ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಸತತ ನಾಲ್ಕನೇ ಬಾರಿ ಏರಿಕೆ; ಬೆಂಗಳೂರಿನಲ್ಲಿ 61 ರೂ ಹೆಚ್ಚಳ

|

Updated on: Nov 01, 2024 | 12:59 PM

Commercial LPG cylinder prices hiked for 4th time: ದೇಶದಲ್ಲಿ ಸತತ ನಾಲ್ಕನೇ ಬಾರಿ ಕಮರ್ಷಿಯಲ್ ಗ್ಯಾಸ್ ಬೆಲೆಗಳು ಏರಿವೆ. 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 61 ರೂನಷ್ಟು ಏರಿ, 1,879 ರೂ ತಲುಪಿದೆ. 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ 4,695 ರೂ ತಲುಪಿದೆ.

ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಸತತ ನಾಲ್ಕನೇ ಬಾರಿ ಏರಿಕೆ; ಬೆಂಗಳೂರಿನಲ್ಲಿ 61 ರೂ ಹೆಚ್ಚಳ
ಎಲ್​ಪಿಜಿ
Follow us on

ನವದೆಹಲಿ, ನವೆಂಬರ್ 1: ತೈಲ ಮಾರುಕಟ್ಟೆ ಕಂಪನಿಗಳು ಈ ತಿಂಗಳು ಕೂಡ ವಾಣಿಜ್ಯಾತ್ಮಕ ಎಲ್​ಪಿಜಿ ಗ್ಯಾಸ್ ಬೆಲೆ ಹೆಚ್ಚಳ ಮಾಡಿವೆ. ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ 61 ರೂ ಹೆಚ್ಚಳವಾಗಿದೆ. ಇದು ಸತತ ನಾಲ್ಕನೇ ತಿಂಗಳು ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಆಗಿರುವ ಹೆಚ್ಚಳ. ಅಕ್ಟೋಬರ್​ನಲ್ಲಿ 1,818 ರೂ ಇದ್ದ ಇದರ ಬೆಲೆ ಈಗ 1,879 ರೂ ತಲುಪಿದೆ.

ಇನ್ನು, 47.5 ಕಿಲೋ ತೂಕದ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ 154 ರೂನಷ್ಟು ಹೆಚ್ಚಳವಾಗಿದೆ. ಇದರ ಒಂದು ಸಿಲಿಂಡರ್ ಬೆಲೆ 4,695 ರೂ ಆಗಿದೆ. ಇನ್ನು, ಐದು ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 15 ರೂನಷ್ಟು ಏರಿಕೆ ಆಗಿದೆ. ಆದರೆ, ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಆಗಿಲ್ಲ. ಗೃಹಬಳಕೆಯ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 805.50 ರೂ ಇದೆ. ಐದು ಕಿಲೋ ಗೃಹ ಬಳಕೆ ಸಿಲಿಂಡರ್ ಬೆಲೆ 300.50 ರೂನಲ್ಲಿ ಮುಂದುವರಿದಿದೆ.

ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆ ಸೂಪರ್ ಹಿಟ್; 6 ತಿಂಗಳಲ್ಲಿ 50 ಪರ್ಸೆಂಟ್ ಹೆಚ್ಚಾದ ಗೃಹ ಸೋಲಾರ್ ವಿದ್ಯುತ್; ಸ್ಕೀಮ್ ಪಡೆಯುವುದು ಹೇಗೆ?

ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ ಕೊನೆಯ ಬಾರಿ ಹೆಚ್ಚಳವಾಗಿದ್ದು 2023ರ ಮಾರ್ಚ್ ತಿಂಗಳಲ್ಲಿ. ಆಗ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 1,105 ರೂಗೆ ಏರಿತ್ತು. ಅದಾದ ಬಳಿಕ ವಿವಿಧ ಹಂತಗಳಲ್ಲಿ ಇಳಿಕೆಯಾಗಿ 805.50 ರೂಗೆ ಬಂದಿದೆ. ಆದರೆ, ಕಮರ್ಷಿಯಲ್ ಸಿಲಿಂಡರ್​ಗಳ ಬೆಲೆ ಮಾತ್ರ ಬಹುತೇಕ ನಿರಂತರವಾಗಿ ಏರಿಕೆ ಆಗುತ್ತಿದೆ.

ನವೆಂಬರ್ 1ರಿಂದ ಬೆಂಗಳೂರಿನಲ್ಲಿ ಇರುವ ಎಲ್​ಪಿಜಿ ದರ ಇದು…

ಗೃಹಬಳಕೆ 14.2 ಕಿಲೋ ಗ್ಯಾಸ್ ಬೆಲೆ: 805.50 ರೂ

ಗೃಹ ಬಳಕೆ 5 ಕಿಲೋ ಗ್ಯಾಸ್ ಬೆಲೆ: 300.50 ರೂ

ಕಮರ್ಷಿಯಲ್ 19 ಕಿಲೋ ಗ್ಯಾಸ್ ಬೆಲೆ: 1,879 ರೂ

ಕಮರ್ಷಿಯಲ್ 47.5 ಕಿಲೋ ಗ್ಯಾಸ್ ಬೆಲೆ: 4,695 ರೂ

ಇದನ್ನೂ ಓದಿ: ಇಂದಿನಿಂದ UPI ನಿಯಮಗಳಲ್ಲಿ ದೊಡ್ಡ ಬದಲಾವಣೆ: ಗೂಗಲ್ ಪೇ, ಫೋನ್ ಪೇ ಬಳಕೆದಾರರು ತಪ್ಪದೆ ಓದಿ

ಬೇರೆ ಪ್ರಮುಖ ನಗರಗಳಲ್ಲಿ ಹೊಸ ಕಮರ್ಷಿಯಲ್ 19 ಕಿಲೋ ಗ್ಯಾಸ್ ದರ ಎಷ್ಟಿದೆ?

ದೆಹಲಿ: 1,802 ರೂ

ಮುಂಬೈ: 1,754.50 ರೂ

ಕೋಲ್ಕತಾ: 1,911.50 ರೂ

ಚೆನ್ನೈ: 1,964.50 ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ