ಡಿಜಿಟಲ್ ಪೇಮೆಂಟ್ ಪ್ರಮುಖವಾದ ಫೋನ್‌ಪೇ ಸೋಮವಾರ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಆಫ್‌ಲೈನ್ ವ್ಯಾಪಾರಿ ವಹಿವಾಟುಗಳು ಕಳೆದ ವರ್ಷದಿಂದ ಈ ವರ್ಷಕ್ಕೆ ಶೇ 200ರಷ್ಟು ಬೆಳವಣಿಗೆಯನ್ನು ತೋರಿಸಿದೆ ಮತ್ತು ನವೆಂಬರ್ ತಿಂಗಳಿನಲ್ಲಿ ಇದು ನೂರು ಕೋಟಿ P2M (ಪೀರ್ ಟು ಮರ್ಚೆಂಟ್) ವಹಿವಾಟುಗಳನ್ನು ಪ್ರೊಸೆಸ್ ಮಾಡಿದೆ. ಕಂಪೆನಿಯು ದೇಶದಲ್ಲಿ 25 ಮಿಲಿಯನ್ ಸಣ್ಣ ವ್ಯಾಪಾರಿಗಳು ಮತ್ತು ಕಿರಾಣಾ ಅಂಗಡಿಗಳನ್ನು ಡಿಜಿಟಲೈಸೇಷನ್ ಮಾಡಿದೆ ಎಂದು ಹೇಳಿದೆ. ಫೋನ್‌ಪೇ (PhonePe) ಈ ಬೆಳವಣಿಗೆಗೆ ಭೌಗೋಳಿಕತೆಯಾದ್ಯಂತ ಆಫ್‌ಲೈನ್ ವ್ಯಾಪಾರಿ ಸ್ವೀಕಾರದಲ್ಲಿ ಕಂಡುಬಂದಿರುವ ವೇಗವಾದ ವಿಸ್ತರಣೆಗೆ ಕಾರಣ ಆಗಿದೆ. 1.25 ಲಕ್ಷ ಪ್ರಬಲ ಕ್ಷೇತ್ರ ಪಡೆಯು ಭಾರತದಾದ್ಯಂತ ಕಂಪೆನಿಯ ವ್ಯಾಪಾರಿ ಸ್ವೀಕಾರ ಜಾಲವನ್ನು ಚಾಲನೆ ಮಾಡುವಲ್ಲಿ ಮತ್ತು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
“ಫೋನ್‌ಪೇ ಈಗ 15,700 ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ವ್ಯಾಪಾರಿ ನೆಟ್‌ವರ್ಕ್ ಅನ್ನು ಹೊಂದಿದೆ. ಇದು ದೇಶದಲ್ಲಿ ಶೇಕಡಾ 99ರಷ್ಟು ಪಿನ್ ಕೋಡ್‌ಗಳನ್ನು ಹೊಂದಿದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಂಪೆನಿಯು ಈ ಹಿಂದೆ, 2021ರ ಅಂತ್ಯದ ವೇಳೆಗೆ 25 ಮಿಲಿಯನ್ ಸಂಖ್ಯೆಯನ್ನು ತಲುಪುವ ತನ್ನ ಯೋಜನೆ ಘೋಷಿಸಿತ್ತು ಮತ್ತು ಈ ಗುರಿಯನ್ನು ನಿಗದಿತ ವಾರಗಳ ಮುಂಚೆಯೇ ಸಾಧಿಸಿದೆ. ನವೆಂಬರ್‌ನಲ್ಲಿ ಫೋನ್‌ಪೇ 100 ಕೋಟಿ P2M ವಹಿವಾಟುಗಳನ್ನು ಪ್ರೊಸೆಸ್ ಮಾಡಿದೆ. ಫೋನ್ಪೇಯಲ್ಲಿನ P2M ವಹಿವಾಟುಗಳು ಆಫ್‌ಲೈನ್ ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಬಳಕೆದಾರರು ಮಾಡಿದ ಪೇಮೆಂಟ್ ಮತ್ತು ರೀಚಾರ್ಜ್‌ಗಳು, ಬಿಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳಂತಹ ಎಲ್ಲ ಉಪಯುಕ್ತ ಪಾವತಿಗಳನ್ನು ಒಳಗೊಂಡಿರುತ್ತದೆ.
“ಫೋನ್‌ಪೇ ಭಾರತದ ಅತಿದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾಗಿ ಹೊರಹೊಮ್ಮಿದೆ ಮತ್ತು ಮೌಲ್ಯ ಹಾಗೂ ವಹಿವಾಟಿನ ಪ್ರಮಾಣ, ನೋಂದಾಯಿತ ಬಳಕೆದಾರರು ಮತ್ತು ವ್ಯಾಪಾರಿ ವ್ಯಾಪ್ತಿಯನ್ನು ಒಳಗೊಂಡಿರುವ ಎಲ್ಲ ಪ್ರಮುಖ ಮೆಟ್ರಿಕ್‌ಗಳಲ್ಲಿ ನಾವು ಉದ್ಯಮವನ್ನು ಮುನ್ನಡೆಸುತ್ತಿದ್ದೇವೆ,” ಎಂದು ಫೋನ್‌ಪೇ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಫೋನ್‌ಪೇ ಭಾರತದಾದ್ಯಂತ 25 ಮಿಲಿಯನ್ ಮಳಿಗೆಗಳನ್ನು ಡಿಜಿಟಲೈಸ್ ಮಾಡುವ ಗುರಿಯನ್ನು ಇರಿಸಿಕೊಂಡಿದೆ ಮತ್ತು ಕಂಪೆನಿಯು ದಾಖಲೆಯ ಸಮಯದಲ್ಲಿ ಈ ಮೈಲುಗಲ್ಲನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: PhonePe: ದೇಶದಲ್ಲಿ ಇದೇ ಮೊದಲು; ಫೋನ್‌ಪೇ ಮೂಲಕ ರೀಚಾರ್ಜ್ ಮಾಡಿಸಿದರೆ ಇನ್ನು ಮುಂದೆ ಶುಲ್ಕ ಬೀಳತ್ತೆ
Published On - 2:58 pm, Mon, 13 December 21