ನವದೆಹಲಿ, ಜನವರಿ 24: ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹ ಕಳೆದ 10 ವರ್ಷದಲ್ಲಿ ಶೇ. 160.52ರಷ್ಟು ಹೆಚ್ಚಾಗಿದೆ. 2013-14ರ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹ 6,38,596 ಕೋಟಿ ರೂ ಇತ್ತು. ಈಗ 2022-23ರಲ್ಲಿ 16,63,686 ಕೋಟಿ ರೂ ನಿವ್ವಳ ನೇರ ತೆರಿಗೆ (Net Direct Tax collections) ಸಂಗ್ರಹವಾಗಿದೆ. ಹಣಕಾಸು ಸಚಿವಾಲಯಕ್ಕೆ ಸೇರಿದ ಸಿಬಿಡಿಟಿ (CBDT- Central Board of Direct Taxes) ಈ ದತ್ತಾಂಶವನ್ನು ಬಿಡುಗಡೆ ಮಾಡಿದೆ.
ನಿವ್ವಳ ನೇರ ತೆರಿಗೆ ಸಂಗ್ರಹ 2013-14ರ ಹಣಕಾಸು ವರ್ಷದಲ್ಲಿ 6,38,596 ಕೋಟಿ ರೂ ಇದ್ದದ್ದು 2022-23ರಲ್ಲಿ 16,63,686 ಕೋಟಿ ರೂ ಆಗಿದೆ. ಸಂಗ್ರಹದಲ್ಲಿ ಶೇ. 160.52ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: Interesting Case: ಬ್ಯಾಂಕುಗಳು ಮನಬಂದಂತೆ ಬಡ್ಡಿ ಹಾಕಿದ್ರೆ ನೀವೇನ್ ಮಾಡುತ್ತಿರುತ್ತೀರಿ? ಆರ್ಬಿಐಗೆ ಛೇಮಾರಿ ಹಾಕಿದ ಕೋರ್ಟ್
ಸಮಗ್ರ ನೇರ ತೆರಿಗೆ (Gross Direct Tax Collections) 2013-14ರಲ್ಲಿ 7,21,604 ಕೋಟಿ ರೂ ಇತ್ತು. 2022-23ರಲ್ಲಿ 19,72,248 ಕೋಟಿ ರೂ ಆಗಿದೆ. ಹತ್ತು ವರ್ಷದಲ್ಲಿ ಶೇ. 173.31ರಷ್ಟು ಹೆಚ್ಚಾಗಿದೆ.
ಜಿಡಿಪಿ ಮತ್ತು ನೇರ ತೆರಿಗೆ ನಡುವಿನ ಅನುಪಾತದಲ್ಲೂ (direct tax to GDP Ratio) ಹೆಚ್ಚಾಗಿದೆ. 2013-14ರಲ್ಲಿ 5.62ರಷ್ಟು ಇದ್ದ ಆ ಅನುಪಾತ 2022-23ರಲ್ಲಿ ಶೇ. 6.11ಕ್ಕೆ ಹೆಚ್ಚಾಗಿದೆ.
ತೆರಿಗೆ ಸಂಗ್ರಹಕ್ಕೆ ಆಗುವ ವೆಚ್ಚದಲ್ಲೂ ಇಳಿಕೆ ಆಗಿದೆ. 2013-14ರಲ್ಲಿ ತೆರಿಗೆ ಸಂಗ್ರಹ್ಕೆ ಶೇ. 0.57ರಷ್ಟು ವೆಚ್ಚ ಮಾಡಲಾಗಿತ್ತು. 2022-23ರಲ್ಲಿ ಆ ವೆಚ್ಚ ಶೇ. 0.51ಕ್ಕೆ ಕಡಿಮೆ ಆಗಿದೆ.
ಇದನ್ನೂ ಓದಿ: Agricultural Credit: ಕೃಷಿ ಸಾಲದ ಗುರಿಯನ್ನು 22ರಿಂದ 25 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಸಾಧ್ಯತೆ
ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ (Income tax return filing) ಮಾಡುವ ಸಂಖ್ಯೆಯಲ್ಲೂ 10 ವರ್ಷದಲ್ಲಿ ಬಹಳಷ್ಟು ಹೆಚ್ಚಾಗಿದೆ. 2013-14ರಲ್ಲಿ 3.80 ಕೋಟಿ ಐಟಿಆರ್ಗಳು ಸಲ್ಲಿಕೆ ಆಗಿದ್ದವು. 2022-23ರಲ್ಲಿ 7.78 ಕೋಟಿ ಮಂದಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದಾರೆ. ಐಟಿಆರ್ ಸಲ್ಲಿಸುವವ ಸಂಖ್ಯೆ 10 ವರ್ಷದಲ್ಲಿ ಶೇ. 105.91ರಷ್ಟು ಹೆಚ್ಚಾಗಿದೆ.
ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಆದಾಯಕ್ಕೆ ನೇರವಾಗಿ ವಿಧಿಸುವ ತೆರಿಗೆ ಡೈರೆಕ್ಟ್ ಟ್ಯಾಕ್ಸ್ ಎನಿಸುತ್ತದೆ. ಆದಾಯ ತೆರಿಗೆ (ಇನ್ಕಮ್ ಟ್ಯಾಕ್ಸ್), ಕಾರ್ಪೊರೇಟ್ ತೆರಿಗೆ, ಧನ ಲಾಭ ತೆರಿಗೆ, ಷೇರು ವಹಿವಾಟು ತೆರಿಗೆ (ಎಸ್ಟಿಟಿ), ಲಾಭಾಂಶ ವಿತರಣೆ ತೆರಿಗೆ (ಡಿಡಿಟಿ), ಗಿಫ್ಟ್ ತೆರಿಗೆ, ಎಸ್ಟೇಟ್ ಟ್ಯಾಕ್ಸ್ ಇತ್ಯಾದಿಯವು ಸೇರುತ್ತವೆ. ಜಿಎಸ್ಟಿ ಎಂಬುದು ನೇರ ತೆರಿಗೆ ಆಗಿರುವುದಿಲ್ಲ. ಅದು ಇನ್ಡೈರೆಕ್ಟ್ ಟ್ಯಾಕ್ಸ್ ಎಂದು ಪರಿಗಣಿತವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:43 am, Wed, 24 January 24