DigiLocker: ನಿಮ್ಮ ಡಿಜಿಲಾಕರ್ ಅಕೌಂಟ್‌ ಹ್ಯಾಕ್ ಆಗಿದೆ ಎಂದು ಹೀಗೆ ತಿಳಿಯಿರಿ

ಡಿಜಿಲಾಕರ್ ಈ ಹೆಸರನ್ನು ಎಲ್ಲರೂ ಕೇಳಿಯೇ ಇರುತ್ತೀರಿ. ನೀವು ನಿಮ್ಮ ಡಾಕ್ಯುಮೆಂಟ್ಸ್ ಗಳನ್ನು ಈ ಸುರಕ್ಷಿತ ಕ್ಲೌಡ್ ಆಧಾರಿತ ವೇದಿಕೆಯಲ್ಲಿ ಸೇಫ್ ಆಗಿ ಇಟ್ಟುಕೊಳ್ಳಬಹುದು. ಒಂದು ವೇಳೆ ನಿಮ್ಮದು ಡಿಜಿ ಲಾಕರ್ ಹ್ಯಾಕ್ ಆಗಿದ್ರೆ ನೀವು ಮಾಡಬೇಕಾರುವುದು ಇಷ್ಟೇ. ನಿಮ್ಮ ಡಿಜಿಲಾಕರ್ ಖಾತೆ ಹ್ಯಾಕ್ ಆಗಿದೆ ಎಂದು ಅನುಮಾನ ಬಂದ ತಕ್ಷಣವೇ ಡಿಜಿಲಾಕರ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪಾಸ್‌ವರ್ಡ್ ಬದಲಿಸಿ.

DigiLocker: ನಿಮ್ಮ ಡಿಜಿಲಾಕರ್ ಅಕೌಂಟ್‌ ಹ್ಯಾಕ್ ಆಗಿದೆ ಎಂದು ಹೀಗೆ ತಿಳಿಯಿರಿ
ಡಿಜಿಲಾಕರ್‌
Image Credit source: Getty Images

Updated on: Jul 09, 2026 | 5:55 PM

ಮುಖ್ಯಾಂಶಗಳು

  • ಡಿಜಿಟಲ್ ಇಂಡಿಯಾ ಪರಿಚಯಿಸಲಾದ ಸುರಕ್ಷಿತ ಕ್ಲೌಡ್ ಆಧಾರಿತ ವೇದಿಕೆ ಡಿಜಿಲಾಕರ್‌
  • ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪತ್ರ, ಅಂಕ ಪಟ್ಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸುರಕ್ಷಿತವಾಗಿಡಬಹುದು
  • ನಿಮ್ಮ ಡಿಜಿಲಾಕರ್ ಹ್ಯಾಕ್ ಆಗಿದೆ ಎಂದು ಈ ಕೆಲವು ಬದಲಾವಣೆಯಿಂದ ತಿಳಿಯಬಹುದು

ಡಿಜಿಲಾಕರ್‌ ಇದೊಂದು ಡಿಜಿಟಲ್‌ ದಾಖಲೆಗಳ ಲಾಕರ್. ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಡಿಜಿಲಾಕರ್ (DigiLocker) ಡಿಜಿಟಲ್ ಇಂಡಿಯಾ ಪರಿಚಯಿಸಲಾದ ಸುರಕ್ಷಿತ ವೇದಿಕೆಯಲ್ಲಿ ಒಂದು.  ಈ ಖಾತೆ ಮೂಲಕ ನೀವು ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪತ್ರ, ಪ್ಯಾನ್ ಕಾರ್ಡ್‌ ಹಾಗೂ ಅಂಕಪಟ್ಟಿಗಳು ಸೇರಿದಂತೆ ಇನ್ನಿತರ ಪ್ರಮುಖ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬಹುದಾಗಿದೆ. ಒಂದು ವೇಳೆ ನಿಮ್ಮ ಡಿಜಿಲಾಕರ್ ಹ್ಯಾಕ್ ಆಗಿದೆ ಎಂದು ಈ ಕೆಲವು ಸಣ್ಣ ಬದಲಾವಣೆಯಿಂದ ತಿಳಿಯಬಹುದು. ಒಂದು ವೇಳೆ ನೀವು ಈ ಕೆಲಸ ಮೊದ್ಲು ಮಾಡಿದ್ರೆ ಹ್ಯಾಕ್ ಆದ ಖಾತೆ ಸುರಕ್ಷಿತವಾಗಿರುತ್ತದೆ.

ಡಿಜಿಲಾಕರ್ ಹ್ಯಾಕ್ ಆಗಿದೆ ಎಂದು ತಿಳಿಯುವುದು ಹೇಗೆ?

  • ನೀವು ಡಿಜಿಲಾಕರ್‌ಗೆ ಲಾಗಿನ್ ಆಗದಿದ್ರೂ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
  • ಡಿಜಿ ಲಾಕರ್ ಪ್ರೊಫೈಲ್‌ನಲ್ಲಿನ ಹೆಸರು, ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಬದಲಾಗಿರುತ್ತದೆ.
  • ಡಿಜಿ ಲಾಕರ್ ಖಾತೆಗೆ ಲಾಗಿನ್ ಆಗಲು ಪಾಸ್‌ವರ್ಡ್ ಬಳಸಿದ್ರೂ ಲಾಗಿನ್ ಆಗಲು ಆಗಲ್ಲ.
  • ಡಿಜಿ ಲಾಕರ್ ನಲ್ಲಿ ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಅಥವಾ ಇತರ ದಾಖಲೆಗಳನ್ನು ಡೌನ್‌ಲೋಡ್ ಮಾಡಲಾಗಿರುತ್ತದೆ.

 

ಡಿಜಿಲಾಕರ್ ಹ್ಯಾಕ್ ಆಗಿದ್ರೆ ನೀವು ಮೊದಲು ಏನು ಮಾಡಬೇಕು?

ಪಾಸ್‌ವರ್ಡ್ ಬದಲಾಯಿಸುವುದನ್ನು ಮರೆಯದಿರಿ: ನಿಮ್ಮ ಡಿಜಿಲಾಕರ್ ಖಾತೆಗೆ ಲಾಗಿನ್ ಆಗಿ ತಕ್ಷಣವೇ ನಿಮ್ಮ ಪಾಸ್‌ವರ್ಡ್ ಬದಲಾಯಿಸಿ.

ನಕಲಿ ಆಪ್‌ಗಳನ್ನು ಬಳಸುವುದನ್ನು ತಪ್ಪಿಸಿ: ಈಗ ನಕಲಿ ಆ್ಯಪ್ ಗಳ ಸಂಖ್ಯೆ ಹೆಚ್ಚಾಗಿದೆ. ನೀವೇನಾದ್ರೂ ನಕಲಿ ಡಿಜಿಲಾಕರ್ ಆ್ಯಪ್ ಡೌನ್‌ಲೋಡ್ ಅದನ್ನು ಡಿಲೀಟ್ ಮಾಡಿ . ನ್ಯಾಷನಲ್‌ ಇ- ಗವರ್ನೆನ್ಸ್‌ ಡಿವಿಷನ್‌  ವತಿಯಿಂದ ಮಾತ್ರ ಡಿಜಿ ಲಾಕರ್ ಡೌನ್‌ಲೋಡ್ ಮಾಡಿ ಬಳಸಿಕೊಂಡು ಖಾತೆ ತೆರೆಯಿರಿ.

ಇತರ ಸಾಧನಗಳಲ್ಲಿ ನೀವು ಲಾಗಿನ್‌ ಆಗಿದ್ದರೆ ತಪ್ಪದೇ ಪರಿಶೀಲಿಸಿ: ನಿಮ್ಮ ಖಾತೆಯ ಸೆಟ್ಟಿಂಗ್‌ಗಳಿಗೆ ಹೋಗಿ, ಅಲ್ಲಿ ನೀವು ಇನ್ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಲಾಗಿನ್ ಆಗಿದ್ದರೆ, ಅವುಗಳನ್ನು ತಕ್ಷಣವೇ ಲಾಗ್ ಔಟ್ ಮಾಡುವುದು ಉತ್ತಮ.

ಹ್ಯಾಕ್ ಆದದ್ದು ತಿಳಿದರೆ ಸೈಬರ್ ಕ್ರೈಮ್‌ಗೆ ದೂರು ನೀಡಿ: ಡಿಜಿ ಲಾಕರ್ ಹ್ಯಾಕ್ ಆಗಿದೆ ಎಂದು ತಿಳಿದರೆ, ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿ.

ಇದನ್ನೂ ಓದಿ: Ration Card: ಕಳೆದುಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಮೊಬೈಲ್‌ನಲ್ಲಿ ಹೀಗೆ ಕಂಡು ಹಿಡಿಯಿರಿ

 

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಡಿಜಿಲಾಕರ್ ಹ್ಯಾಕ್ ಆಗಿದೆ ಎಂದು ತಿಳಿಯುವುದು ಹೇಗೆ?

ಉತ್ತರ: ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುವುದು, ಪ್ರೊಫೈಲ್‌ನಲ್ಲಿನ ಬದಲಾವಣೆಗಳು, ಅಗತ್ಯ ದಾಖಲೆಗಳ ಡೌನ್ಲೋಡ್ ನಿಂದ ತಿಳಿಯುತ್ತದೆ.

ಪ್ರಶ್ನೆ: ಡಿಜಿಲಾಕರ್ ಹ್ಯಾಕ್ ಆಗಿದ್ರೆ ಮೊದಲು ಯಾವ ಕೆಲಸ ಮಾಡಬೇಕು?

ಉತ್ತರ: ಡಿಜಿ ಲಾಕರ್ ಹ್ಯಾಕ್ ಆಗಿದೆ ಎಂದು ತಿಳಿದ ತಕ್ಷಣವೇ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ಈ ಬಗ್ಗೆ ದೂರು ನೀಡಿ.

ಪ್ರಶ್ನೆ: ಡಿಜಿಲಾಕರ್ ಹ್ಯಾಕ್ ಆಗಿದ್ರೆ ಏನು ಮಾಡಬೇಕು?

ಉತ್ತರ: ಪಾಸ್‌ವರ್ಡ್ ಬದಲಾಯಿಸುವುದು, ನಕಲಿ ಖಾತೆಗಳನ್ನು ಡಿಲೀಟ್ ಮಾಡುವುದು ಹಾಗೂ ಇತರ ಸಾಧನಗಳನ್ನು ತಪ್ಪದೇ ಪರಿಶೀಲಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

 

Published On - 5:32 pm, Thu, 9 July 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us