ನವದೆಹಲಿ, ನವೆಂಬರ್ 9: ದೀಪಾವಳಿ ಹಬ್ಬ ಶುರುವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೋಕಲ್ ಫಾರ್ ಲೋಕಲ್ (Vocal for Local) ಸಂದೇಶ ಹೆಚ್ಚು ಜನಜನಿತವಾಗುತ್ತಿದೆ. ಈ ದೀಪಾವಳಿಯಲ್ಲಿ ವಿಶೇಷವಾಗಿ ನಾರಿ ಸೇ ಖರೀದಾರಿ (Naari se Khareedari) ಧ್ವನಿ ಕೂಡ ಹೆಚ್ಚಾಗುತ್ತಿದೆ. ಸ್ಥಳೀಯ ಮಹಿಳೆಯರಿಂದ ಖರೀದಿಸಿ ಎನ್ನುವ ಈ ಅಭಿಯಾನಕ್ಕೆ ಬಹಳ ಜನರು ಓಗೊಡುತ್ತಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರು ಈ ದೀಪಾವಳಿ ಹಬ್ಬಕ್ಕೆ ಸ್ಥಳೀಯ ಮಹಿಳಾ ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳಿಂದ ವಸ್ತುಗಳನ್ನು ಖರೀದಿಸಿ ಅವರ ಜೀವನ ಬೆಳಗಿಸಿ ಎನ್ನುವ ಸಂದೇಶ ರವಾನಿಸಿದ್ದಾರೆ. ಇವೆಲ್ಲವೂ ಈ ಬಾರಿಯ ದೀಪಾವಳಿ ಹಬ್ಬದ ಸಂದರ್ಭದ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸ್ಥಳೀಯ ವಸ್ತುಗಳ ಖರೀದಿಗೆ ಆದ್ಯತೆ ಹೆಚ್ಚುವ ನಿರೀಕ್ಷೆ ಇದೆ. ಇದರ ಪರಿಣಾಮವಾಗಿ ವಿದೇಶೀ ವಸ್ತುಗಳು, ಅದರಲ್ಲೂ ಚೀನಾದ ಉತ್ಪನ್ನಗಳ ವ್ಯಾಪಾರ ಈ ಬಾರಿ ಬಹಳಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.
ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಬಗ್ಗೆ ಜನರಿಗೆ ಅರಿವು ಹೆಚ್ಚುತ್ತಿದೆ. ಒಂದು ಅಂದಾಜು ಪ್ರಕಾರ ದೀಪಾವಳಿ ಹಬ್ಬದ ವ್ಯಾಪಾರ ವಹಿವಾಟಿನಲ್ಲಿ ಚೀನಾಗೆ ಆಗುವ ನಷ್ಟ ಒಂದು ಲಕ್ಷ ಕೋಟಿ ರೂನಷ್ಟು ಇರಬಹುದು ಎಂದು ಎಎನ್ಐ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬದಂದು ಆರು ದಿನ ಬ್ಯಾಂಕುಗಳ ರಜೆ; ನಿಮ್ಮ ಪ್ರದೇಶದಲ್ಲಿ ಯಾವ್ಯಾವತ್ತು ಇದೆ ರಜೆ, ಇಲ್ಲಿದೆ ಪಟ್ಟಿ
ಇನ್ನು, ಸ್ಥಳೀಯ ಮಹಿಳಾ ಉದ್ದಿಮೆದಾರರು ಮತ್ತು ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸಿ ಎಂದು ಸ್ಮೃತಿ ಇರಾನಿ ಕರೆ ನೀಡಿರುವ ವಿಡಿಯೋವನ್ನು ಅಖಿಲ ಭಾರತ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲವಾಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಈ ದೀಪಾವಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ವೋಕಲ್ ಫಾರ್ ಲೋಕಲ್ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ನಾರಿ ಸೇ ಖರೀದಾರಿ ಕರೆಗಳಿಗೆ ದೇಶದ 9 ಕೋಟಿ ಉದ್ದಿಮೆದಾರರ ಬೆಂಬಲ ಇದೆ. ಎಲ್ಲಾ ಮಹಿಳಾ ಉದ್ದಿಮೆದಾರರಿಗೂ ಈ ದೇಶದ ಮಾರುಕಟ್ಟೆ ತೆರೆದಿದೆ. ನೀವು ಕೂಡ ಮಹಿಳೆಯರಿಂದ ಖರೀದಿ ಮಾಡಿ,’ ಎಂದು ಪ್ರವೀಣ್ ಖಂಡೇಲ್ವಾಲ್ ಕರೆ ನೀಡಿದ್ದಾರೆ.
प्रधानमंत्री श्री @narendramodi जी के इस दिवाली #VocalForLocal के आह्वान में केंद्रीय मंत्री श्रीमती @smritiirani जी की अपील #NaariSeKharidaari का देश के 9 करोड़ व्यापारी @CAITIndia का पूर्ण समर्थन।
छोटे दीयों से लेकर बुटीक चलाने वाली सभी महिला उद्यमियों को हम दे रहें है देश का… pic.twitter.com/sX65RjX86Q
— Praveen Khandelwal (@praveendel) November 9, 2023
ಇದನ್ನೂ ಓದಿ: ವಿಸ್ತಾರ ಏರ್ಲೈನ್ಸ್ನಿಂದ ಫೆಸ್ಟಿವಲ್ ಆಫರ್; ಕೇವಲ 1,999 ರೂನಿಂದ ಟಿಕೆಟ್ ಬೆಲೆ ಶುರು; ನವೆಂಬರ್ 9ರವರೆಗೆ ಅವಕಾಶ
ನವೆಂಬರ್ 10ರಂದು ಧನದೇತರಸ್ ದಿನ ಇದೆ. ಅಕ್ಷಯ ತೃತೀಯ ರೀತಿ ಇದೂ ಕೂಡ ಬಹಳ ಪವಿತ್ರ ದಿನವಾಗಿದೆ. ಈ ದಿನದಂದು ಚಿನ್ನ ಇತ್ಯಾದಿ ಖರೀದಿಸುವುದನ್ನು ಶುಭವೆಂದು ಹಿಂದೂ ಶಾಸ್ತ್ರಗಳು ಹೇಳುತ್ತವೆ. ಧನ್ವಂತರಿ ಮಹರ್ಷಿಗಳ ಜನ್ಮದಿನ ಕೂಡ ಇದು. ಇದೇ ದಿನದಂದು ದೀಪಾವಳಿ ಆರಂಭವಾಗುತ್ತದೆ. ಬಹಳಷ್ಟು ಕಡೆ ಶಾಪಿಂಗ್ ಕಾರ್ಯ ಸಡಗರದಿಂದ ನಡೆಯುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ