eBay Layoff: ಇಬೇ ಸಂಸ್ಥೆಯಿಂದ ಶೇ. 9ರಷ್ಟು ಉದ್ಯೋಗಿಗಳ ಲೇ ಆಫ್; ಗುತ್ತಿಗೆ ಆಧಾರಿತ ಉದ್ಯೋಗಿಗಳ ಕೆಲಸಕ್ಕೂ ಕತ್ತರಿ?

|

Updated on: Jan 24, 2024 | 1:12 PM

ಅಮೆರಿಕದ ಇಕಾಮರ್ಸ್ ಕಂಪನಿ ಇಬೇ 1,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ. ಪೂರ್ಣಾವಧಿ ಉದ್ಯೋಗಿಗಳ ಜೊತೆಗೆ ಗುತ್ತಿಗೆ ಆಧಾರಿತ ಉದ್ಯೋಗಿಗಳ ಸಂಖ್ಯೆಯನ್ನೂ ಕಡಿತಗೊಳಿಸುತ್ತಿದೆ ಇಬೇ. ಜನವರಿ 24 ಆದ ಇಂದು ಇಬೇ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಮ್ ನೀಡಿದ್ದು, ಲೇ ಆಫ್ ಮಾಡುತ್ತಿರುವ ಸುದ್ದಿಯನ್ನು ಝೂಮ್ ಮೀಟಿಂಗ್​ನಲ್ಲಿ ತಿಳಿಸಲಾಗುತ್ತದೆ.

eBay Layoff: ಇಬೇ ಸಂಸ್ಥೆಯಿಂದ ಶೇ. 9ರಷ್ಟು ಉದ್ಯೋಗಿಗಳ ಲೇ ಆಫ್; ಗುತ್ತಿಗೆ ಆಧಾರಿತ ಉದ್ಯೋಗಿಗಳ ಕೆಲಸಕ್ಕೂ ಕತ್ತರಿ?
ಇಬೇ
Follow us on

ಸ್ಯಾನ್ ಫ್ರಾನ್ಸಿಸ್ಕೋ, ಜನವರಿ 24: ಅಮೆರಿಕದ ಇಕಾಮರ್ಸ್ ಪ್ಲಾಟ್​ಫಾರ್ಮ್ ಆಗಿರುವ ಇಬೇ ಸಂಸ್ಥೆ (eBay) ದೊಡ್ಡ ಮಟ್ಟದಲ್ಲಿ ಲೇ ಆಫ್​ಗೆ (Layoffs) ಕೈಹಾಕುತ್ತಿದೆ. ಶೇ. 9ರಷ್ಟು ಪೂರ್ಣಾವಧಿ ಉದ್ಯೋಗಿಗಳನ್ನು (full time employees) ಕೆಲಸದಿಂದ ತೆಗೆದುಹಾಕುವುದಾಗಿ ಇಬೇ ಸಂಸ್ಥೆ ಹೇಳಿದೆ. ಸುಮಾರು 1,000 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಇದು ಪೂರ್ಣಾವಧಿ ಉದ್ಯೋಗಿಗಳಿಗೆ ಬಂದಿರುವ ಆಪತ್ತು ಮಾತ್ರವಲ್ಲ, ಗುತ್ತಿಗೆ ಆಧಾರಿತವಾಗಿ ಕೆಲಸದಲ್ಲಿರುವ (employees on contract basis) ಉದ್ಯೋಗಿಗಳಿಗೂ ಆಪತ್ತಿದೆ. ಕಾಂಟ್ರಾಕ್ಟರ್​ಗಳ ಸಂಖ್ಯೆಯನ್ನೂ ಸಾಕಷ್ಟು ಇಳಿಸುವ ಆಲೋಚನೆಯಲ್ಲಿ ಇಬೇ ಸಂಸ್ಥೆ ಇದೆ.

ಅಷ್ಟಕ್ಕೂ ಇ ಬೇ ಸಂಸ್ಥೆ ಕಳೆದ ತ್ರೈಮಾಸಿಕ ಅವಧಿಯಲ್ಲಿ 1.3 ಬಿಲಿಯನ್ ಡಾಲರ್​ನಷ್ಟು ಲಾಭ ಮಾಡಿದೆ. ಆದರೂ ಕೂಡ ಲೇ ಆಫ್​ಗೆ ಕೈ ಹಾಕಿದೆ. ಈ ಲಾಭ ಇದೇ ರೀತಿ ಮುಂದುವರಿಯುವುದನ್ನು ಖಚಿತಪಡಿಸಲು ಕಂಪನಿಯೊಳಗೆ ಒಂದಷ್ಟು ಪರಿವರ್ತನೆ ಆಗಬೇಕು. ಆ ನಿಟ್ಟಿನಲ್ಲಿ ರಚನಾತ್ಮಕ ಬದಲಾವಣೆ ಮಾಡಲಾಗುತ್ತಿದೆ. ಒಂದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ವೆಚ್ಚ ಕಡಿತ ಮಾಡುವ ದಾರಿಯೂ ಅದರಲ್ಲಿ ಒಂದು ಎಂದು ಸಂಸ್ಥೆ ಹೇಳಿದೆ. ವರದಿ ಪ್ರಕಾರ ಇಂದೇ ಕೆಲಸ ಹೋಗುವ ಉದ್ಯೋಗಿಗಳಿಗೆ ಮೆಮೋ ಹೋಗಬಹುದು.

ಇದನ್ನೂ ಓದಿ: Rich Rangareddy: ತಲಾದಾಯದಲ್ಲಿ ತೆಲಂಗಾಣ ಯಾಕೆ ನಂ. 1? ಅದಕ್ಕೆ ಕಾರಣ ಹೈದರಾಬಾದ್ ಅಲ್ಲ, ರಂಗಾರೆಡ್ಡಿ ಜಿಲ್ಲೆಯಾ?

ಝೂಮ್ ಟೀಮ್ ಮೀಟಿಂಗ್ ವೇಳೆ ಲೇ ಆಫ್ ಮಾಡಲಾಗುತ್ತಿರುವ ವಿಷಯವನ್ನು ಮ್ಯಾನೇಜರುಗಳು ಉದ್ಯೋಗಿಗಳಿಗೆ ತಿಳಿಸಲಿದ್ದಾರೆ. ಲೇ ಆಫ್ ಪ್ರಕ್ರಿಯೆ ಮುಗಿದ ಬಳಿಕ ಉದ್ಯೋಗಿಗಳಿಗೆ ಸೂಚನೆ ಹೋಗಲಿದೆ ಎಂದು ಇಬೇ ಸಿಇಒ ಮತ್ತು ಅಧ್ಯಕ್ಷ ಜೇಮೀ ಅಯಾನ್ನೋನೆ ಹೇಳಿದ್ದಾರೆ.

ಒಂದು ದಿನ ವರ್ಕ್ ಫ್ರಂ ಹೋಮ್ ಕೊಟ್ಟ ಇಬೇ

ಲೇ ಆಫ್ ಪ್ರಕ್ರಿಯೆಯ ಭಾಗವಾಗಿ ಅಗತ್ಯ ಸಂವಹನಕ್ಕೆ ಬೇಕಾದ ಪೂರಕ ವಾತಾವರಣ ಇರುವುದು ಅಗತ್ಯ. ಅದಕ್ಕಾಗಿ ಇಬೆ ಸಂಸ್ಥೆ ಇಂದು ಬುಧವಾರ (ಜ. 24) ಅಮೆರಿಕದ ಎಲ್ಲಾ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಮ್ ಮಾಡಲು ತಿಳಿಸಿದೆ.

ಕೆಲಸ ಕಳೆದುಕೊಳ್ಳುವ ಪ್ರತಿಯೊಬ್ಬ ಉದ್ಯೋಗಿಯನ್ನೂ ಗೌರವಯುತವಾಗಿ ನಡೆಸಿಕೊಂಡು, ಅವರಿಗೆ ಸಾಧ್ಯವಾದಷ್ಟೂ ಸಹಾಯ ಹಸ್ತ ಚಾಚಲು ಕಂಪನಿ ಬದ್ಧವಾಗಿದೆ ಎನ್ನುವ ವಿಚಾರವನ್ನು ಸಿಇಒ ತಿಳಿಸಿದ್ದಾರೆ.

ಇದನ್ನೂ ಓದಿ: Interesting Case: ಬ್ಯಾಂಕುಗಳು ಮನಬಂದಂತೆ ಬಡ್ಡಿ ಹಾಕಿದ್ರೆ ನೀವೇನ್ ಮಾಡುತ್ತಿರುತ್ತೀರಿ? ಆರ್​ಬಿಐಗೆ ಛೇಮಾರಿ ಹಾಕಿದ ಕೋರ್ಟ್

ಯಾಕೆ ಈ ಲೇ ಆಫ್?

ಕಳೆದ ಕ್ವಾರ್ಟರ್​ನಲ್ಲಿ ಉತ್ತಮ ಲಾಭ ಮಾಡಿದ್ದರೂ ಇಬೇ ಲೇ ಆಫ್ ಮೊರೆ ಹೋಗಿರುವುದು ಅಚ್ಚರಿ ಮೂಡಿಸಿದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ಮಂದಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. ವ್ಯವಹಾರಕ್ಕಿಂತ ವೆಚ್ಚವೇ ಹೆಚ್ಚು ವೇಗದಲ್ಲಿ ಬೆಳೆಯುತ್ತಿದೆ. ಹೀಗಾಗಿ, ಉದ್ಯೋಗಿಗಳು ಹಾಗೂ ಕಾಂಟ್ರಾಕ್ಟರ್​ಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಇಬೇ ಸಿಇಒ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ