UP Economy: ರಾಮಮಂದಿರದಿಂದಾಗಿ ಉತ್ತರಪ್ರದೇಶಕ್ಕೆ ಒಂದು ವರ್ಷದಲ್ಲಿ 25,000 ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹವಾಗುತ್ತದಾ?

Ram Temple Effect on Uttar Pradesh Economy: ಅಯೋಧ್ಯೆಯ ರಾಮಮಂದಿರದ ದೆಸೆಯಿಂದ ಉತ್ತರಪ್ರದೇಶದ ಪ್ರವಾಸೋದ್ಯಮಕ್ಕೆ ಭಾರೀ ಪುಷ್ಟಿ ಸಿಕ್ಕಿದೆ. ಉತ್ತರಪ್ರದೇಶಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಬಹಳಷ್ಟು ಹೆಚ್ಚಲಿದೆ. ಎಸ್​ಬಿಐ ರಿಸರ್ಚ್ ವರದಿ ಪ್ರಕಾರ 2024-25ರ ವರ್ಷದಲ್ಲಿ ಉತ್ತರಪ್ರದೇಶಕ್ಕೆ 25,000 ಕೋಟಿ ರೂನಷ್ಟು ತೆರಿಗೆ ಆದಾಯ ಹೆಚ್ಚಳವಾಗಲಿದೆ.

UP Economy: ರಾಮಮಂದಿರದಿಂದಾಗಿ ಉತ್ತರಪ್ರದೇಶಕ್ಕೆ ಒಂದು ವರ್ಷದಲ್ಲಿ 25,000 ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹವಾಗುತ್ತದಾ?
ಅಯೋಧ್ಯೆ ರಾಮಮಂದಿರ
Follow us
|

Updated on: Jan 23, 2024 | 6:36 PM

ನವದೆಹಲಿ, ಜನವರಿ 23: ಉತ್ತರಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ನಿನ್ನೆ ಪ್ರಾಣ ಪ್ರತಿಷ್ಠಾಪನಾ (Ram temple desecration ceremony) ಕಾರ್ಯಕ್ರಮ ನಡೆದಿದೆ. ಇಡೀ ದೇಶಕ್ಕೆ ದೇಶವೇ ನಿನ್ನೆ ಕೇಸರೀಮಯವಾಗಿತ್ತು. ರಾಮಮಂದಿರ ಬಹಳಷ್ಟು ಭಾರತೀಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಯೋಧ್ಯೆಗೆ ಹೋಗಿ ಬಾಲರಾಮನನ್ನು ಕಣ್ತುಂಬಿಸಿಕೊಳ್ಳಬೇಕೆಂದು ಹಪಹಪಿಸುತ್ತಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಇದು ಉತ್ತರಪ್ರದೇಶ ರಾಜ್ಯದ ಪ್ರವಾಸೋದ್ಯಮಕ್ಕೆ ಸಿಗಲಿರುವ ಭಾರೀ ಪುಷ್ಟಿಯ ವಿಚಾರವಾಗಿದೆ. ಗ್ಲೋಬಲ್ ಬ್ರೋಕರೇಜ್ ಸಂಸ್ಥೆಯಾದ ಜೆಫ್ರೀಸ್ ಈ ರಾಮಮಂದಿರದಿಂದ ಭಾರತದ ಪ್ರವಾಸೋದ್ಯಮಕ್ಕೆ ಎಷ್ಟು ಲಾಭ ತರಬಹುದು ಎಂದು ವಿಶ್ಲೇಷಿಸಿ ವರದಿ ಬಿಡುಗಡೆ ಮಾಡಿತ್ತು. ಈಗ ಎಸ್​ಬಿಐ ರಿಸರ್ಚ್ ಸಂಸ್ಥೆಯ ವರದಿಯೊಂದರ ಪ್ರಕಾರ ರಾಮಮಂದಿರದ ಫಲವಾಗಿ ಉತ್ತರಪ್ರದೇಶಕ್ಕೆ ಒಂದು ವರ್ಷದಲ್ಲಿ 25,000 ಕೋಟಿ ರೂನಷ್ಟು ತೆರಿಗೆ ಲಾಭ ತರಬಹುದು.

2025ರ ಅಂತ್ಯದೊಳಗೆ ಉತ್ತರಪ್ರದೇಶದಲ್ಲಿ ಪ್ರವಾಸಿಗರು ಮಾಡುವ ವೆಚ್ಚ 4 ಲಕ್ಷ ಕೋಟಿ ರೂ ದಾಟಿ ಹೋಗಬಹುದು. 2024-25ರ ಹಣಕಾಸು ವರ್ಷದಲ್ಲಿ ಉತ್ತರಪ್ರದೇಶದ ತೆರಿಗೆ ಆದಾಯ 20,000 ದಿಂದ 25,000 ಕೋಟಿ ರೂನಷ್ಟು ಹೆಚ್ಚಾಗಬಹುದು ಎಂದು ಎಸ್​ಬಿಐ ರಿಸರ್ಚ್ ಜನವರಿ 21ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ರಾಮಮಂದಿರ ಜಾಗದಲ್ಲಿ ಫ್ಯಾಕ್ಟರಿ ಕಟ್ಟಬೇಕಿತ್ತಾ? ತಪ್ಪು, ಮಂದಿರದಿಂದ ಆರ್ಥಿಕತೆಗೆ ಎಷ್ಟು ಲಾಭ ಆಗಬಹುದು ಗೊತ್ತಾ?

ಉತ್ತರಪ್ರದೇಶ ನಾಗಾಲೋಟ

ಒಂದು ಕಾಲದಲ್ಲಿ ಬಿಮಾರು ರಾಜ್ಯಗಳಲ್ಲಿ ಒಂದೆಂದು ಹಂಗಿಸಲಾಗುತ್ತಿದ್ದ ಉತ್ತರಪ್ರದೇಶ ಈಗ ಬಹಳಷ್ಟು ಬೆಳವಣಿಗೆ ಕಾಣುತ್ತಿದೆ. 2028ರಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ ಉತ್ತರಪ್ರದೇಶದ ಪಾತ್ರ ಮಹತ್ವದ್ದಿರಲಿದೆ. 2027ರಲ್ಲಿ 500 ಬಿಲಿಯನ್ ಡಾಲರ್ ಜಿಡಿಪಿ ಗಾತ್ರ ಮುಟ್ಟಬಹುದು ಎಂದು ನಿರೀಕ್ಷಿಸಲಾಗಿರುವ ಎರಡು ರಾಜ್ಯಗಳಲ್ಲಿ ಉತ್ತರಪ್ರದೇಶವೂ ಒಂದು. ಮಹಾರಾಷ್ಟ್ರ ಮತ್ತೊಂದು ರಾಜ್ಯವಾಗಿದೆ.

ಇದನ್ನೂ ಓದಿ: ರಾಮಮಂದಿರಕ್ಕೆ 3 ಲಕ್ಷ ಭಕ್ತರ ಆಗಮನ, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ: ಅರ್ಚಕರು

ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ಭಾರತದ ಅತಿದೊಡ್ಡ ರಾಜ್ಯಗಳ ಪೈಕಿ ಸೇರಿದೆ. ಮಹಾರಾಷ್ಟ್ರಕ್ಕೆ ಮುಂಬೈ ನಗರದ ಅನುಕೂಲ ಇದೆ. ಉತ್ತರಪ್ರದೇಶಕ್ಕೆ ಹೆಚ್ಚು ಆದಾಯ ತರಬಲ್ಲ ಪ್ರಮುಖ ನಗರ ಇಲ್ಲ. ನವದೆಹಲಿ ಪಕ್ಕದ ನೋಯ್ಡಾ, ಘಾಜಿಯಾಬಾದ್ ಮುಂತಾದ ಪ್ರದೇಶಗಳು ಹೆಚ್ಚಿನ ಆದಾಯ ತರುತ್ತವೆ. ಈಗ ಧಾರ್ಮಿಕ ಸ್ಥಳಗಳಾದ ಅಯೋಧ್ಯೆ ಮತ್ತು ವಾರಾಣಸಿ ಉತ್ತರಪ್ರದೇಶದ ಪ್ರವಾಸೋದ್ಯಮಕ್ಕೆ ಪುಷ್ಟಿ ಕೊಡಲಿದ್ದು ಆರ್ಥಿಕತೆಯ ಬೆಳವಣಿಗೆಯ ವೇಗ ಹೆಚ್ಚಿಸಬಹುದು.

ಉತ್ತರಪ್ರದೇಶದ ಆರ್ಥಿಕತೆ ನಾರ್ವೆಯಂತಹ ದೇಶವನ್ನು ಮೀರಿಸಬಹುದು ಎಂಬ ಎಣಿಕೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ