Sign In

By signing in or creating an account, you agree with Associated Broadcasting Company's Terms & Conditions and Privacy Policy.

Rich Rangareddy: ತಲಾದಾಯದಲ್ಲಿ ತೆಲಂಗಾಣ ಯಾಕೆ ನಂ. 1? ಅದಕ್ಕೆ ಕಾರಣ ಹೈದರಾಬಾದ್ ಅಲ್ಲ, ರಂಗಾರೆಡ್ಡಿ ಜಿಲ್ಲೆಯಾ?

Per Capita Income: ಭಾರತದ ರಾಜ್ಯಗಳ ಪೈಕಿ ತಲಾದಾಯದಲ್ಲಿ ತೆಲಂಗಾಣ ಅಗ್ರಸ್ಥಾನದಲ್ಲಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳನ್ನು ಹಿಂದಿಕ್ಕಿದೆ. ತೆಲಂಗಾಣದಲ್ಲಿ ಅದರ ರಾಜಧಾನಿ ನಗರಿ ಹೈದರಾಬಾದ್ ಎರಡನೇ ಸ್ಥಾನದಲ್ಲಿದೆ. ರಂಗಾರೆಡ್ಡಿ ಅಗ್ರಸ್ಥಾನದಲ್ಲಿದೆ. ಬೆಂಗಳೂರಿಗಿಂತ ರಂಗಾರೆಡ್ಡಿ ತಲಾದಾಯ ಹೆಚ್ಚಿದೆ. ಹೈದರಾಬಾದ್​ಗಿಂತ ರಂಗಾರೆಡ್ಡಿ ತಲಾದಾಯ ಎರಡು ಪಟ್ಟು ಹೆಚ್ಚಿದೆ.

Rich Rangareddy: ತಲಾದಾಯದಲ್ಲಿ ತೆಲಂಗಾಣ ಯಾಕೆ ನಂ. 1? ಅದಕ್ಕೆ ಕಾರಣ ಹೈದರಾಬಾದ್ ಅಲ್ಲ, ರಂಗಾರೆಡ್ಡಿ ಜಿಲ್ಲೆಯಾ?
ತೆಲಂಗಾಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 24, 2024 | 12:40 PM

ಹೈದರಾಬಾದ್, ಜನವರಿ 24: ಇತ್ತೀಚಿನ ಆರ್ಥಿಕ ಸಮೀಕ್ಷೆ ಪ್ರಕಾರ ತೆಲಂಗಾಣವು ಭಾರತದಲ್ಲಿ ಅತಿಹೆಚ್ಚು ತಲಾದಾಯ (per capita income) ಹೊಂದಿರುವ ರಾಜ್ಯವಾಗಿದೆ. ಕೇಂದ್ರಾಡಳಿತ ಪ್ರದೇಶಗಳನ್ನು ಬಿಟ್ಟರೆ ರಾಜ್ಯಗಳ ಪೈಕಿ ತೆಲಂಗಾಣ ನಂಬರ್ ಒನ್ ಎನಿಸಿದೆ. ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಮೊದಲಾದ ಸಿರಿವಂತ ರಾಜ್ಯಗಳನ್ನು ತಲಾದಾಯದಲ್ಲಿ ಹಿಂದಿಕ್ಕಿದೆ ತೆಲಂಗಾಣ. ಪ್ರತಿಯೊಂದು ರಾಜ್ಯದಲ್ಲೂ ಅದರ ರಾಜಧಾನಿ ನಗರವು ಹೆಚ್ಚು ಆದಾಯ ಸೃಷ್ಟಿ ತರುತ್ತದೆ. ತೆಲಂಗಾಣ ರಾಜಧಾನಿ ಹೈದರಾಬಾದ್ ಎರಡನೇ ಐಟಿ ನಗರವಾಗಿ ಹೊರಹೊಮ್ಮುತ್ತಿದ್ದು, ಅದರಿಂದಾಗಿ ತೆಲಂಗಾಣ ರಾಜ್ಯದ ತಲಾದಾಯ ಹೆಚ್ಚಲು ಕಾರಣ ಎಂದು ಭಾವಿಸಿದ್ದರೆ ಅದು ತಪ್ಪು.

ಅಚ್ಚರಿಯಾದರೂ ಇದು ಸತ್ಯ. ತೆಲಂಗಾಣದಲ್ಲಿ ಅತಿಹೆಚ್ಚು ತಲಾದಾಯ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ಹೈದರಾಬಾದ್ ಎರಡನೆ ಸ್ಥಾನದಲ್ಲಿದೆ. ರಂಗಾರೆಡ್ಡಿ ಜಿಲ್ಲೆ (Rangareddy district) ಮೊದಲ ಸ್ಥಾನದಲ್ಲಿದೆ. ಇನ್ನೂ ಅಚ್ಚರಿ ಎಂದರೆ ಹೈದರಾಬಾದ್​ನ ತಲಾದಾಯಕ್ಕಿಂತ ರಂಗಾರೆಡ್ಡಿಯದ್ದು ಎರಡು ಪಟ್ಟು ಹೆಚ್ಚು.

ಹೈದರಾಬಾದ್ ಜಿಲ್ಲೆಯ ವಾರ್ಷಿಕ ತಲಾದಾಯ 4.03 ಲಕ್ಷ ರೂ ಇದೆ. ಅದೇ ತೆಲಂಗಾಣದ ತಲಾದಾಯ ಬರೋಬ್ಬರಿ 8.15 ಲಕ್ಷ ರೂ ಇದೆ. ತಲಾದಾಯದಲ್ಲಿ ಮಾತ್ರವಲ್ಲ ಜಿಲ್ಲಾವಾರು ಜಿಡಿಡಿಪಿಯಲ್ಲೂ ಹೈದರಾಬಾದ್ ಅನ್ನು ರಂಗಾರೆಡ್ಡಿ ಎರಡನೇ ಸ್ಥಾನಕ್ಕೆ ತಳ್ಳಿದೆ.

ಇದನ್ನೂ ಓದಿ: UP Economy: ರಾಮಮಂದಿರದಿಂದಾಗಿ ಉತ್ತರಪ್ರದೇಶಕ್ಕೆ ಒಂದು ವರ್ಷದಲ್ಲಿ 25,000 ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹವಾಗುತ್ತದಾ?

ತೆಲಂಗಾಣದಲ್ಲಿ ಅತಿಹೆಚ್ಚು ತಲಾದಾಯ ಇರುವ ಜಿಲ್ಲೆಗಳು

  1. ರಂಗಾರೆಡ್ಡಿ: 8,15,996 ರೂ
  2. ಹೈದರಾಬಾದ್: 4,03,214 ರೂ
  3. ಸಂಗಾರೆಡ್ಡಿ: 3,08,166 ರೂ
  4. ಮೇದಚಲ್ ಮಲ್ಕಾಜಗಿರಿ: 2,58,040 ರೂ
  5. ಯಾದಾದ್ರಿ ಭುವನಗಿರಿ: 2,47,184 ರೂ
  6. ನಲ್ಗೊಂಡಾ: 2,42,103 ರೂ
  7. ಮೆಹಬೂಬನಗರ್: 2,40,900 ರೂ
  8. ಮೇಡಕ್: 2,32,384 ರೂ
  9. ಭದ್ರಾದ್ರಿ ಕೊತ್ತಗುಡಮ್: 2,28,582 ರೂ
  10. ಜಯಶಂಕರ್: 2,23,481 ರೂ

ರಂಗಾರೆಡ್ಡಿ ಜಿಲ್ಲೆಯ ಬೆಳವಣಿಗೆಗೆ ಏನು ಕಾರಣ?

ರಂಗಾರೆಡ್ಡಿ ಜಿಲ್ಲೆ ಹೈದರಾಬಾದ್​ನ ದಕ್ಷಿಣ ಭಾಗದಲ್ಲಿ ಹೊಂದಿಕೊಂಡಂತೆ ಇದೆ. ಕಲಬುರ್ಗಿಗೆ ರಂಗಾರೆಡ್ಡಿ ಗಡಿ ಜಿಲ್ಲೆ. ಬೆಂಗಳೂರಿನ ಪಕ್ಕದಲ್ಲಿ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳು ಇದ್ದಂತೆ ಹೈದರಾಬಾದ್ ಪಕ್ಕ ರಂಗಾರೆಡ್ಡಿ ಜಿಲ್ಲೆ ಇದೆ. ಹಲವು ಐಟಿ ಕಂಪನಿಗಳು ಹೈದರಾಬಾದ್ ಬದಲು ರಂಗಾರೆಡ್ಡಿ ಕಡೆ ವಾಲುತ್ತಿವೆ. ತೆಲಂಗಾಣದ ಐಟಿ ಹಬ್ ಆಗಿ ಹೈದರಾಬಾದ್ ಸ್ಥಾನವನ್ನು ರಂಗಾರೆಡ್ಡಿ ತುಂಬಿದೆ.

ಇದನ್ನೂ ಓದಿ: Stock Market: ಇತಿಹಾಸದಲ್ಲಿ ಮೊದಲ ಬಾರಿಗೆ ಹಾಂಕಾಂಗ್ ಅನ್ನು ಹಿಂದಿಕ್ಕಿದೆ ಭಾರತದ ಷೇರುಪೇಟೆ; ಚೀನಾ ಸಮೀಪ ದೌಡು

ರಂಗಾರೆಡ್ಡಿ ಜಿಲ್ಲೆ ಕರ್ನಾಟಕಕ್ಕೂ ಪಾಠವಾಗಬಹುದು

ಬೆಂಗಳೂರು ಭಾರತದ ಸಿಲಿಕಾನ್ ಸಿಟಿಯಾಗಿದೆ. ಇದರ ತಲಾದಾಯ 6,21,131 ರೂ ಇದೆ. ದಕ್ಷಿಣ ಕನ್ನಡ ಜಿಲ್ಲೆ 4,43,057 ರೂನೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದು ಬಿಟ್ಟರೆ ಬೇರಾವ ಜಿಲ್ಲೆಯೂ 4 ಲಕ್ಷ ರೂ ತಲಾದಾಯ ಮಟ್ಟ ಮುಟ್ಟಿಲ್ಲ. ಬೆಂಗಳೂರಿನ ಸುತ್ತಲಿನ ಜಿಲ್ಲೆಗಳು ನಿರೀಕ್ಷಿತ ರೀತಿಯಲ್ಲಿ ಬೆಳೆಯುತ್ತಿಲ್ಲ. ಇದು ಬೆಂಗಳೂರಿನ ಮೇಲೆ ಹೆಚ್ಚು ಒತ್ತಡ ಹಾಕುತ್ತಿರಬಹುದು. ಇಲ್ಲಿಯ ಇನ್​ಫ್ರಾಸ್ಟ್ರಕ್ಚರ್ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ.

ಹೈದರಾಬಾದ್ ಪಕ್ಕದಲ್ಲಿ ರಂಗಾರೆಡ್ಡಿ ಹುಲುಸಾಗಿ ಬೆಳೆದ ರೀತಿಯಲ್ಲಿ ಬೆಂಗಳೂರಿನ ಪಕ್ಕದ ಜಿಲ್ಲೆಗಳು ಬೆಳೆದಲ್ಲಿ ಹೆಚ್ಚು ಕಂಪನಿಗಳು ಬೆಂಗಳೂರಿನಿಂದ ಹೊರಗೆ ವಲಸೆ ಹೋಗುವುದನ್ನು ತಪ್ಪಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್