Credit cards spending: ಕ್ರೆಡಿಟ್ ಕಾರ್ಡ್ ವೆಚ್ಚ ಸೆಪ್ಟೆಂಬರ್​ನಲ್ಲಿ ಶೇ 57ರಷ್ಟು ಹೆಚ್ಚಳವಾಗಿ ರೂ. 80,477 ಕೋಟಿಗೆ

2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ವೆಚ್ಚ ವರ್ಷದಿಂದ ವರ್ಷಕ್ಕೆ ಶೇ 57ರಷ್ಟು ಹೆಚ್ಚಳವಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Credit cards spending: ಕ್ರೆಡಿಟ್ ಕಾರ್ಡ್ ವೆಚ್ಚ ಸೆಪ್ಟೆಂಬರ್​ನಲ್ಲಿ ಶೇ 57ರಷ್ಟು ಹೆಚ್ಚಳವಾಗಿ ರೂ. 80,477 ಕೋಟಿಗೆ
ಕ್ರೆಡಿಟ್ ಕಾರ್ಡ್ (ಪ್ರಾತಿನಿಧಿಕ ಚಿತ್ರ)
Edited By:

Updated on: Nov 04, 2021 | 6:09 PM

ವಾಣಿಜ್ಯ ಮಾಧ್ಯಮವೊಂದರ ವರದಿ ಪ್ರಕಾರ, ಹಬ್ಬದ ಋತುವಿನ ಕಾರಣದಿಂದ ಸೆಪ್ಟೆಂಬರ್‌ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿರುವ ಖರ್ಚು ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ (YoY) ಶೇ 57ರಷ್ಟು ಹೆಚ್ಚಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕ್ರೆಡಿಟ್ ಕಾರ್ಡ್ ವೆಚ್ಚವು ಸೆಪ್ಟೆಂಬರ್‌ನಲ್ಲಿ 80,477.18 ಕೋಟಿ ರೂಪಾಯಿಗಳಾಗಿದ್ದು, ಆಗಸ್ಟ್‌ನಲ್ಲಿ 77,981 ಕೋಟಿ ರೂಪಾಯಿ ಇದ್ದದ್ದು ಅಲ್ಲಿಂದ ಏರಿಕೆಯಾಗಿದೆ. ಹೆಚ್ಚಿನ ಮೂಲದ (ಬೇಸ್) ಹೊರತಾಗಿಯೂ ಅನುಕ್ರಮವಾಗಿ ಶೇ 3.2ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದ ಇದೇ ಸಮಯದಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚ 51,356.68 ಕೋಟಿ ರೂಪಾಯಿ ಆಗಿತ್ತು. ಜುಲೈನಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚಗಳು ಒಟ್ಟು 75,119 ಕೋಟಿ ರೂಪಾಯಿ ಇತ್ತು. ಏಕಾಏಕಿ ಮೊದಲು ಇದ್ದುದಕ್ಕಿಂತ ಕ್ರೆಡಿಟ್ ಕಾರ್ಡ್ ಖರ್ಚು ಗಣನೀಯವಾಗಿ ಹೆಚ್ಚಾಗಿದೆ. ಜನವರಿ ಮತ್ತು ಫೆಬ್ರವರಿ 2020ರಲ್ಲಿ ಕ್ರೆಡಿಟ್ ಕಾರ್ಡ್ ಖರ್ಚು ಕ್ರಮವಾಗಿ 67,402.25 ಕೋಟಿ ರೂಪಾಯಿ ಮತ್ತು 62,902.93 ಕೋಟಿ ರೂಪಾಯಿ ಇತ್ತು.

“ಪ್ರಯಾಣವನ್ನು ಹೊರತುಪಡಿಸಿ ಹೆಚ್ಚಿನ ವಿಭಾಗಗಳಲ್ಲಿ ಖರ್ಚು ಮಾಡುವುದು ಸೆಪ್ಟೆಂಬರ್ ತಿಂಗಳಲ್ಲಿ 2021ರ ಮಾರ್ಚ್ ಮಟ್ಟವನ್ನು ತಲುಪಿದೆ,” ಎಂದು ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸಂದೀಪ್ ಬಕ್ಷಿ, Q2 ಫಲಿತಾಂಶಗಳ ನಂತರ ವಿಶ್ಲೇಷಕರ ಕಾಲ್​ನಲ್ಲಿ​ ತಿಳಿಸಿದ್ದಾರೆ. ರಜಾದಿನಗಳಲ್ಲಿ ಖರ್ಚಿನ ಟ್ರೆಂಡ್ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ. “ಹಬ್ಬದ ಋತುವು ಉತ್ತಮವಾಗಿ ಪ್ರಾರಂಭವಾಗಿದೆ ಮತ್ತು ನಾವು ಮತ್ತಷ್ಟು ವೇಗವನ್ನು ನಿರೀಕ್ಷಿಸುತ್ತೇವೆ,” ಎಂದು ಆಕ್ಸಿಸ್ ಬ್ಯಾಂಕ್‌ನ ಎಂ.ಡಿ. ಮತ್ತು ಸಿಇಒ ಅಮಿತಾಬ್ ಚೌಧರಿ, ಕಂಪೆನಿಯ ಎರಡನೇ ತ್ರೈಮಾಸಿಕ ಗಳಿಕೆಯ ನಂತರ ಹೇಳಿದ್ದಾರೆ.

ಹೆಚ್ಚುತ್ತಿರುವ ಆರ್ಥಿಕ ಚಟುವಟಿಕೆಯು ಹಬ್ಬದ ಋತುವಿನೊಂದಿಗೆ ಸೇರಿ ಖರ್ಚು ಮಾಡುವ ವೇಗವನ್ನು ಬಲವಾಗಿ ಇರಿಸುತ್ತದೆ ಎಂದು ತಜ್ಞರು ನಂಬುತ್ತಾರೆ. ಮೋತಿಲಾಲ್ ಓಸ್ವಾಲ್ ಪ್ರಕಾರ, ಕಳೆದ ಆರು ತಿಂಗಳಲ್ಲಿ ಈ ವಲಯದಲ್ಲಿ ಪ್ರತಿ ಕಾರ್ಡ್‌ಗೆ ಮಾಸಿಕ ಖರ್ಚು ಸರಾಸರಿ 10,700 ರಿಂದ 12,400 ರೂಪಾಯಿಗೆ ಏರಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸೆಪ್ಟೆಂಬರ್‌ನಲ್ಲಿ 20,221 ಕೋಟಿ ರೂಪಾಯಿಗಳ ಕಾರ್ಡ್ ಖರ್ಚು ಹೊಂದಿದೆ, ನಂತರದ ಸ್ಥಾನದಲ್ಲಿ ಐಸಿಐಸಿಐ ಬ್ಯಾಂಕ್ 17,268 ಕೋಟಿ ರೂಪಾಯಿ ಮತ್ತು ಎಸ್‌ಬಿಐ ಕಾರ್ಡ್‌ಗಳು 14,698 ಕೋಟಿ ರೂಪಾಯಿಗಳನ್ನು ಹೊಂದಿದೆ. ಸೆಪ್ಟೆಂಬರ್‌ನಲ್ಲಿ, ಬ್ಯಾಂಕಿಂಗ್ ಉದ್ಯಮವು ಒಂದು ಮಿಲಿಯನ್‌ಗಿಂತಲೂ ಹೆಚ್ಚು (1.09 ಮಿಲಿಯನ್) ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ಸೇರಿಸಿದ್ದು, ವರ್ಷದಿಂದ ವರ್ಷಕ್ಕೆ ಶೇ 10.8ರಷ್ಟು ಹೆಚ್ಚಾಗಿದೆ.

ಇದು 11 ತಿಂಗಳಲ್ಲಿ ಅತಿ ದೊಡ್ಡ ಸಂಖ್ಯೆಯಾಗಿದ್ದು, ಚಲಾವಣೆಯಲ್ಲಿರುವ ಒಟ್ಟು ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆಯನ್ನು 65 ಮಿಲಿಯನ್‌ಗೆ ತಂದಿದೆ. ದೇಶದ ಅತಿದೊಡ್ಡ ಕ್ರೆಡಿಟ್ ಕಾರ್ಡ್ ವಿತರಕ, ಎಚ್​ಡಿಎಫ್​ಸಿ ಬ್ಯಾಂಕ್ ಸೆಪ್ಟೆಂಬರ್‌ನಲ್ಲಿ 2,44,257 ಕ್ರೆಡಿಟ್ ಕಾರ್ಡ್‌ಗಳನ್ನು ಸೇರ್ಪಡೆ ಮಾಡಿದೆ. ನಂತರದ ಸ್ಥಾನದಲ್ಲಿ ಐಸಿಐಸಿಐ ಬ್ಯಾಂಕ್ 2,33,628 ಕಾರ್ಡ್‌ಗಳನ್ನು ಹೊಂದಿದೆ. ಆಕ್ಸಿಸ್ ಬ್ಯಾಂಕ್ 2,02,537 ಕಾರ್ಡ್‌ಗಳನ್ನು ಮತ್ತು ಎಸ್​ಬಿಐ ಕಾರ್ಡ್‌ಗಳು 1,74,875 ಕಾರ್ಡ್‌ಗಳನ್ನು ಹೊಂದಿದೆ. ಆಗಸ್ಟ್‌ನಲ್ಲಿ ಸುಮಾರು 5,20,000 ಕಾರ್ಡ್‌ಗಳನ್ನು ಸೇರಿಸಲಾಗಿದೆ. ಐಸಿಐಸಿಐ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್ ಮುನ್ನಡೆ ಸಾಧಿಸಿವೆ.

ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಮಿತಿ ಜಾಸ್ತಿ ಇರುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ