Kannada News Business Comparing 84 day recharge plans of BSNL, Jio, Vi and Airtel, know which ones best, details in Kannada
84 ದಿನ ವ್ಯಾಲಿಡಿಟಿಯ ರೀಚಾರ್ಜ್ ಪ್ಯಾಕ್: ಬಿಎಸ್ಸೆನ್ನೆಲ್, ಜಿಯೋ, ಏರ್ಟೆಲ್, ವಿಐ ಹೋಲಿಕೆ
Recharge plans of BSNL, Jio, Vi and Airtel: ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆ ಅಗ್ಗದ ದರದಲ್ಲಿ ರೀಚಾರ್ಜ್ ಪ್ಲಾನ್ಸ್ ಬಿಡುಗಡೆ ಮಾಡಿದೆ. 5ಜಿ ಇಲ್ಲದಿದ್ದರೂ ಇತರ ಟೆಲಿಕಾಂ ಕಂಪನಿಗಳ ಆಫರ್ಗಿಂತ ಬಿಎಸ್ಸೆನ್ನೆಲ್ ರೀಚಾರ್ಜ್ ದರಗಳು ಬಹಳ ಉಪಯುಕ್ತ ಎನಿಸಿವೆ. ಹೆಚ್ಚು ಜನರು ಬಳಸುವ 84 ಅಥವಾ ಮೂರು ತಿಂಗಳ ಅವಧಿಯ ರೀಚಾರ್ಜ್ ಪ್ಲಾನ್ ವಿಚಾರದಲ್ಲಿ ಯಾವೆಲ್ಲಾ ಆಫರ್ ಇವೆ, ಇತರ ಕಂಪನಿಗಳಿಗೆ ಹೋಲಿಸಿದರೆ ಬಿಎಸ್ಎನ್ಎಲ್ ರೀಚಾರ್ಜ್ ಪ್ಲಾನ್ ಹೇಗಿದೆ ಎಂಬ ವಿವರ ಇಲ್ಲಿದೆ....
ಟೆಲಿಕಾಂ ಕಂಪನಿಗಳು
Follow us
ಭಾರತದಲ್ಲಿರುವ ನಾಲ್ಕು ಪ್ರಮುಖ ಟೆಲಿಕಾಂ ಕಂಪನಿಗಳ ಪೈಕಿ ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟಲ್ ಮತ್ತು ವೊಡಾಫೋನ್ ಐಡಿಯಾ ಖಾಸಗಿ ಸಂಸ್ಥೆಗಳು. ಬಿಎಸ್ಎನ್ಎಲ್ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ. ಮೇಲಿನ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ಪ್ಲಾನ್ ದರಗಳನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿವೆ. ಇದೇ ಸಂದರ್ಭದಲ್ಲಿ ಬಿಎಸ್ಎನ್ಎಲ್ ಬಹಳ ಕಡಿಮೆ ದರದಲ್ಲಿ ರೀಚಾರ್ಜ್ ಆಫರ್ ಮಾಡಿ ಅಖಾಡಕ್ಕೆ ರೀ ಎಂಟ್ರಿ ಕೊಟ್ಟಿದೆ. 84 ದಿನಗಳ ವ್ಯಾಲಿಡಿಟಿ ಇರುವ ಮತ್ತು ದಿನಕ್ಕೆ 1.5ಜಿಬಿ ಡಾಟಾ ಬಳಕೆಗೆ ಅವಕಾಶ ಕೊಡುವ ರೀಚಾರ್ಜ್ ಪ್ಲಾನ್ಗಳ ಬೆಲೆ ಹೋಲಿಕೆ ಇಲ್ಲಿದೆ….
ಜಿಯೋದಲ್ಲಿ 84 ದಿನಗಳ ವ್ಯಾಲಿಡಿಟಿ ಇರುವ 666 ರೂ ಪ್ಲಾನ್ ಇತ್ತು. ಇದರ ಬೆಲೆಯನ್ನು 799 ರೂಗೆ ಏರಿಸಲಾಗಿದೆ. ಇದರಲ್ಲಿ ದಿನಕ್ಕೆ 1.5 ಜಿಬಿ ಡಾಟಾ ಸಿಗುತ್ತದೆ. ದಿನಕ್ಕೆ 100 ಎಸ್ಸೆಮ್ಮೆಸ್, ಅನ್ಲಿಮಿಟೆಡ್ ಕರೆಯೂ ಇರುತ್ತದೆ. ಜಿಯೋ ಟಿವಿ, ಕ್ಲೌಡ್, ಜಿಯೊ ಸಿನಿಮಾ, ಸಾವನ್ ಪ್ರೋ ಮೊದಲಾದ ಪ್ಲಾಟ್ಫಾರ್ಮ್ ಸೇವೆಗಳಿಗೆ ಸಬ್ಸ್ಕ್ರಿಪ್ಷನ್ ಲಭ್ಯ ಇದೆ. ಗಮನಿಸಬೇಕಾದ ಸಂಗತಿ ಎಂದರೆ ಇದು 4ಜಿ ಡಾಟಾ ಪ್ಯಾಕ್. ಇದರಲ್ಲಿ 5ಜಿ ಡಾಟಾ ಸಿಗುವುದಿಲ್ಲ.
ಏರ್ಟೆಲ್ನಲ್ಲಿ 84 ದಿನ ವ್ಯಾಲಿಡಿಟಿ ಇರುವ ಮತ್ತು ದಿನಕ್ಕೆ 1.5ಜಿಬಿ ಡಾಟಾ ಕೊಡುವ ಪ್ಲಾನ್ ಬೆಲೆ 859 ರೂ. ಇದರಲ್ಲಿ ದಿನಕ್ಕೆ 100 ಎಸ್ಸೆಮ್ಮೆಸ್ ಮತ್ತು ಅನ್ಲಿಮಿಟೆಡ್ ಕಾಲ್ ಸೌಲಭ್ಯವೂ ಇರುತ್ತದೆ. ಜೊತೆಗೆ ಪ್ರೈಮ್ ವಿಡಿಯೋ, ಅಪೋಲೋ ಸರ್ಕಲ್, ವಿಂಕ್ ಮ್ಯೂಸಿಕ್, ಹಲೋ ಟ್ಯೂನ್ಸ್ ಇತ್ಯಾದಿ ಸಬ್ಸ್ಕ್ರಿಪ್ಷನ್ಸ್ ಒಳಗೊಂಡಿರಲಾಗುತ್ತದೆ.
ವೊಡಾಫೋನ್ ಐಡಿಯಾ ಕೂಡ ಏರ್ಟೆಲ್ನಂತೆ 859 ರೂ ರೀಚಾರ್ಜ್ ಪ್ಲಾನ್ ಹೊಂದಿದೆ. ಇದೂ ಕೂಡ 84 ದಿನ ವ್ಯಾಲಿಡಿಟಿ ಹೊಂದಿದ್ದು ದಿನಕ್ಕೆ 1.5 ಜಿಬಿ ಡಾಟಾ ಸಿಗುತ್ತದೆ. ದಿನಕ್ಕೆ 100 ಎಸ್ಸೆಮ್ಮೆಸ್, ಅನ್ಲಿಮಿಟೆಡ್ ಕಾಲ್ ಲಭ್ಯ ಇರುತ್ತದೆ. ಜಿಯೋ, ಏರ್ಟೆಲ್ಗಿಂತ ಇದರ ವಿಶೇಷತೆ ಎಂದರೆ ಮಧ್ಯರಾತ್ರಿ 12ರಿಂದ ಬೆಳಗ್ಗೆ 6ರವರೆಗೆ ನೀವು ಎಷ್ಟು ಬೇಕಾದರೂ ಡಾಟಾ ಬಳಸಬಹುದು. ಅದು ನಿಮ್ಮ ದಿನದ ಡಾಟಾ ಮಿತಿಗೆ ಒಳಪಡುವುದಿಲ್ಲ. ಹಾಗೆಯೇ ಪ್ರತೀ ತಿಮಗಳು 2ಜಿಬಿ ಬ್ಯಾಕಪ್ ಡಾಟಾ ಸಿಗುತ್ತದೆ. ವೀಕೆಂಡ್ ಡಾಟಾ ರೋಲೋವರ್ ಅವಕಾಶವೂ ಇರುತ್ತದೆ.
ಬಿಎಸ್ಸೆನ್ನೆಲ್ನಲ್ಲಿ 84 ದಿನದ ಬದಲು 82 ದಿನ ವ್ಯಾಲಿಡಿಟಿ ಇರುವ ರೀಚಾರ್ಜ್ ಪ್ಲಾನ್ ಇದೆ. ದಿನಕ್ಕೆ 1.5 ಜಿಬಿ ಡಾಟಾ ಕೊಡುವ ಈ ಪ್ಲಾನ್ ಬೆಲೆ 485 ರೂ. ದಿನಕ್ಕೆ 100 ಎಸ್ಸೆಮ್ಮೆ, ಅನ್ಲಿಮಿಟೆಡ್ ಕರೆ ಸಿಗುತ್ತದೆ. ಅದು ಬಿಟ್ಟರೆ ಬೇರೆ ವಿಶೇಷ ಸರ್ವಿಸ್ಗಳನ್ನು ಬಿಎಸ್ಸೆನ್ನೆಲ್ ಆಫರ್ ಮಾಡುವುದಿಲ್ಲ. ಅಂದರೆ, ಒಟಿಟಿಗಳು, ಮ್ಯೂಸಿಕ್ ಪ್ಲಾಟ್ಫಾರ್ಮ್ಗಳು, ಸ್ಟ್ರೀಮಿಂಗ್ ಆ್ಯಪ್ಗಳ ಸಬ್ಸ್ಕ್ರಿಪ್ಷನ್ ಸಿಗುವುದಿಲ್ಲ.
ಮೇಲಿನ ನಾಲ್ಕು ಕಂಪನಿಗಳ ರೀಚಾರ್ಜ್ ಪ್ಲಾನ್ಗಳನ್ನು ಅವಲೋಕಿಸಿದರೆ ಬಿಎಸ್ಸೆನ್ನೆಲ್ನ ಪ್ಲಾನ್ ಅಗ್ಗದ್ದಾಗಿದೆ. ಏರ್ಟೆಲ್ 5ಜಿ ಡಾಟಾ ಆಫರ್ ಮಾಡುತ್ತದೆ. ವೊಡಾಫೋನ್ ಐಡಿಯಾದ ರೀಚಾರ್ಜ್ ಪ್ಲಾನ್ ಹಲವು ಆಕರ್ಷಣೆಗಳನ್ನು ಒಳಗೊಂಡಿದೆ.