ಫಾಸ್ಟ್​ಟ್ಯಾಗ್ ಹೊಸ ನಿಯಮ: ನೀವು ಮಾಡಬೇಕಾದ್ದೇನು, ಅಂತಿಮ ದಿನಾಂಕ ಯಾವಾಗ? ಇಲ್ಲಿದೆ ವಿವರ

FASTag New Rules: ಟೋಲ್ ಪಾವತಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಸಲುವಾಗಿ ಭಾರತೀಯ ಪಾವತಿ ನಿಗಮ (ಎನ್​​ಪಿಸಿಐ) ಫಾಸ್ಟ್​​ಟ್ಯಾಗ್ ಸಂಬಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರಡಿ ಹಳೆಯ ಫಾಸ್ಟ್​​ಟ್ಯಾಗ್​ಗಳನ್ನು ನವೀಕರಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಎನ್​​ಪಿಸಿಐ ಪ್ರಸ್ತಾಪಿಸಿದೆ. ಹೊಸ ನಿಯಮಗಳೇನು? ಅದರಡಿ ನೀವೇನು ಮಾಡಬೇಕು? ಡೆಡ್​ಲೈನ್ ಯಾವಾಗ? ವಿವರ ಇಲ್ಲಿದೆ.

ಫಾಸ್ಟ್​ಟ್ಯಾಗ್ ಹೊಸ ನಿಯಮ: ನೀವು ಮಾಡಬೇಕಾದ್ದೇನು, ಅಂತಿಮ ದಿನಾಂಕ ಯಾವಾಗ? ಇಲ್ಲಿದೆ ವಿವರ
ಫಾಸ್ಟ್‌ಟ್ಯಾಗ್‌
Follow us
|

Updated on: Aug 03, 2024 | 3:56 PM

ಟೋಲ್ ಪಾವತಿ ಸುಗಮಗೊಳಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ದಟ್ಟಣೆ ನಿವಾರಿಸುವುದಕ್ಕಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) 2024 ರ ಆಗಸ್ಟ್ 1 ರಿಂದ ಪರಿಷ್ಕೃತ ಫಾಸ್ಟ್ಯಾಗ್ (FASTag) ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳು ಬಳಕೆದಾರರ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಹೊಸ ನಿಯಮಗಳ ಅಡಿಯಲ್ಲಿ, ಫಾಸ್ಟ್ಯಾಗ್ ಸೇವಾ ಪೂರೈಕೆದಾರರು 2024 ರ ಅಕ್ಟೋಬರ್ 31ರೊಳಗೆ ವಿತರಿಸಲಾದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳ ಕೆವೈಸಿ (KYC) ಅಪ್​ಡೇಟ್ ಮಾಡಬೇಕಿದೆ.

ಹಳೆಯ ಫಾಸ್ಟ್‌ಟ್ಯಾಗ್‌ ಖಾತೆಗಳು ಅಮಾನ್ಯವಾಗುವುದರಿಂದ ಬಳಕೆದಾರರು ತಮ್ಮ ಫಾಸ್ಟ್‌ಟ್ಯಾಗ್‌ ಖಾತೆಗಳನ್ನು ಪಡೆದ ದಿನಾಂಕವನ್ನು ಪರಿಶೀಲಿಸಿ ತೀರಾ ಹಳೆಯದಾಗಿದ್ದರೆ ಬದಲಾಯಿಸಿಕೊಳ್ಳಬೇಕು.

ಹೊಸ ನಿಯಮದ ಪ್ರಕಾರ, ಫಾಸ್ಟ್ಯಾಗ್ ಖಾತೆಯನ್ನು ವಾಹನದ ನೋಂದಣಿ ಸಂಖ್ಯೆ, ಚಾಸಿಸ್ ಸಂಖ್ಯೆ ಜತೆ ಮಾಲೀಕರ ಫೋನ್ ಸಂಖ್ಯೆಗೆ ಲಿಂಕ್ ಮಾಡಬೇಕು. ಪ್ರತಿ ಖಾತೆಯನ್ನು ನಿರ್ದಿಷ್ಟ ವಾಹನಕ್ಕೆ ಲಿಂಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಫಾಸ್ಟ್ಯಾಗ್‌ಗಳ ದುರುಪಯೋಗವನ್ನು ತಡೆಯುವ ಸಲುವಾಗಿ ಈ ನಿಯಮ ಜಾರಿಗೊಳಿಸಲಾಗುತ್ತಿದೆ. ಮೊಬೈಲ್ ಲಿಂಕ್ ಮಾಡುವ ಪ್ರಕ್ರಿಯೆಯಲ್ಲಿ ಬಳಕೆದಾರರು ವಾಹನದ ಮುಂಭಾಗದ ಮತ್ತು ಒಂದು ಬದಿಯ ಫೋಟೋವನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಆಗಸ್ಟ್ 1 ರ ನಂತರ ಖರೀದಿಸಿದ ಹೊಸ ವಾಹನಗಳಿಗೆ, ಖರೀದಿಸಿದ ಮೂರು ತಿಂಗಳೊಳಗೆ ನೋಂದಣಿ ಸಂಖ್ಯೆಯನ್ನು ನವೀಕರಿಸಬೇಕು. ಇದಲ್ಲದೆ, ಟೋಲ್ ಪಾವತಿಗಳ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಐದು ವರ್ಷಗಳಿಗಿಂತ ಹಳೆಯದಾದ ಯಾವುದೇ ಫಾಸ್ಟ್ಯಾಗ್ ಅನ್ನು ಬದಲಿಸುವುದನ್ನು ಎನ್​ಪಿಸಿಐ ಕಡ್ಡಾಯಗೊಳಿಸುತ್ತದೆ.

ಫಾಸ್ಟ್​​​ಟ್ಯಾಗ್ ಹೊಸ ನಿಯಮಗಳು

  • ಐದು ವರ್ಷಕ್ಕಿಂತ ಹಳೆಯದಾದ ಫಾಸ್ಟ್‌ಟ್ಯಾಗ್‌ಗಳನ್ನು ಬದಲಾಯಿಸಬೇಕು.
  • 3 ವರ್ಷ ಹಳೆಯ ಫಾಸ್ಟ್‌ಟ್ಯಾಗ್‌ಗಳಿಗೆ ಕೆವೈಸಿ ಅಪ್‌ಡೇಟ್ ಮಾಡಬೇಕು.
  • ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ಫಾಸ್ಟ್‌ಟ್ಯಾಗ್‌ನೊಂದಿಗೆ ಲಿಂಕ್ ಮಾಡಬೇಕು.
  • ಹೊಸ ವಾಹನವನ್ನು ಖರೀದಿಸಿದ 90 ದಿನಗಳಲ್ಲಿ ನೋಂದಣಿ ಸಂಖ್ಯೆಯನ್ನು ನವೀಕರಿಸಬೇಕು.
  • ಫಾಸ್ಟ್‌ಟ್ಯಾಗ್‌ ಪೂರೈಕೆದಾರರು ತಮ್ಮ ಡೇಟಾಬೇಸ್‌ಗಳನ್ನು ಪರಿಶೀಲಿಸಬೇಕು.
  • ಕಾರಿನ ಮುಂಭಾಗ ಮತ್ತು ಒಂದು ಬದಿಯ ಸ್ಪಷ್ಟ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು.
  • ಫಾಸ್ಟ್‌ಟ್ಯಾಗ್‌ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬೇಕು.

ಇದನ್ನೂ ಓದಿ: 84 ದಿನ ವ್ಯಾಲಿಡಿಟಿಯ ರೀಚಾರ್ಜ್ ಪ್ಯಾಕ್: ಬಿಎಸ್ಸೆನ್ನೆಲ್, ಜಿಯೋ, ಏರ್ಟೆಲ್, ವಿಐ ಹೋಲಿಕೆ

ಫಾಸ್ಟ್‌ಟ್ಯಾಗ್‌ ಅಪ್​ಡೇಟ್​ಗೆ ಅಂತಿಮ ದಿನಾಂಕ ಯಾವಾಗ?

ಎಲ್ಲಾ ಕೆವೈಸಿ ಅಪ್‌ಡೇಟ್‌ಗಳು ಮತ್ತು ಫಾಸ್ಟ್‌ಟ್ಯಾಗ್ ರಿನೀವಲ್ (ಬದಲಾಯಿಸುವ) ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗಡುವು ಅಕ್ಟೋಬರ್ 31 ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ