಅದರಲ್ಲೂ ಶೇ. 10ಕ್ಕಿಂತಲೂ ಹೆಚ್ಚು ಬಡ್ಡಿ ಇರುವ ಸಾಲಗಳಿಂದ ಮೊದಲು ನೀವು ಮುಕ್ತರಾಗಬೇಕು. ಹೀಗಾಗಿ, ಲೋನ್ ಪ್ರೀಪೇಮೆಂಟ್ ಅವಕಾಶ ಬಳಸಿ ಸಾಲವನ್ನು ಮುಂಚಿತವಾಗಿ ತೀರಿಸುವತ್ತ ಗಮನ ಹರಿಸಿ.

ನೀವು ಸಾಲಮುಕ್ತಗೊಂಡ ಬಳಿಕವಷ್ಟೇ ಹೂಡಿಕೆಗೆ ಹೆಚ್ಚುವರಿ ಹಣ ಉಪಯೋಗಿಸಲು ಆಲೋಚಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!