ಗೃಹ ಬಳಕೆಯ ಅಡುಗೆ ಅನಿಲ ಬೆಲೆ ಮತ್ತೆ ಹೆಚ್ಚಳವಾಗಿದೆ. ನೂತನ ದರ ಇಂದಿನಿಂದ ಜಾರಿಗೆ ಬರಲಿದೆ. ಪ್ರತಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳವಾಗಿದೆ. 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದ್ದು, ನೂತನ ದರ ಇಂದಿನಿಂದ ಜಾರಿಗೆ ಬರಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 1103 ರೂ. ಆಗಿದ್ದು, ಎಂಟು ತಿಂಗಳ ಬಳಿಕ ಗೃಹ ಬಳಕೆಯ ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿದೆ. ಜುಲೈ 6 2022ರಿಂದ ದೇಶೀಯ ಎಲ್‍ಪಿಜಿ ಸಿಲಿಂಡರ್ ಬೆಲೆಗಳು ಸ್ಥಿರವಾಗಿವೆ. ವಾಣಿಜ್ಯ ಸಿಲಿಂಡರ್ ಬೆಲೆ 350 ರೂ. ಹೆಚ್ಚಾಗಿದೆ.
ಫೆಬ್ರವರಿ 28 ರಂದು ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ದೆಹಲಿಯಲ್ಲಿ 1769 ರೂ. ಬದಲು 2119.5 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ 1870 ರೂ. ಇದ್ದು, ಇದೀಗ 2221.5 ರೂ,ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ 1917ರೂ,ಗೆ ಲಭ್ಯವಿದ್ದ ಸಿಲಿಂಡರ್ ಇದೀಗ 2268 ರೂ,ಗೆ ಲಭ್ಯವಾಗಲಿದೆ.
ಮಾರ್ಚ್ 1 ರಂದು ಗೃಹ ಬಳಕೆಯ ಸಿಲಿಂಡರ್ ದರಗಳು
14.2 ಕೆಜಿ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಇಂದಿನಿಂದ ದೆಹಲಿಯಲ್ಲಿ 1053 ರೂ.ಗೆ ಬದಲಾಗಿ 1103 ರೂ.ಗೆ ಲಭ್ಯವಾಗಲಿದೆ. ಮುಂಬೈನಲ್ಲಿ ಈ ಸಿಲಿಂಡರ್ ಬೆಲೆ 1052.50 ರೂ. ಬದಲಿಗೆ 1102 ರೂ.,ಗೆ ಮಾರಾಟ ಮಾಡಲಾಗುತ್ತಿದೆ. ಕೋಲ್ಕತ್ತಾದಲ್ಲಿ 1079 ರೂ. ಬದಲು 1129 ಮತ್ತು ಚೆನ್ನೈನಲ್ಲಿ ಇಂದಿನಿಂದ 1068.50ರೂ. ಬದಲಿಗೆ 1118.5 ಬೆಲೆ ಇರುತ್ತದೆ.
ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:21 am, Wed, 1 March 23