AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Credit score: ಮತ್ತೊಬ್ಬರ ಸಾಲಕ್ಕೆ ಗ್ಯಾರಂಟರ್ ಆಗುವ ಮೊದಲು ಈ ಅಂಶಗಳು ನಿಮ್ಮ ಗಮನದಲ್ಲಿರಲಿ

ಮತ್ತೊಬ್ಬರು ಪಡೆದ ಸಾಲಕ್ಕೆ ಗ್ಯಾರಂಟರ್ ಆಗಿದ್ದೀರಾ ಅಥವಾ ಆಗಬೇಕು ಅಂತ ಕೇಳಿದ್ದೀರಾ? ಹಾಗೆ ಗ್ಯಾರಂಟರ್ ಆಗುವ ಮುನ್ನ ಈ ಅಂಶಗಳು ನಿಮ್ಮ ಗಮನದಲ್ಲಿರಲಿ

Credit score: ಮತ್ತೊಬ್ಬರ ಸಾಲಕ್ಕೆ ಗ್ಯಾರಂಟರ್ ಆಗುವ ಮೊದಲು ಈ ಅಂಶಗಳು ನಿಮ್ಮ ಗಮನದಲ್ಲಿರಲಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 07, 2021 | 11:49 PM

Share

ಕೊವಿಡ್-19 ಬಿಕ್ಕಟ್ಟಿನ ಕಾರಣಕ್ಕೆ ಹೇರಿದ ಲಾಕ್​ಡೌನ್​ನಿಂದಾಗಿ ಕಳೆದ ವರ್ಷಗಳಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ ಅಥವಾ ವೇತನ ಕಡಿತವನ್ನು ಎದುರಿಸಿದ್ದಾರೆ. ಒಂದು ವೇಳೆ ಸಾಲದ ಮರು ಹೊಂದಾಣಿಕೆಗೆ ಬ್ಯಾಂಕ್ ಅವಕಾಶ ನೀಡದಿದ್ದರೆ ಕೆಲವರು ತಮ್ಮ ಸಾಲವನ್ನು ಸಹ ಪಾವತಿಸಲು ಸಾಧ್ಯವಾಗಿಲ್ಲ. ಹೀಗೆ ಸಾಲ ಮರುಪಾವತಿ ಮಾಡದಂಥ ವ್ಯಕ್ತಿಗೆ ನೀವು ಗ್ಯಾರಂಟಿಯಾಗಿ ಇದ್ದರೆ ನಿಮ್ಮ ಪಾಲಿಗೆ ತೊಂದರೆ ಎದುರಾಗಬಹುದು. ಸಾಲ ನೀಡುವ ಸಂಸ್ಥೆಗಳು ಸಾಮಾನ್ಯವಾಗಿ ಸಾಲದ ಮೊತ್ತವು ಅಧಿಕವಾಗಿದ್ದಾಗ ಅಥವಾ ಪ್ರಾಥಮಿಕ ಸಾಲಗಾರರ ಮರುಪಾವತಿ ಸಾಮರ್ಥ್ಯದೊಂದಿಗೆ ಬ್ಯಾಂಕ್​ಗೆ ಅಗತ್ಯ ಇದೆ ಎನಿಸಿದಾಗ ಗ್ಯಾರಂಟರ್​ ಅನ್ನು ಆ ಸಾಲಕ್ಕೆ ಜತೆಯಾಗಿಸಲು ಕೇಳುತ್ತಾರೆ. ಯಾವುದೇ ಸನ್ನಿವೇಶದಲ್ಲಿ, ಪ್ರಾಥಮಿಕ ಸಾಲಗಾರನು ಸಾಲದ ಇಎಂಐ ಪಾವತಿಸಲು ವಿಫಲವಾದರೆ, ಖಾತರಿದಾರರು ಅದರ ಸಂಪೂರ್ಣ ಮರುಪಾವತಿ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ.

ಪ್ರಾಥಮಿಕ ಸಾಲಗಾರರು ಸಾಲ ಮರುಪಾವತಿ ಮಾಡದಿದ್ದರೆ ಬಾಕಿ ಮೊತ್ತವನ್ನು ಪಾವತಿಸುವ ಹೊಣೆಗಾರಿಕೆ ಸಾಲಸ ಖಾತರಿದಾರರ ಮೇಲೆ ಬರುತ್ತದೆ. ಆತ ಪಾವತಿಸದಿದ್ದಲ್ಲಿ, ಖಾತರಿದಾರರು ಕಾನೂನು ಕ್ರಮಕ್ಕೆ ಹೊಣೆಗಾರನಾಗಿರುತ್ತಾರೆ. ಸಾಲಗಾರನ ವಿರುದ್ಧ ವಸೂಲಾತಿಯ ಪ್ರಕರಣವನ್ನು ಸಲ್ಲಿಸಿದರೆ, ಅದು ಸಾಲಗಾರ ಮತ್ತು ಖಾತರಿದಾರರ ವಿರುದ್ಧ ಪ್ರಕರಣ ದಾಖಲಿಸುತ್ತದೆ. ಸಾಲವನ್ನು ತೀರಿಸಲು ಆಸ್ತಿಗಳನ್ನು ಮಾರುವಂತೆ ನ್ಯಾಯಾಲಯವು ಗ್ಯಾರಂಟಿ ಆಗಿ ನಿಂತ ವ್ಯಕ್ತಿಯನ್ನು ಒತ್ತಾಯಿಸಬಹುದು. ಒಂದು ವೇಳೆ ವಿಷಯ ಇಷ್ಟು ಅತಿರೇಕಕ್ಕೆ ಹೋಗದಿದ್ದರೂ ಖಾತರಿದಾರರಾಗಿ ಇರುವುದಕ್ಕೆ ಸಂಬಂಧಿಸಿದಂತೆ ಇತರ ತೊಂದರೆಗಳಿವೆ.

ಗ್ಯಾರಂಟಿಯಾಗಿ (ಖಾತ್ರಿದಾರರಾಗಿ) ಸಹಿ ಮಾಡಿದ ಕ್ಷಣದಿಂದ ನಿಮ್ಮ ಸಾಲದ ಅರ್ಹತೆ ಕಡಿಮೆಯಾಗುತ್ತದೆ. ಒಂದು ವೇಳೆ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ, ಸಾಲದಾತರು ನೀವು ಖಾತರಿ ನೀಡಿದ ಸಾಲದ ಬಾಕಿ ಮೊತ್ತವನ್ನು ಅನಿಶ್ಚಿತ (ಕಂಟಿಂಜೆಂಟ್) ಹೊಣೆಗಾರಿಕೆ ಎಂದು ಪರಿಗಣಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಆ ಸಾಲದ ಮೊತ್ತ ಜವಾಬ್ದಾರಿಯನ್ನು ನಿಮಗೂ ವಿಸ್ತರಿಸಬಹುದು. ಇದಲ್ಲದೆ, ನೀವು ಸಾಲಕ್ಕೆ ಖಾತರಿದಾರರಾಗಿದ್ದೀರಿ ಎಂಬುದು ಕ್ರೆಡಿಟ್ ರಿಪೋರ್ಟ್​ನಲ್ಲಿಯೂ ಕಂಡುಬರುತ್ತದೆ. ಇದರರ್ಥ ಪ್ರಾಥಮಿಕ ಸಾಲಗಾರರು ಮರುಪಾವತಿಸದಿದ್ದರೂ ಅಥವಾ ನೀವು ಯಾವುದೇ ಸಾಲ ವಾಪಸ್ ಕೊಡದಿದ್ದರೂ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.

ಮೊದಲನೆಯದಾಗಿ ನೀವು ಯಾರಿಗಾದರೂ ಸಾಲಕ್ಕೆ ಗ್ಯಾರಂಟಿ ಆಗದಿದ್ದರೆ ಉತ್ತಮ. ಒಂದು ವೇಳೆ ಹಾಗೇನಾದರೂ ಆದಲ್ಲಿ ಅವರು ಅದನ್ನು ಮರುಪಾವತಿಸದಿದ್ದಲ್ಲಿ ನಿಮಗಾದರೂ ಹಿಂತಿರುಗಿದುವ ಸಾಮರ್ಥ್ಯ ಇರಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಇದನ್ನೂ ಓದಿ: Credit Card EMI: ಕ್ರೆಡಿಟ್ ಕಾರ್ಡ್ ಬಿಲ್ ಯಾವಾಗ ಮತ್ತು ಯಾಕೆ ಇಎಂಐಗೆ ಕನ್ವರ್ಟ್ ಮಾಡಿಸಬೇಕು ಗೊತ್ತಾ?

(When primary borrower become default, here is the points to remember by guarantor)

Published On - 11:48 pm, Wed, 7 July 21

Follow Us
TV9 Web
TV9 Web

TV9 Kannada

Read More
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ