Gold Findings: ಚಿನ್ನ ಮತ್ತು ಬೆಳ್ಳಿ ಫೈಂಡಿಂಗ್ಸ್ ಮತ್ತು ಅಮೂಲ್ಯ ಲೋಹ ನಾಣ್ಯಗಳ ಮೇಲೆ ಆಮದು ಸುಂಕ ಹೆಚ್ಚಳ

Increase In Import Duties: ಗೋಲ್ಡ್ ಫೈಂಡಿಂಗ್ ಮತ್ತು ಸಿಲ್ವರ್ ಫೈಂಡಿಂಗ್ ಹಾಗೂ ಅಮೂಲ್ಯ ಲೋಹ ನಾಣ್ಯಗಳ ಮೇಲೆ ಆಮದು ಸುಂಕವನ್ನು ಶೇ. 15ಕ್ಕೆ ಹೆಚ್ಚಿಸಲಾಗಿದೆ. ಅಮೂಲ್ಯ ಲೋಹಗಳನ್ನು ಒಳಗೊಂಡಿರುವ ಸ್ಪೆಂಟ್ ಕೆಟಲಿಸ್ಟ್​​ಗಳ ಮೇಲೆ ಅಮದು ಸುಂಕ ಶೇ. 14.35ಕ್ಕೆ ಹೆಚ್ಚಿಸಲಾಗಿದೆ. ದೇಶೀಯ ಉದ್ಯಮವನ್ನು ಉತ್ತೇಜಿಸಲು ಸರ್ಕಾರ ಈ ಆಮದು ಸುಂಕ ಹೆಚ್ಚಳದ ನಿರ್ಧಾರ ತೆಗೆದುಕೊಂಡಿದೆ.

Gold Findings: ಚಿನ್ನ ಮತ್ತು ಬೆಳ್ಳಿ ಫೈಂಡಿಂಗ್ಸ್ ಮತ್ತು ಅಮೂಲ್ಯ ಲೋಹ ನಾಣ್ಯಗಳ ಮೇಲೆ ಆಮದು ಸುಂಕ ಹೆಚ್ಚಳ
ಗೋಲ್ಡ್ ಫೈಂಡಿಂಗ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 23, 2024 | 4:19 PM

ನವದೆಹಲಿ, ಜನವರಿ 23: ಗೋಲ್ಡ್ ಮತ್ತು ಸಿಲ್ವರ್ ಫೈಂಡಿಂಗ್​ಗಳು (Gold Silver findings) ಹಾಗೂ ಅಮೂಲ್ಯ ಲೋಹ ನಾಣ್ಯಗಳ (precious metal coins) ಮೇಲೆ ಆಮದು ಸಂಕವನ್ನು ಶೇ. 15ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಮೂಲಭೂತ ಕಸ್ಟಮ್ಸ್ ಡ್ಯೂಟಿ (basic custom duty) ಶೇ. 10 ಹಾಗೂ ಎಐಡಿಸಿ (All Industry Duty Drawback) ಶೇ. 5ರಷ್ಟು ಒಳಗೊಂಡಿದೆ. ಆದರೆ, ಈ ಮುಂಚೆ ವಿಧಿಸಲಾಗುತ್ತಿದ್ದ ಸೋಷಿಯಲ್ ವೆಲ್​ಫೇರ್ ಸರ್​ಚಾರ್ಜ್ (ಎಸ್​ಡಬ್ಲ್ಯುಎಸ್) ಅನ್ನು ಕೈಬಿಡಲಾಗಿದೆ.

ಇನ್ನು, ಅಮೂಲ್ಯ ಲೋಹಗಳನ್ನು ಒಳಗೊಂಡಿರುವ ಸ್ಪೆಂಟ್ ಕೆಟಲಿಸ್ಟ್​ಗಳ ಮೇಲೆ ಆಮದು ಸುಂಕವನ್ನು ಶೇ. 14.35ಕ್ಕೆ ಏರಿಸಲಾಗಿದೆ. ಇದರಲ್ಲಿ ಬೇಸಿಕ್ ಕಸ್ಟಮ್ಸ್ ಡ್ಯೂಟಿ ಶೇ. 10ರಷ್ಟು ಇದೆ. ಉಳಿದದ್ದು ಎಐಡಿಸಿ ತೆರಿಗೆಯಾಗಿರುತ್ತದೆ.

ಏನಿದು ಗೋಲ್ಡ್ ಮತ್ತು ಸಿಲ್ವರ್ ಫೈಂಡಿಂಗ್ಸ್?

ಚಿನ್ನ ಮತ್ತು ಬೆಳ್ಳಿ ಆಭರಣಗಳ ತಯಾರಿಕೆಯ ವೇಳೆ ಜೋಡಿಸಲು ಬಳಸುವ ಸ್ಕ್ರೂ, ಪಿನ್, ಹುಕ್ ಇತ್ಯಾದಿ ಪುಟ್ಟ ಬಿಡಿಭಾಗಗಳನ್ನು ಫೈಂಡಿಂಗ್ಸ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Investment: ದಿನಕ್ಕೆ ಕೇವಲ 170 ರೂ ಉಳಿಸಿ ಕೋಟ್ಯಾಧೀಶರಾಗುವುದು ಹೇಗೆ? ವ್ಯವಸ್ಥಿತವಾಗಿ ಹೂಡಿಕೆ ಮಾಡಿ

ಅಮೂಲ್ಯ ಲೋಹಗಳು ಯಾವುವು?

ಎಂಟು ಲೋಹಗಳನ್ನು ಸದ್ಯಕ್ಕೆ ಅಮೂಲ್ಯವೆಂದು ಪರಿಗಣಿಸಲಾಗಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ಪಲಾಡಿಯಂ, ರೋಡಿಯಂ, ರುದೇನಿಯಂ, ಇರಿಡಿಯಂ ಮತ್ತು ಆಸ್ಮಿಯಮ್, ಇವುಗಳು ಎಂಟು ಪ್ರೀಷಿಯಸ್ ಮೆಟಲ್ ಎನಿಸಿವೆ.

ಸ್ಪೆಂಟ್ ಕೆಟಲಿಸ್ಟ್ ಎಂದರೇನು?

ಕೆಟಲಿಸ್ಟ್ ಎಂಬುದು ಕೈಗಾರಿಕೆಗಳಲ್ಲಿ ಉತ್ಪನ್ನ ತಯಾರಿಸಲು ಬಳಸಲಾಗುವ ವಸ್ತು. ಒಂದು ಸಹಜ ಪ್ರಕ್ರಿಯೆಯನ್ನು ಹೆಚ್ಚು ವೇಗವಾಗಿ ಮಾಡಲು ಪುಷ್ಟಿ ಕೊಡುತ್ತದೆ. ಈ ರೀತಿ ಬಳಕೆಯಾಗಿ ಕೊನೆಗೆ ನಿರುಪಯುಕ್ತ ಎನಿಸುವ ವಸ್ತುವನ್ನು ಸ್ಪೆಂಟ್ ಕೆಟಲಿಸ್ಟ್ ಎನ್ನುತ್ತಾರೆ. ಇದರಲ್ಲಿ ಅಮೂಲ್ಯ ಲೋಹಗಳಿರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸ್ಪೆಂಟ್ ಕೆಟಲಿಸ್ಟ್​ಗಳನ್ನು ರೀಸೈಕಲ್ ಮಾಡಿ, ಅದರಿಂದ ಅಮೂಲ್ಯ ಲೋಹವನ್ನು ಹೊರತೆಗೆಯಲಾಗುತ್ತದೆ.

ಇದನ್ನೂ ಓದಿ: ವಿತ್ತೀಯ ಕೊರತೆ ಹೆಚ್ಚಬಾರದು, ಬಂಡವಾಳ ವೆಚ್ಚ ಕಡಿಮೆ ಆಗಬಾರದು: ಬಜೆಟ್​ನಲ್ಲಿ ಬ್ಯಾಲನ್ಸ್ ಮಾಡೋದೇ ಸವಾಲು

ಸರ್ಕಾರ ಆಮದು ಸುಂಕ ವಿಧಿಸಿದ್ದು ಯಾಕೆ?

ಗೋಲ್ಡ್ ಫೈಂಡಿಂಗ್ಸ್, ಸಿಲ್ವರ್ ಫೈಂಡಿಂಗ್ಸ್, ಸ್ಪೆಂಟ್ ಕೆಟಲಿಸ್ಟ್ ಇವೆಲ್ಲವೂ ಭಾರತದಲ್ಲೂ ಲಭ್ಯ ಇವೆ. ಇಲ್ಲಿಯ ಸ್ಥಳೀಯ ಉದ್ಯಮವನ್ನು ರಕ್ಷಿಸಲು ಸರ್ಕಾರ ಆಮದು ಸುಂಕವನ್ನು ಹೆಚ್ಚಿಸುವ ನಿರ್ಧಾರ ಮಾಡಿದೆ. ಜೊತೆಗೆ ಸರ್ಕಾರಕ್ಕೂ ಹೆಚ್ಚು ಆದಾಯ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ