Covid- 19 PF Withdrawal: ಕೋವಿಡ್-19 ಕಾರಣಕ್ಕೆ ಎರಡನೇ ಬಾರಿಗೆ ಪಿಎಫ್​ ವಿಥ್​ಡ್ರಾ ಅವಕಾಶ; ಎಷ್ಟು, ಹೇಗೆ ಮಾಹಿತಿ ಇಲ್ಲಿದೆ

|

Updated on: Jun 01, 2021 | 11:34 AM

ಕೋವಿಡ್- 19 ಮುಂಗಡವಾಗಿ ಹಣವನ್ನು ವಿಥ್​ಡ್ರಾ ಮಾಡುವುದಕ್ಕೆ ಪಿಎಫ್ ಸದಸ್ಯರಿಗೆ ಇಪಿಎಫ್​ಒ ಅವಕಾಶ ಒದಗಿಸಿದೆ. ಈ ಬಗ್ಗೆ ವಿವರಗಳು ಈ ಲೇಖನದಲ್ಲಿವೆ.

Covid- 19 PF Withdrawal: ಕೋವಿಡ್-19 ಕಾರಣಕ್ಕೆ ಎರಡನೇ ಬಾರಿಗೆ ಪಿಎಫ್​ ವಿಥ್​ಡ್ರಾ ಅವಕಾಶ; ಎಷ್ಟು, ಹೇಗೆ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಮರುಪಾವತಿಸುವ ಅಗತ್ಯ ಇಲ್ಲದ ಕೋವಿಡ್- 19 ಮುಂಗಡವನ್ನು ಎರಡನೇ ಬಾರಿಗೆ ತೆಗೆದುಕೊಳ್ಳುವುದಕ್ಕೆ ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (EPFO)ದಿಂದ ಸದಸ್ಯರಿಗೆ ಅವಕಾಶ ನೀಡಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನಾ (PMGKY) ಅಡಿಯಲ್ಲಿ 2020ರ ಮಾರ್ಚ್​ನಲ್ಲಿ ಸದಸ್ಯರ ಹಣಕಾಸು ಅಗತ್ಯಕ್ಕೆ ತಕ್ಕಂತೆ ಪಿಎಫ್ ವಿಥ್​ಡ್ರಾ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು. ಈ ತೀರ್ಮಾನಕ್ಕೆ ತಕ್ಕಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಾವಿಡೆಂಟ್ ಫಂಡ್ಸ್ ಯೋಜನೆ, 1952ಗೆ ತಿದ್ದುಪಡಿ ತಂದಿತು.

ಎಷ್ಟು ಹಣ ವಿಥ್​ಡ್ರಾ ಮಾಡಬಹುದು?
ಮೂಲ ವೇತನ (ಬೇಸಿಕ್ ಪೇ) ಮತ್ತು ತುಟ್ಟಿ ಭತ್ಯೆ (ಡಿಯರ್​ನೆಸ್ ಅಲೋವೆನ್ಸ್) ಇವೆರಡೂ ಒಟ್ಟು ಸೇರಿ ಮೂರು ತಿಂಗಳ ಮೊತ್ತ ಅಥವಾ ಇಪಿಎಫ್​ನಲ್ಲಿ ಬಾಕಿ ಇರುವ ಸದಸ್ಯರ ಮೊತ್ತದಲ್ಲಿ ಶೇ 75ರಷ್ಟು ಈ ಎರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತ ವಿಥ್​ಡ್ರಾ ಮಾಡಲು ಅರ್ಜಿ ಹಾಕಬಹುದು. ಕೊರೊನಾ ಸಂದರ್ಭದಲ್ಲಿ ಕೋವಿಡ್- 19 ಮುಂಗಡದಿಂದ ಇಪಿಎಫ್​ ಸದಸ್ಯರಿಗೆ, ಅದರಲ್ಲೂ ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ಸಂಬಳ ಇರುವವರಿಗೆ ಅನುಕೂಲ ಆಗುತ್ತದೆ ಎಂದು ಸಚಿವಾಲಯ ಹೇಳಿದೆ. ಈ ತನಕ ಇಪಿಎಫ್​ಒದಿಂದ 76.31 ಲಕ್ಷ ಕೋವಿಡ್- 19 ಕ್ಲೇಮ್​ಗಳು ವಿಲೇವಾರಿ ಆಗಿ, 18,698.15 ಕೋಟಿ ರೂಪಾಯಿ ವಿತರಣೆ ಮಾಡಲಾಗಿದೆ.

ಎರಡನೇ ಸಲಕ್ಕೆ ಮುಂಗಡ ದೊರೆಯುತ್ತದೆಯೇ?
ಈಗಾಗಲೇ ಕೋವಿಡ್- 19 ಮುಂಗಡವನ್ನು ಪಿಎಫ್​ ಸದಸ್ಯರು ಇಪಿಎಫ್​ಒದಿಂದ ತೆಗೆದುಕೊಂಡಿದ್ದಲ್ಲಿ ಎರಡನೇ ಬಾರಿಗೂ ಮುಂಗಡ ತೆಗೆದುಕೊಳ್ಳಬಹುದು. ಎರಡನೇ ಬಾರಿಗೆ ಕೋವಿಡ್- 19 ಮುಂಗಡಕ್ಕೆ ಅರ್ಜಿ ಹಾಕುವಾಗಲೂ ಮೊದಲ ಬಾರಿಗೆ ವಿಥ್​ಡ್ರಾ ಮಾಡುವಾಗ ಏನು ನಿಯಮ ಹಾಗೂ ಹಂತಗಳು ಇದ್ದವೋ ಅವೇ ಈಗಲೂ ಇವೆ.

3 ದಿನದೊಳಗೆ ಕ್ಲೇಮ್​ಗಳು ವಿಲೇವಾರಿ
ಕೋವಿಡ್- 19 ಮುಂಗಡಕ್ಕೆ ಅರ್ಜಿ ಪಡೆದುಕೊಂಡ 3 ದಿನದೊಳಗೆ ಕ್ಲೇಮ್​ಗಳನ್ನು ವಿಲೇವಾರಿ ಮಾಡುವುದಕ್ಕೆ ಇಪಿಎಫ್​ಒ ಬದ್ಧವಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತಿಳಿಸಿದೆ. ಇಪಿಎಫ್​ಒದಿಂದ ಆಟೋ- ಕ್ಲೇಮ್ ವಿಲೇವಾರಿಯನ್ನು ತರಲಾಗಿದೆ. ಎಲ್ಲ ಬಗ್ಗೆಯಲ್ಲೂ ಕೆವೈಸಿ (ನೋ ಯುವರ್ ಕಸ್ಟಮರ್) ಪೂರ್ಣಗೊಳಿಸಿದ ಸದಸ್ಯರಿಗೆ ಇದು ಅನ್ವಯ ಆಗುತ್ತದೆ. ಕಾನೂನು ಪ್ರಕಾರವಾಗಿ 20 ದಿನದೊಳಗೆ ಕ್ಲೇಮ್ ವಿಲೇವಾರಿ ಆಗುತ್ತಿದ್ದದ್ದು ಈಗ ಕೇವಲ 3 ದಿನಕ್ಕೆ ಇಳಿಕೆ ಆಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: PF Withdrawal Rules: ಪಿಎಫ್ ವಿಥ್​ಡ್ರಾ, ವರ್ಗಾವಣೆ ಮಾಡುವುದಕ್ಕೆ ಅನುಸರಿಸಬೇಕಾದ ನಿಯಮಗಳೇನು?

(How to apply for Covid- 19 advance from EPFO by PF members? Here is an explainer)

Published On - 11:33 am, Tue, 1 June 21