CPI Based Inflation: ಗ್ರಾಹಕ ದರ ಆಧಾರಿತ ಹಣದುಬ್ಬರ ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ಶೇ 6.01ರಲ್ಲಿ

| Updated By: Srinivas Mata

Updated on: Feb 14, 2022 | 7:03 PM

ಗ್ರಾಹಕ ಬೆಲೆ ಆಧಾರಿತ ಸೂಚ್ಯಂಕ ಹಣದುಬ್ಬರವು 2022ರ ಜನವರಿಯಲ್ಲಿ ಏಳು ತಿಂಗಳ ಗರಿಷ್ಠ ಮಟ್ಟವಾದ ಶೇ 6.01 ತಲುಪಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

CPI Based Inflation: ಗ್ರಾಹಕ ದರ ಆಧಾರಿತ ಹಣದುಬ್ಬರ ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ಶೇ 6.01ರಲ್ಲಿ
ಸಾಂದರ್ಭಿಕ ಚಿತ್ರ
Follow us on

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಫೆಬ್ರವರಿ 14ರ ಸೋಮವಾರದಂದು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರದ ಮೇಲೆ ಭಾರತದ ಮುಖ್ಯ ಹಣದುಬ್ಬರ (Inflation) ದರವು 2022ರ ಜನವರಿಯಲ್ಲಿ ಶೇ 6.01ಕ್ಕೆ ಜಿಗಿದಿದೆ. ಜನವರಿ ತಿಂಗಳ ಶೇ 6.01ರ ಗ್ರಾಹಕ ದರ ಆಧಾರಿತ ಹಣದುಬ್ಬರವು ಶೇ 5.66 ಇತ್ತು. 2022ರ ಜನವರಿ ಹಣದುಬ್ಬರವು ನಿರೀಕ್ಷಿತ ಪಥದಲ್ಲೇ ಇದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಮಾತನಾಡಿದ ಪ್ರಕಾರ, ಇದು ಪ್ರತಿಕೂಲವಾದ ಮೂಲ ಪರಿಣಾಮದಿಂದಾಗಿ (ಬೇಸ್​ ಎಫೆಕ್ಟ್​) ಸುಮಾರು ಶೇ 6.00ಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದರು. 2022ರ ಮೊದಲ ತ್ರೈಮಾಸಿಕದಲ್ಲಿ ಸಿಪಿಐ ಹಣದುಬ್ಬರವು ಸರಾಸರಿ ಶೇ 5.7ರಷ್ಟು ಇರಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜು ಮಾಡಿದೆ. ಹಾಗಾದಲ್ಲಿ ಹಣದುಬ್ಬರವು 2022ರ ಜನವರಿಯಿಂದ ಮಾರ್ಚ್​ ಮಧ್ಯೆ ಉಳಿದ ಎರಡು ತಿಂಗಳಿಗೆ ಹಣದುಬ್ಬರವು ಕಡಿಮೆ ಇರುವ ನಿರೀಕ್ಷೆಯಿದೆ.

ಸಿಪಿಐನ ಸಾಮಾನ್ಯ ಸೂಚ್ಯಂಕವು ಶೇ 0.3ರಷ್ಟು ಇಳಿಕೆ ಆಗಿದ್ದರ ಹೊರತಾಗಿಯೂ 2022ರ ಜನವರಿಯಲ್ಲಿ ಹಣದುಬ್ಬರ ದರವು ತಿಂಗಳಿಂದ ತಿಂಗಳಿಗೆ ಏರಿಕೆ ಕಂಡಿದೆ. ಅದು ಪ್ರತಿಕೂಲಕರವಾದ ಬೇಸ್ ಪರಿಣಾಮ ಆಗಿದೆ. ಅನುಕ್ರಮವಾದ ಹಣದ ಚಲನೆ 2022ರ ಜನವರಿಯಲ್ಲಿ ದುರ್ಬಲವಾಗಿದೆ. ತಿಂಗಳಿಂದ ತಿಂಗಳಿಗೆ ತರಕಾರಿಗಳ ಸೂಚ್ಯಂಕವು ಶೇ 7.4ರಷ್ಟು ಕುಸಿತ ಕಂಡಿದೆ. ಇದೇ ಖಾದ್ಯ ತೈಲಕ್ಕೂ ಅನ್ವಯಿಸುತ್ತದೆ. ಆದರೆ ತರಕಾರಿಯ ಮಟ್ಟಕ್ಕೆ ಅಲ್ಲ. ತೈಲ ಮತ್ತು ವನಸ್ಪತಿಯ ಬೆಲೆಯು 2021ರ ಡಿಸೆಂಬರ್​ಗೆ ಹೋಲಿಸಿದಲ್ಲಿ ಶೇ 1.5ರಷ್ಟು ಇಳಿಕೆ ಕಂಡಿದೆ. ಗ್ರಾಹಕ ಆಹಾರ ದರ ಸೂಚ್ಯಂಕವು 2021ರ ಡಿಸೆಂಬರ್​ಗೆ ಹೋಲಿಸಿದಲ್ಲಿ 2022ರ ಜನವರಿಯಲ್ಲಿ ಶೇ 1.3ರಷ್ಟು ಇಳಿಕೆ ಆಗಿದೆ. ಆಹಾರ ಹಣದುಬ್ಬರವು ಶೇ 4.05ರಿಂದ ಶೇ 5.43ಕ್ಕೆ ಏರಿಕೆ ಆಗಿದೆ.

2022ರ ಜನವರಿ ತಿಂಗಳ ಹಣದುಬ್ಬರ:

ಸಿಪಿಐ – ಶೇ 6.01

ಆಹಾರ ಸೂಚ್ಯಂಕ- ಶೇ 5.43

ಏಕದಳ ಧಾನ್ಯ- ಶೇ 3.39

ಮಾಂಸ, ಮೀನು- ಶೇ 5.47

ಎಣ್ಣೆಗಳು, ವನಸ್ಪತಿ- ಶೇ 18.70

ತರಕಾರಿಗಳು- ಶೇ 5.19

ಕಾಳುಗಳು- ಶೇ 3.02

ಬಟ್ಟೆಗಳು, ಪಾದರಕ್ಷೆ- ಶೇ 8.84

ಹೌಸಿಂಗ್- ಶೇ 3.52

ಇಂಧನ, ವಿದ್ಯುತ್- ಶೇ 9.32

ಇತರೆ- ಶೇ 6.55

ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ: ತೈಲ ಬೆಲೆಗಳ ಏರಿಕೆ, ಬಜೆಟ್ ಮತ್ತು ಹಣದುಬ್ಬರದ ಮೇಲೆ ಹೇಗೆ ಪ್ರಭಾವ ಬೀರಲಿದೆ?

Published On - 6:33 pm, Mon, 14 February 22