AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PhonePe: ದೇಶದಲ್ಲಿ ಇದೇ ಮೊದಲು; ಫೋನ್​ಪೇ ಮೂಲಕ ರೀಚಾರ್ಜ್​ ಮಾಡಿಸಿದರೆ ಇನ್ನು ಮುಂದೆ ಶುಲ್ಕ ಬೀಳತ್ತೆ

ಮೊಬೈಲ್ ಬಿಲ್ ಪಾವತಿ ಮೇಲೆ ಇಂತಿಷ್ಟು ಶುಲ್ಕ ಎಂದು ವಿಧಿಸುವುದಕ್ಕೆ ಆನ್​ಲೈನ್ ಪೇಮೆಂಟ್ ಆ್ಯಪ್ ಫೋನ್​ಪೇ ನಿರ್ಧಾರ ಮಾಡಿದೆ. ದೇಶದಲ್ಲೇ ಇದು ಮೊದಲ ಬಾರಿಯಾಗಿದೆ.

PhonePe: ದೇಶದಲ್ಲಿ ಇದೇ ಮೊದಲು; ಫೋನ್​ಪೇ ಮೂಲಕ ರೀಚಾರ್ಜ್​ ಮಾಡಿಸಿದರೆ ಇನ್ನು ಮುಂದೆ ಶುಲ್ಕ ಬೀಳತ್ತೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Oct 23, 2021 | 11:29 AM

Share

ವಾಲ್​ಮಾರ್ಟ್​ ಸಮೂಹದ ಆನ್​ಲೈನ್ ಅಪ್ಲಿಕೇಷನ್ ಫೋನ್​ಪೇ (PhonePe) ದೇಶದ ಮೊದಲ ಅಪ್ಲಿಕೇಷನ್​ ಆಗಿದ್ದು, ಯುಪಿಐ- ಆಧಾರಿತ ವಹಿವಾಟುಗಳಿಗೆ ದರ ವಿಧಿಸಲು ಆರಂಭಿಸಿದೆ. ಡಿಜಿಟಲ್ ಪೇಮೆಂಟ್​ ಅಪ್ಲಿಕೇಷನ್​ ಫೋನ್​ಪೇಯಿಂದ 50 ರೂಪಾಯಿ ಮೇಲ್ಪಟ್ಟು ಮೊಬೈಲ್ ಚಾರ್ಜ್ ಯುಪಿಐ ಮೂಲಕ ಮಾಡಿಸಿದರೂ ಆ ವಹಿವಾಟಿನ ಮೇಲೆ 1ರಿಂದ 2 ರೂಪಾಯಿ ಪ್ರೊಸೆಸಿಂಗ್ ಶುಲ್ಕ ಆಗುತ್ತದೆ. ಕಂಪೆನಿ ಹೇಳಿರುವಂತೆ, 50 ರೂಪಾಯಿ ಒಳಗಿನ ಮೊಬೈಲ್ ರೀಚಾರ್ಜ್​ ಮಾಡಿದಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. 50ರಿಂದ 100 ರೂಪಾಯಿ ಮಧ್ಯೆ ರೀಚಾರ್ಜ್ ಮಾಡಿಸಿದರೆ 1 ರೂಪಾಯಿ ಶುಲ್ಕ ವಿಧಿಸುತ್ತದೆ. 100 ರೂಪಾಯಿ ಮೇಲ್ಪಟ್ಟು ಮೊಬೈಲ್​ ರೀಚಾರ್ಜ್ ಮಾಡಿಸಿದರೆ ಫೋನ್​ಪೇ ಗ್ರಾಹಕರು ರೂ. 2 ವಿಧಿಸುತ್ತದೆ.

“ರೀಚಾರ್ಜಸ್​ ಮೇಲೆ ನಾವು ಸಣ್ಣ ಪ್ರಮಾಣದ ಪ್ರಯೋಗ ಮಾಡುತ್ತಿದ್ದೇವೆ. ಕೆಲವೇ ಬಳಕೆದಾರರು ಮೊಬೈಲ್ ರೀಚಾರ್ಜ್​ ಮೇಲೆ ಪಾವತಿಸುತ್ತಾರೆ. ರೀಚಾರ್ಜ್ 50 ರೂಪಾಯಿ ಒಳಗಿನ ಚಾರ್ಜ್​ಗೆ ಯಾವುದೇ ಶುಲ್ಕ ಇಲ್ಲ. 50ರಿಂದ 100 ರೂಪಾಯಿ ರೀಚಾರ್ಜ್​ಗೆ ರೂ.1 ಮತ್ತು 100 ರೂಪಾಯಿಯ ಮೇಲ್ಪಟ್ಟ ಚಾರ್ಜ್​ಗೆ 2 ರೂಪಾಯಿ ವಿಧೀಸಲಾಗುತ್ತದೆ. ಮುಖ್ಯವಾಗಿ, ಪ್ರಯೋಗದ ಭಾಗವಾಗಿ, ಬಹುತೇಕ ಬಳಕೆದಾರರು ಒಂದೋ ಏನನ್ನೂ ಪಾವತಿಸುವುದಿಲ್ಲ ಅಥವಾ 1 ರೂಪಾಯಿ ಪಾವತಿಸುತ್ತಾರೆ,” ಫೋನ್​ಪೇ ಹೇಳಿದೆ. ಇನ್ನು ಕ್ರೆಡಿಟ್​ ಕಾರ್ಡ್ ಮೂಲಕ ಪಾವತಿಗೆ ಇತರ ಪ್ಲಾಟ್​ಫಾರ್ಮ್​ನಂತೆಯೇ ಫೋನ್​ಪೇ ಕೂಡ ದರ ವಿಧಿಸುತ್ತದೆ.

ಬಿಲ್​ ಪಾವತಿ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ನಾವು ಮಾತ್ರ ಅಥವಾ ಪೇಮೆಂಟ್​ ಪ್ಲಾಟ್​ಫಾರ್ಮ್​ ಆಗಿ ಶುಲ್ಕವನ್ನು ವಿಧಿಸುತ್ತಿಲ್ಲ. ಬಿಲ್ ಪಾವತಿ ಮೇಲೆ ಸಣ್ಣ ಮೊತ್ತದ ಶುಲ್ಕ ವಿಧಿಸುವುದು ಈ ಕ್ಷೇತ್ರದ ಸ್ಟ್ಯಾಂಡರ್ಡ್ ಅಭ್ಯಾಸ. ಇತರ ಬಿಲ್ಲರ್ ವೆಬ್​ಸೈಟ್​ಗಳು ಮತ್ತು ಪೇಮೆಂಟ್ ಪ್ಲಾಟ್​ಫಾರ್ಮ್​ಗಳೂ ಶುಲ್ಕ ವಿಧಿಸುತ್ತವೆ. ಕ್ರೆಡಿಟ್ ಕಾರ್ಡ್ ಮೂಲಕ ಮಾತ್ರ ಪಾವತಿಸಿದರೆ ನಾವು ಪ್ರೊಸೆಸಿಂಗ್ ಫೀ (ಇತರ ಪ್ಲಾಟ್​ಫಾರ್ಮ್​ಗಳು ಕನ್ವೀನಿಯೆನ್ಸ್ ಶುಲ್ಕ ಎನ್ನುತ್ತವೆ) ವಿಧಿಸುತ್ತೇವೆ,” ಎಂದಯ ಫೋನ್​ಪೇ ವಕ್ತಾರ ಹೇಳಿದ್ದಾರೆ.

ಥರ್ಡ್​ ಪಾರ್ಟಿ ಅಪ್ಲಿಕೇಷನ್​ಗಳ ಪೈಕಿ ಯುಪಿಐ ವಹಿವಾಟಿನಲ್ಲಿ ಫೋನ್​ಪೇ ದೊಡ್ಡ ಮಟ್ಟದ ಪಾಲು ಹೊಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅದರ ಪ್ಲಾಟ್​ಫಾರ್ಮ್​ನಲ್ಲಿ 165 ಕೋಟಿ ಯುಪಿಐ ವಹಿವಾಟು ಮಾಡಿದೆ. ಆ ಮೂಲಕ ಆ್ಯಪ್​ ಸೆಗ್ಮೆಂಟ್​ನಲ್ಲಿ ಶೇ 40ರಷ್ಟು ಪಾಲು ಹೊಂದಿದೆ. ಫ್ಲಿಪ್​ಕಾರ್ಟ್​ನ ಮಾಜಿ ಅಧಿಕಾರಿಗಳಾದ ಸಮೀರ್ ನಿಗಮ್, ರಾಹುಲ್ ಚಾರಿ ಮತ್ತು ಬುರ್ಜಿನ್ ಎಂಜಿನೀರ್ ಸೇರಿ 2015ರಲ್ಲಿ ಫೋನ್​ಪೇ ಸ್ಥಾಪಿಸಿದರು. ಡಿಜಿಟಲ್ ಪೇಮೆಂಟ್ ಆ್ಯಪ್ ಫೋನ್​ಪೇಗೆ 30 ಕೋಟಿ ನೋಂದಾಯಿತ ಬಳಕೆದಾರರಿದ್ದಾರೆ.

ಇದನ್ನೂ ಓದಿ: Offline UPI: ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೂ ಯುಪಿಐ ಮೂಲಕ ಹಣ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ